ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ.. ಧನುಷ್ ಚಿತ್ರದಿಂದ ಚೈತ್ರಾ ಆಚಾರ್ ಔಟ್ ಆಗಿದ್ದೇಕೆ? ಇಲ್ಲಿದೆ ಆ ಸೀಕ್ರೆಟ್ ಕಹಾನಿ

Published : Apr 27, 2026, 11:13 AM IST

ನ್ಯಾಷನಲ್ ಅವಾರ್ಡ್ ವಿನ್ನರ್, ಕಾಲಿವುಡ್‌ನ ‘ಅಸುರ’ ಧನುಷ್ ಜೊತೆ ನಾಯಕಿಯಾಗಿ ನಟಿಸುವ ಬಂಪರ್ ಆಫರ್ ಚೈತ್ರಾ ಪಾಲಿಗೆ ಬಂದಿತ್ತು. ಆದರೆ, ವಿಧಿಯ ಆಟವೇ ಬೇರೆ ಇತ್ತು. ಶೂಟಿಂಗ್ ಹಂತದವರೆಗೂ ಹೋಗಿದ್ದ ಈ ಚಾನ್ಸ್ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದೇಕೆ? ಇಲ್ಲಿದೆ ಅಸಲಿ ಕಾರಣ…

PREV
17

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಪ್ರತಿಭಾವಂತ ನಟಿ ಎಂದರೆ ಅದು ಚೈತ್ರಾ ಜೆ ಆಚಾರ್. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಸುರಭಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಈ ಬೆಡಗಿ (Chaithra J Achar), ಈಗ ಪರಭಾಷಾ ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗುತ್ತಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಒಂದು ಬೇಸರದ ಸಂಗತಿಯೂ ಹೊರಬಿದ್ದಿದೆ.

27

ನ್ಯಾಷನಲ್ ಅವಾರ್ಡ್ ವಿನ್ನರ್, ಕಾಲಿವುಡ್‌ನ ‘ಅಸುರ’ ಧನುಷ್ ಜೊತೆ ನಾಯಕಿಯಾಗಿ ನಟಿಸುವ ಬಂಪರ್ ಆಫರ್ ಚೈತ್ರಾ ಪಾಲಿಗೆ ಬಂದಿತ್ತು. ಆದರೆ, ವಿಧಿಯ ಆಟವೇ ಬೇರೆ ಇತ್ತು. ಶೂಟಿಂಗ್ ಹಂತದವರೆಗೂ ಹೋಗಿದ್ದ ಈ ಚಾನ್ಸ್ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದೇಕೆ ಎಂಬ ಇಂಟರೆಸ್ಟಿಂಗ್ ವಿಚಾರ ಈಗ ಗಾಂಧಿನಗರದ ಗಲ್ಲಿಗಳಲ್ಲಿ ಚರ್ಚೆಯಾಗುತ್ತಿದೆ!

37

ಒಂದೇ ಒಂದು ‘ಲುಕ್’ ಮಾಡಿದ ಎಡವಟ್ಟು!

'ಪೋರ್ ತೊಳಿಲ್' ಎಂಬ ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ನೀಡಿದ್ದ ವಿಘ್ನೇಶ್ ರಾಜಾ, ಈಗ ಧನುಷ್ ಕಾಂಬಿನೇಶನ್‌ನಲ್ಲಿ 'ಕರ' (Kara) ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದಾಗ ಅವರಿಗೆ ಮೊದಲು ಕಣ್ಣಿಗೆ ಬಿದ್ದಿದ್ದೇ ನಮ್ಮ ಚೈತ್ರಾ ಆಚಾರ್. ಅವರ ನಟನೆಗೆ ಮಾರುಹೋಗಿದ್ದ ನಿರ್ದೇಶಕರು, ಚೈತ್ರಾ ಅವರನ್ನೇ ಫೈನಲ್ ಮಾಡಿ ಲುಕ್ ಟೆಸ್ಟ್ ಕೂಡ ಮಾಡಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಚೈತ್ರಾ ಇಂದು ಧನುಷ್ ಎದುರು ಡ್ಯುಯೆಟ್ ಹಾಡಬೇಕಿತ್ತು.

47

ಆದರೆ ಅಷ್ಟರಲ್ಲಿ ಒಂದು ಟ್ವಿಸ್ಟ್ ಎದುರಾಯಿತು! ಚೈತ್ರಾ ಆಚಾರ್ ಅವರು ಹಿರಿಯ ನಟ ಶಶಿಕುಮಾರ್ ಅವರ ಮಗ ನಟಿಸಿರುವ 'ಮೈ ಲಾರ್ಡ್' ಚಿತ್ರದಲ್ಲೂ ನಟಿಸಿದ್ದಾರೆ. ವಿಶೇಷವೇನೆಂದರೆ, 'ಮೈ ಲಾರ್ಡ್' ಚಿತ್ರದಲ್ಲಿ ಚೈತ್ರಾ ಅವರ ಗೆಟಪ್ ಹೇಗಿತ್ತೋ, ಅದೇ ರೀತಿಯ ಲುಕ್ 'ಕರ' ಚಿತ್ರಕ್ಕೂ ಬೇಕಿತ್ತಂತೆ. ಅಷ್ಟೇ ಅಲ್ಲ, ಧನುಷ್ ಅವರ 'ಕರ' ಚಿತ್ರಕ್ಕಿಂತ ಮೊದಲೇ 'ಮೈ ಲಾರ್ಡ್' ಬಿಡುಗಡೆಯಾಗುವ ಸಾಧ್ಯತೆ ಇತ್ತು. ಪ್ರೇಕ್ಷಕರಿಗೆ ನಾಯಕಿಯ ಲುಕ್‌ನಲ್ಲಿ ಹೊಸತನ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ವಿಘ್ನೇಶ್ ರಾಜಾ ಅನಿವಾರ್ಯವಾಗಿ ನಾಯಕಿಯನ್ನು ಬದಲಿಸಬೇಕಾಯಿತು.

57

ಮಲಯಾಳಂ ಬೆಡಗಿ ಮಮಿತಾ ಬೈಜು ಎಂಟ್ರಿ!

ಚೈತ್ರಾ ಆಚಾರ್ ಅವರಿಂದ ತೆರವಾದ ಆ ಸ್ಥಾನಕ್ಕೆ ಬಂದಿದ್ದೇ 'ಪ್ರೇಮಲು' ಚಿತ್ರದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಮಮಿತಾ ಬೈಜು. ಸಾಮಾನ್ಯವಾಗಿ ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮಮಿತಾ, ಈ ಸೀರಿಯಸ್ ಆಕ್ಷನ್ ಥ್ರಿಲ್ಲರ್ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ನಿರ್ದೇಶಕರಿಗಿತ್ತು. ಆದರೆ ಕಥೆ ಕೇಳಿದ ತಕ್ಷಣ ಮಮಿತಾ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

67

ಏಪ್ರಿಲ್ 30ಕ್ಕೆ 'ಕರ' ಅಬ್ಬರ!

ಧನುಷ್ ನಟನೆಯ ಈ 'ಕರ' ಸಿನಿಮಾ ಏಪ್ರಿಲ್ 30ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ಧನುಷ್ ಜೊತೆ ಸೂರಜ್ ವೆಂಜಾರಮೂಡು, ಜಯರಾಮ್, ಕರುಣಾಸ್ ಅಂತಹ ಘಟಾನುಘಟಿ ಕಲಾವಿದರಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

77

ಚೈತ್ರಾ ಆಚಾರ್ ಅವರಿಗೆ ಧನುಷ್ ಜೊತೆ ನಟಿಸುವ ಅವಕಾಶ ಮಿಸ್ ಆಗಿರಬಹುದು, ಆದರೆ ಅವರ ಪ್ರತಿಭೆಗೆ ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ದೊಡ್ಡ ಅವಕಾಶಗಳು ಸಿಗುವುದರಲ್ಲಿ ಸಂಶಯವಿಲ್ಲ. ಸದ್ಯಕ್ಕೆ ಕನ್ನಡದ ಈ ಕುವರಿ ಪರಭಾಷೆಯಲ್ಲಿ ತನ್ನ ಛಾಪು ಮೂಡಿಸಲು ರೆಡಿಯಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories