ಮತ್ತೊಂದು ತಮಿಳು ಸಿನಿಮಾದಲ್ಲಿ ಅವಕಾಶ ಪಡೆದ ಚೈತ್ರಾ ಆಚಾರ್… ಯಾರ ದೃಷ್ಟಿಯೂ ಬೀಳದಿರಲಿ ಅಂದ್ರು…

Published : Jul 15, 2024, 05:45 PM IST

ಕನ್ನಡ ಸಿನಿಮಾಗಳಲ್ಲಿ ಅಧ್ಬುತವಾಗಿ ನಟಿಸುವ ಮೂಲಕ ಜನಮನ ಗೆದ್ದ ನಟಿ ಚೈತ್ರಾ ಜೆ ಆಚಾರ್, ಇದೀಗ ತಮಿಳಿನ ಮತ್ತೊಂದು ಸಿನಿಮಾದಲ್ಲೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.   

PREV
17
ಮತ್ತೊಂದು ತಮಿಳು ಸಿನಿಮಾದಲ್ಲಿ ಅವಕಾಶ  ಪಡೆದ ಚೈತ್ರಾ ಆಚಾರ್… ಯಾರ ದೃಷ್ಟಿಯೂ ಬೀಳದಿರಲಿ ಅಂದ್ರು…

ಕನ್ನಡ ಚಿತ್ರರಂಗದ ಮಲ್ಟಿ ಟ್ಯಾಲೆಂಟ್ ನಟಿ ಚೈತ್ರಾ ಆಚಾರ್ (Chaitra J Achar). ತಮ್ಮ ಹಾಡು, ಅಭಿನಯ, ಡ್ಯಾನ್ಸ್, ಪಟ ಪಟ ಅಂತ ಮಾತನಾಡುವ ಶೈಲಿ, ಬೋಲ್ಡ್ ನೆಸ್ ನಿಂದಾಗಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ ಇವರು. 
 

27

ವೆಬ್ ಸೀರೀಸ್ ನಲ್ಲಿ ನಟಿಸೋ ಮೂಲಕ ತಮ್ಮ ನಟನಾ ಜರ್ನಿ ಆರಂಭಿಸಿದ ಚೈತ್ರಾ ಆಚಾರ್ ಬಳಿಕಾ ಮಹಿರಾ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟರು. ತಲೆದಂಡ, ಟೋಬಿ, ಸಪ್ತಸಾಗರದಾಚೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚುವ ಮೂಲಕ ಅದ್ಭುತ ನಟಿ ಎನಿಸಿಕೊಂಡರು. 
 

37

ಇನ್ನು ಕನ್ನಡದಲ್ಲಿ ಸ್ಟ್ರಾಬೆರ್ರಿ, ಹ್ಯಾಪಿ ಬರ್ತ್ ಡೇ ಟು ಮಿ (Happy birthday to me), ಉತ್ತರಕಾಂಡ ಸಿನಿಮಾಗಳಲ್ಲಿ ನಟಿಸಿ ಬಿಡುಗಡೆಗೆ ಕಾಯ್ತಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ತಮ್ಮ ಬೋಲ್ಡ್ ಫೊಟೋಗಳ ಮೂಲವೇ ಸುದ್ದಿ ಮಾಡ್ತಿರ್ತಾರೆ. 
 

47

ಈ ಬಾರಿ ಸಿಂಪಲ್ ಆಗಿ ಸೀರೆಯುಟ್ಟು ವಿವಿಧ ಭಂಗಿಯಲ್ಲಿ ಚೇರ್ ಮೇಲೆ ಕುಳಿತು ಫೋಟೋ ಶೂಟ್ ಮಾಡಿಸಿಕೊಂಡಿರುವ ಚೈತ್ರಾ ಆಚಾರ್ ಯಾರ ದೃಷ್ಟಿಯೂ ಬೀಳದಿರಲಿ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
 

57

 ಕನ್ನಡದ ಆಲಿಯಾ ಭಟ್ ಎಂದೇ ಖ್ಯಾತಿ ಪಡೆದಿರೋ ಚೈತ್ರಾ ತಮಿಳಿನಲ್ಲಿ ಮಿಂಚಲು ರೆಡಿಯಾಗ್ತಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರ ಮನ ಸೆಳೆದ ಸ್ಯಾಂಡಲ್ ವುಡ್ ನ (Sandalwood) ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್, ಇದೀಗ ಕನ್ನಡದ ಜೊತೆ ತಮಿಳಿನಲ್ಲೂ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. 
 

67

ಇತ್ತೀಚೆಗಷ್ಟೆ ನಟಿ ತಮಿಳಿನಿಂದ ಅವಕಾಶಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದರು. ಈಗಾಗಲೇ ಒಂದು ಸಿನಿಮಾ ಒಪ್ಪಿಕೊಂಡಿರೋದಾಗಿ ತಿಳಿಸಿದ್ದರು. ಇದೀಗ ಸಿದ್ಧಾರ್ಥ್ ಜೊತೆಗಿನ ಸಿನಿಮಾದಲ್ಲೂ ಚೈತ್ರಾ ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. 
 

77

ಸಿದ್ದಾರ್ಥ್ ನ 40ನೇ ಚಿತ್ರದಲ್ಲಿ ಚೈತ್ರಾ ಆಚಾರ್ ಹಿರಿಯ ನಟ ಶರತ್ ಕುಮಾರ್, ದೇವಯಾನಿ, ಸಿದ್ದಾರ್ಥ್ ಜೊತೆ ನಟಿಸಲಿದ್ದಾರೆ. ಈ ಚಿತ್ರ ಈಗಾಗಲೇ ಸೆಟ್ಟೇರಿದೆ. ಕನ್ನಡಿಗರಿಗೆ ತನ್ನ ಅಭಿನಯದ ಮೂಲಕ ಮೋಡಿ ಮಾಡಿದ ನಟಿ ತಮಿಳಿನಲ್ಲಿ ಮೋಡಿ ಮಾಡಲಿರುವರೋ ಕಾದು ನೋಡಬೇಕು. 
 

Read more Photos on
click me!

Recommended Stories