ಬಾಲ್ಯದ ಫೇವರಿಟ್ ಆಟ ಕಣ್ಣಾಮುಚ್ಚಾಲೆ: ನಟಿ ಧನ್ಯಾ ರಾಮ್‌ಕುಮಾರ್‌ ಬಾಲ್ಯ ಹೀಗಿತ್ತು!

First Published | Nov 14, 2024, 5:03 PM IST

‘ನೀನು ಹುಡುಗಿ, ಏನು ಹುಡುಗರ ಜೊತೆ ಆಟ ನಿಂದು?’ ಅಂತ ಅಮ್ಮನ ತಕರಾರು. ಹುಡುಗರು ಆಡಬಹುದು. ನಾನ್ಯಾಕೆ ಆಡಬಾರದು ಅನ್ನೋ ಪ್ರಶ್ನೆ ನನ್ನದು. 

ಅದು ಬೇಸಿಗೆ ರಜೆ ಇರಲಿ, ದೀಪಾವಳಿ ರಜೆ ಇರಲಿ, ಇಲ್ಲವೇ ವರ್ಷದ ಕೊನೆಯ ಕ್ರಿಸ್‌ಮಸ್ ಹಾಲಿಡೇ ಆಗಿರಲಿ.. ರಜೆ ಬಂದರೆ ಸಾಕು, ನಾವಷ್ಟೂ ಜನ ಕಸಿನ್ಸ್ ಸದಾಶಿವ ನಗರದಲ್ಲಿದ್ದ ತಾತ - ಅಜ್ಜಿ ಮನೆಗೆ ಅಂದರೆ ಡಾ ರಾಜ್‌ಕುಮಾರ್ ಮನೆಗೆ ಹೊರಟು ಬಿಡುತ್ತಿದ್ದೆವು. 

ಇಡೀ ದಿನ ಆಟ. ನಾನು ಹುಡುಗರ ಜೊತೆಗೆ ಮನೆ ಹೊರಗೇ ಆಡುತ್ತಿದ್ದದ್ದು. ರಜೆ ಮುಗಿಯೋಷ್ಟರಲ್ಲಿ ಮೈ ಕೈ ಎಲ್ಲ ಸುಟ್ಟು ಕರ್ರಗಾಗ್ತಿತ್ತು. ‘ನೀನು ಹುಡುಗಿ, ಏನು ಹುಡುಗರ ಜೊತೆ ಆಟ ನಿಂದು?’ ಅಂತ ಅಮ್ಮನ ತಕರಾರು. ಹುಡುಗರು ಆಡಬಹುದು.

Tap to resize

ನಾನ್ಯಾಕೆ ಆಡಬಾರದು ಅನ್ನೋ ಪ್ರಶ್ನೆ ನನ್ನದು. ಅಂಥಾ ಚಿಂತನೆಯೇ ನನ್ನನ್ನು ಇಲ್ಲೀವರೆಗೆ ತಂದು ನಿಲ್ಲಿಸಿದೆ. ಬಾಲ್ಯದ ಫೇವರಿಟ್ ಆಟ ಕಣ್ಣಾಮುಚ್ಚಾಲೆ. ಅದು ಬಿಟ್ಟರೆ ಹೆಲ್ಪ್‌ ಸಿಸ್ಟರ್ಸ್‌ ಅನ್ನೋ ಆಟ. 

ಹಿಡಿಯೋರು ಒಬ್ರಿರ್ತಾರೆ. ಅವರಿಂದ ತಪ್ಪಿಸಿಕೊಂಡು ಓಡಬೇಕು, ಇನ್ನೇನು ಹಿಡೀತಾರೆ ಅನ್ನುವಾಗ ಇನ್ನೊಬ್ಬರ ಕೈ ಹಿಡೀಬೇಕು. ಇಬ್ಬರು ಜೊತೆಗಿದ್ದು ಮುಟ್ಟಿದರೆ ಔಟ್ ಇಲ್ಲ. ಈ ಥರದ ಆಟಗಳನ್ನೆಲ್ಲ ಆಡ್ತಿದ್ವಿ.

ಸದ್ಯಕ್ಕೆ ನಟನೆಯಲ್ಲಿ ಬ್ಯುಸಿ ಇದ್ದೀನಿ. ಬಿಡುವಿಲ್ಲದೇ ಕೆಲಸ ಮಾಡುತ್ತಲೇ ಇರಬೇಕು ಅನ್ನೋದು ನನ್ನ ಆಸೆ. ಸಿನಿಮಾ, ಆ್ಯಡ್ ಶೂಟ್‌ ಅಂತ ಯಾವಾಗ್ಲೂ ಬ್ಯುಸಿ ಆಗಿರ್ತೀನಿ. 

ಈ ನಡುವೆ ಬೇರೆ ವಿಚಾರಗಳತ್ತ ಗಮನ ಹರಿಸಿಲ್ಲ. ನಿರ್ದೇಶನದ ಆಸಕ್ತಿ ಇದೆ. ಆದರೆ ಅದಕ್ಕಿನ್ನೂ ಬಹಳ ದೂರ ಇದೆ. ಅದು ಬಿಟ್ಟರೆ ಕವಿತೆ ಬರೆಯೋದು ಇಷ್ಟ. ಈಗಾಗಲೇ ಒಂದಿಷ್ಟು ಕವಿತೆ ಬರೆದಿದ್ದೀನಿ. ಕೆಲವೊಂದನ್ನು ಹಾಡಿಯೂ ಇದ್ದೀನಿ.

Latest Videos

click me!