ಕಾಂತಾರ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಬೇರೆ ಬೇರೆ ಭಾಷೆಯಿಂದ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಪ್ರತಿಯೊಂದು ಪಾತ್ರ ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಕಾಂತಾರದ ಅನೇಕ ಪಾತ್ರಗಳಲ್ಲಿ ಶೀಲಾ ಪಾತ್ರ ಕೂಡ ಒಂದು.
ಸುಂದರನ ಪತ್ನಿ ಶೀಲಾ ಪಾತ್ರ ಮರೆಯಲು ಸಾಧ್ಯನಾ. ಹಲ್ಲು ಉಬ್ಬು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಮತ್ಯಾರು ಅಲ್ಲ ಚಂದ್ರಕಲಾ ಭಟ್. ಶೀಲಾ ಪಾತ್ರ ನೋಡಿದವರಿಗೆ ಅವರೇ ಚಂದ್ರಕಲಾ ಭಟ್ ಅಂತ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಲುಕ್ ಬದಲಾವಣೆ ಮಾಡಲಾಗಿತ್ತು.
ಹಲ್ಲು ಉಬ್ಬಿ ಶೀಲಾ ಯಾರೆಂದು ಹುಡುಕುತ್ತಿದ್ದರು. ಕೊನೆಗೂ ಶೀಲಾ ಸಿಕ್ಕಿದ್ದಾರೆ. ಅವರ ರಿಯಲ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶೀಲಾ ಅವರೇನಾ ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.
ಅಂದಹಾಗೆ ನಟಿ ಚಂದ್ರಕಲಾ ಭಟ್ ಹೇಳಬೇಕಾದರೆ, ರಂಗಭೂಮಿ ಕಲಾವಿದೆ. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯ ಕಂಡು ರಕ್ಷಿತ್ ಶೆಟ್ಟಿ ಅವರು ಶಾರ್ಟ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. ಬಳಿಕ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.
Kantara
ನಟಿ ಚಂದ್ರಕಲಾ ಅವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಮೀರು ಮಾರುವ ಮಹಿಳೆ ಪಾತ್ರದಲ್ಲಿ ನಟಿಸಿದ್ದರು. ನಟಿ ತಾರಾ ಜೊತೆ ತೆರೆಹಂಚಿಕೊಂಡಿದ್ದರು. ಬಳಿಕ ರಿಷಬ್ ಶೆಟ್ಟಿ ಅವರ ರಿಕ್ಕಿ ಸಿನಿಮಾದಲ್ಲೂ ನಟಿಸಿದರು. ಕಟಕ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಚಂದ್ರಕಲಾ ಅವರು ಕಾಂತಾರ ಮೂಲಕ ಸದ್ದು ಮಾಡುತ್ತಿದ್ದಾರೆ.
Kantara
ಕಾಂತಾರ ಸಿನಿಮಾ ಮತ್ತು ಪಾತ್ರದ ಬಗ್ಗೆ ನಟಿ ಚಂದ್ರಕಲಾ ಭಟ್ ಅವರು ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿದ್ದಾರೆ. ಬೊಂಬಾಟ್ ಸಿನಿಮಾ ವಾಹಿನಿ ಜೊತೆ ಮಾತನಾಡಿ ಅನೇಕ ವಿಚಾರ ರಿವೀಲ್ ಮಾಡಿದ್ದಾರೆ. 'ಕಾಂತಾರ ಸಿನಿಮಾ ತಂಡದಿಂದ ಮೊದಲು ಕಾಲ್ ಬಂತು. ಫಿಲ್ಮ್ ಇದೆ ಮಾಡ ಬಹುದಾ ಎಂದು ಕೇಳಿದರು. ಓಕೆ ಅಂತ ಹೇಳಿದೆ. ಅನೇಕ ದಿನಗಳ ನಂತರ ಮತ್ತೆ ಒಬ್ಬರು ಕಾಲ್ ಮಾಡಿ ಕುಂದಾಪುರಕ್ಕೆ ಬರಲಿಕ್ಕೆ ಹೇಳಿದರು. ಫೋನ್ ಮಾಡಿ ನಿಮ್ಮ ಹಲ್ಲು ಒಮ್ಮೆ ಚೆಕ್ ಮಾಡಬೇಕು ಎಂದರು. ನನಗೆ ಶಾಕ್ ಆಯ್ತು. ನನ್ನ ಹಲ್ಲು ಸರಿ ಇದೆ ಯಾಕೆ ಅಂತ. ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು. ನನಗೆ ಹಲ್ಲು ಸೆಟ್ ರೆಡಿ ಮಾಡಿಸಿದ್ದರು. ಯಾವ ಪಾತ್ರ ಅಂತ ಭಯ ಇತ್ತು. ಒಳ್ಳೆ ಪಾತ್ರ ಇದೆ ಅಂತ ಹೇಳಿದ್ರು' ಎಂದು ಹೇಳಿದ್ದಾರೆ.
'ಶೂಟಿಂಗ್ ಹೋಗುವಾಗ ಹಲ್ಲು ಸೆಟ್ ತೆಗೆದು ಇಟ್ಟು ಹೋಗುತ್ತಿದ್ದೆ. ಆಗ ಯಾರು ನನ್ನನ್ನು ಗುರುತು ಹಿಡಿತಿರಲಿಲ್ಲ. ನಾನು ಕೂಡ ನಟಿ ಅಂತ ಯಾರಿಗೂ ಗೊತ್ತಾಗುತ್ತಿರಲಿಲ್ಲ. ನನಗೆ ತುಂಬಾ ಜನ ತಮಾಷೆ ಮಾಡುತ್ತಿದ್ದರು. ಅದೂ ನನಗೆ ಗೊತ್ತಾಗುತ್ತಿತ್ತು' ಎಂದು ಶೂಟಿಂಗ್ ಅನುಭವ ಬಿಚ್ಚಿಟ್ಟರು.
'ಏನಿಲ್ಲ ನನ್ನ ತಲೆ ಕೂದಲು ಸ್ವಲ್ಪ ಉದುರಿದಿಯಾ, ಕಾಡಲ್ಲಿ ಯಾವ ಸೊಪ್ಪು ಅದು? ಅಂತ ತುಂಬಾ ಜನ ಈ ಪ್ರಶ್ನೆ ಕೇಳುತ್ತಿದ್ದಾರೆ' ಎಂದು ತನ್ನ ಸಿನಿಮಾದ ಅನುಭವ ಬಿಚ್ಚಿಟ್ಟಿದ್ದಾರೆ.