BBK9 ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ; ಸೀರೆ ಧರಿಸಿ ಮಳೆಯಲ್ಲಿ ಪೂಲ್‌ಗೆ ಜಂಪ್ ಮಾಡಿದ ಸಾನ್ಯಾ!

Published : Oct 18, 2022, 10:14 AM IST

ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡಿಗೆ ಕುಣಿದು ಕುಪ್ಪಳಿಸಿದ ಸಾನ್ಯಾ ಐಯರ್. ನೀವೇ ನಮ್ಮ ಹೀರೋಯಿನ್‌ ಎಂದ ನೆಟ್ಟಿಗರು...

PREV
17
 BBK9 ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ; ಸೀರೆ ಧರಿಸಿ ಮಳೆಯಲ್ಲಿ ಪೂಲ್‌ಗೆ ಜಂಪ್ ಮಾಡಿದ ಸಾನ್ಯಾ!

ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಬಾಲನಟಿಯಾಗಿ ಬಣ್ಣದ ಜರ್ನಿ ಆರಂಭಿಸಿದ ಸಾನ್ಯಾ ಐಯರ್ ಬಿಗ್ ಬಾಸ್ ಓಟಿಟಿ ಮತ್ತು ಬಿಗ್ ಬಾಸ್ ಸೀಸನ್ 9ರ ಮೂಲಕ ಬೆಳ್ಳಿ ತೆರೆಗೆ ಬಿಗ್ ಕಮ್ ಬ್ಯಾಕ್ ಕೊಟ್ಟಿದ್ದಾರೆ. 

27

ಓಟಿಟಿ ಬಿಬಿನಲ್ಲಿ 15 ಸ್ಪರ್ಧಿಗಳಲ್ಲಿ ಅತಿ ಹೆಚ್ಚು ವೋಟ್ ಪಡೆದು ನಾಲ್ಕನೇ ಸ್ಥಾನ ಪಡೆದು ಟಿವಿ ಸೀರಿಸ್‌ 9ಕ್ಕೆ ಎಂಟ್ರಿ ಕೊಟ್ಟರು. ಈಗ ಟಫ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

37

ಬಿಬಿ 9 ನಾಲ್ಕನೇ ವಾರ ಆರಂಭವಾಗಿದೆ. ಮಳೆಗಾಲ ಆಗಿರುವ ಕಾರಣ ಸ್ಪರ್ಧಿಗಳು ಡ್ಯಾನ್ಸ್ ಮಾಡಬೇಕು ಹಾಕು ಹಾಕಿ ಅಂತ ಡಿಮ್ಯಾಂಡ್ ಮಾಡುತ್ತಿದ್ದರು.

47

 ಬಿಬಿ ಮನೆಯಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡು ಪ್ಲೇ ಮಾಡಲಾಗಿತ್ತು. ಈ ಹಾಡಿಗೆ ಹಳದಿ ಸೀರೆಯಲ್ಲಿ ಸಾನ್ಯಾ ಡ್ಯಾನ್ಸ್‌ ಮಾಡಿದ್ದಾರೆ. ಅದರಲ್ಲೂ ಪೂಲ್‌ ಸೈಡ್‌ ಡ್ಯಾನ್ಸ್‌ ವೈರಲ್ ಆಗುತ್ತಿದೆ. 

57

ಪ್ರತಿಯೊಬ್ಬ ಸ್ಪರ್ಧಿ ಜೊತೆಗೆನೂ ಡ್ಯಾನ್ಸ್‌ ಮಾಡಿದ್ದಾರೆ ಸಾನ್ಯಾ. ಸಾನ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಅಪ್ಲೋಡ್ ಆಗಿದ್ದು ಈ ಮೂಲಕ ವೋಟ್‌ ಕೇಳಲಾಗುತ್ತಿದೆ. 

67

ಟಿವಿ ಸೀಸನ್ ಆರಂಭವಾಗಿ ನಾಲ್ಕು ವಾರಗಳು ಆಗಿದೆ, ನಾಲ್ಕು ವಾರವೂ ಸಾನ್ಯಾ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ಟಫ್ ಫೈಟರ್ ಆಗಿರುವ ಕಾರಣ ಅತಿ ಹೆಚ್ಚು ವೋಟ್ ಪಡೆದು ಸೇಫ್ ಆಗುತ್ತಿದ್ದಾರೆ.

77

ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ನಡುವೆ ಓಟಿಟಿಯಿಂದಲ್ಲೂ ಕುಚು-ಕುಚು ನಡೆಯುತ್ತಿತ್ತು. ಇವರಿಬ್ಬರ ತುಂಟಾಟ ತಮಾಷೆ ನೆಟ್ಟಿಗರಿಗೆ ಇಷ್ಟವಾಗಿದೆ ಆದರೆ ಕ್ಯಾಪ್ಟನ್ ರೂಮ್‌ನಲ್ಲಿ ನಡೆದ ಘಟನೆಯಿಂದ ಕೊಂಚ ಬೇಸರ ವ್ಯಕ್ತವಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories