‘ಅಂಬುಜಾ ಟ್ರೇಲರ್ ಕೊನೆಯಲ್ಲಿ ನಾನು ಚಾಕು ಹಾಕೋ ಸೀನ್ ಬರುತ್ತೆ, ನಾನ್ ಚಾಕು ಹಾಕ್ಬೇಕು ಅಂದುಕೊಂಡಿದ್ದು ನಮ್ ಡೈರೆಕ್ಟರಿಗೇ. ಅಷ್ಟುಕಾಟ ಕೊಟ್ಟಿದ್ದಾರೆ.
27
ನೈಟ್ ಶೂಟಿಂಗ್ ಇಲ್ವೇ ಇಲ್ಲ ಅಂತ ಹೇಳಿ ಆಲ್‌ಮೋಸ್ಟ್ ಎಲ್ಲಾ ಭಾಗವನ್ನೂ ನೈಟಲ್ಲೇ ಶೂಟ್ ಮಾಡಿದ್ದಾರೆ. ಮದುವೆ ಆದ್ಮೇಲೆ ಸುಮಾರು 40 ದಿನ ನೈಟ್ ಶೂಟ್ ಗೊತ್ತಾ?’
37
ತಮ್ಮದೇ ಧಾಟಿಯಲ್ಲಿ ಹೀಗಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದು ಶುಭಾ ಪೂಂಜಾ. ‘ಅಂಬುಜ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕಿ ಶುಭಾ ಮಾತನಾಡುತ್ತಿದ್ದರು.
47
‘ಇದರಲ್ಲಿ ಕ್ರೈಮ್ ರಿಪೋರ್ಟರ್ ಪಾತ್ರ. ಈ ಪಾತ್ರಕ್ಕಾಗಿ ಯಾವ ಹೋಂ ವರ್ಕ್ ಅನ್ನೂ ಮಾಡಿಲ್ಲ. ಡೈರೆಕ್ಟರ್ ಹೇಳಿದ ಹಾಗೆ ನಟಿಸಿದ್ದೀನಿ’ ಎಂದು ಶುಭಾ ಹೇಳಿದರು.
57
ಲಂಬಾಣಿ ಹೆಣ್ಣುಮಗಳ ಪಾತ್ರದಲ್ಲಿ ನಟಿಸಿದ ರಜನಿ ಮಾತನಾಡಿ, ‘25 ಕೆಜಿ ತೂಗುವ ಲಂಬಾಣಿ ಉಡುಗೆ ಹೊತ್ತು ಇಡೀ ದಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು ಮರೆಯಲಾಗದ ಅನುಭವ.
67
ಚಿಕ್ಕವಳಿರುವಾಗ ಬಿ ಜಯಶ್ರೀ ಹಾಡನ್ನು ಅನುಕರಿಸುತ್ತಿದ್ದೆ. ಈ ಚಿತ್ರದ ನನ್ನ ಪಾತ್ರಕ್ಕೆ ಅವರೇ ಹಾಡಿರುವುದು ಬಹಳ ಖುಷಿ ಕೊಟ್ಟಿದೆ’ ಎಂದರು.ಈ ಪಾತ್ರಕ್ಕಾಗಿ ಗದಗದ ಲಂಬಾಣಿ ತಾಂಡಾಕ್ಕೆ ಭೇಟಿ ಕೊಟ್ಟು ಅವರ ಬದುಕಿನ ಬಗ್ಗೆ ತಿಳಿದುಕೊಂಡಿದ್ದೇನೆ.
77
ನಿರ್ದೇಶಕ ಶ್ರೀನಿ ಹನುಮಂತರಾಜು, ‘ಇದು ನೈಜ ಘಟನೆ ಆಧರಿತ ಕ್ರೈಂ ಹಾರರ್ ಥ್ರಿಲ್ಲರ್ ಚಿತ್ರ’ ಎಂದರು. ನಿರ್ಮಾಪಕ ಕಾಶಿನಾಥ್, ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್, ನಟ ದೀಪಕ್ ಸುಬ್ರಹ್ಮಣ್ಯ, ಹಾಸ್ಯ ನಟ ಗೋವಿಂದೇ ಗೌಡ ಉಪಸ್ಥಿತರಿದ್ದರು.