ಅಕ್ಕಿ ನೀಡಿದ್ದ ಜೋಡಿಯಿಂದ ಕೊರೋನಾ ವಾರಿಯರ್ಸ್‌ಗೆ 10 ಸಾವಿರ ಮಾಸ್ಕ್, ಅಮೂಲ್ಯಾ-ಜಗದೀಶ್ ಮಾದರಿ

First Published Apr 22, 2020, 10:33 PM IST

ಕೊರೋನಾ ವೈರಸ್ ಅದೆಷ್ಟು ಸಂಕಟಗಳನ್ನು ತಂದಿರಿಸಿದೆ. ಸೆಲೆಬ್ರಿಟಿಗಳು-ಸಂಘ ಸಂಸ್ಥೆಗಳ ಜನರ  ನೆರವಿಗೆ ಧಾವಿಸಿ ಬಂದಿವೆ. ಸೆಲಬ್ರಿಟಿ ದಂಪತಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಟಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಕೊರೋನಾ ವಾರಿಯರ್ಸ್ ಗೆ ಮಾಸ್ಕ್ ತಯಾರಿಸಿ ನೀಡಿದ್ದಾರೆ.

ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಹ ಸ್ಥಿತಿ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಸುರಕ್ಷಿತ ಉಪಕರಣಗಳು ಬೇಕಿದೆ.
undefined
ಈ ದಂಪತಿ ಖುದ್ದಾಗಿ ನಿಂತು ಕೊರೋನಾ ವಾರಿಯರ್ಸ್ ಗೆ ನೆರವು ನೀಡುತ್ತಿದ್ದಾರೆ.
undefined
ಆರ್ ಎಸ್ ಎಸ್ ಮೂಲಕ ಟನ್ ಅಕ್ಕಿ ದಾನ ಮಾಡಿದ್ದ ಅಮೂಲ್ಯ-ಜಗದೀಶ್ ಈಗ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.
undefined
ಸದ್ಯ ಮಾಸ್ಕ್‌ಗಳ ಅವಶ್ಯಕತೆ ಇದ್ದು, ಅದರತ್ತ ಗಮನ ನೀಡಿದ್ದಾರೆ ಅಮೂಲ್ಯ ಜಗದೀಶ್. ಅದಕ್ಕಾಗಿ ಈಗಾಗಲೇ 10 ಸಾವಿರ ಮಾಸ್ಕ್‌ ತಯಾರಿಸುವ ಪಣ ತೊಟ್ಟಿದ್ದಾರೆ.
undefined
ಇದೊಂದು ಅಳಿಲು ಸೇವೆ ಮಾಡಬೇಕು ಎಂದು ಮನದಟ್ಟು ಮಾಡಿಕೊಂಡು ಕೆಲಸ ಆರಂಭಿಸಿದ್ದೇವೆ ಎನ್ನುತ್ತಾರೆ ಜಗದೀಶ್.
undefined
ರಾಜರಾಜೇಶ್ವರಿ ನಗರದ ಸುತ್ತಮುತ್ತ ಇರುವ 25ಕ್ಕೂ ಹೆಚ್ಚು ಮಹಿಳಾ ಟೈಲರ್‌ಗಳು ಮನೆಯಿಂದಲೇ ಬಟ್ಟೆ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.
undefined
ಜಗದೀಶ್ ಪ್ರಾಣಿ ಪ್ರೀತಿ
undefined
ಸಂಕಷ್ಟದಲ್ಲಿ ಇರುವ ಟೈಲರ್ ಗಳಿಗೂ ಇದು ಆಸರೆಯಾಗಲಿದೆ.
undefined
ಸ್ಟಾರ್ ದಂಪತಿಯ ಮಾದರಿ ಕೆಲಸಗಳು ಹೀಗೆ ಮುಂದುವರಿಯಲಿ ಎಂದು ಹಾರೈಸೋಣ..
undefined
click me!