ಸ್ಯಾಂಡಲ್‌ವುಡ್ ನಟ ವಿ ರವಿಚಂದ್ರನ್ ನಟನೆಯ 'ಯುದ್ಧಕಾಂಡ (Yuddha Kaanda ) ಸಿನಿಮಾ ನಟಿಗೆ ಸಾಕಷ್ಟು ಅಭಿಮಾನಿಗಳಿದ್ದರು ಎಂಬುದನ್ನು ಮರೆಯುವ ಹಾಗಿಲ್ಲ. 'ಸೋಲೆ ಇಲ್ಲಾ, ನಿನ್ನ ಹಾಡು ಹಾಡುವಾಗ..'ಈ ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಈ ಹಾಡಿನಲ್ಲಿ ಹಾಗೂ ಸಿನಿಮಾದಲ್ಲಿ ನಟಿಸಿದ್ದ ನಟಿಯನ್ನು ಅದೆಷ್ಟೂ ಜನರು ಕನಸಿನಲ್ಲಿ ಮತ್ತೆ ಮತ್ತೆ ಕಂಡು ಪುಳಕಗೊಂಡವರು ಬಹಳಷ್ಟು ಜನರಿದ್ದಾರೆ. ಈ ನಟಿಯ ಮುದ್ದುಮುದ್ದಾಗ ಮುಖ, ಆದರೆ ಕತ್ತಿಯಂತಹ ಕಣ್ಣು ಹಾಗೂ ಮಾದಕ ಹಾಗೂ ಖಳನಾಯಕಿಯ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಈ ನಟಿಯ ವೈಯಕ್ತಿಕ ಜೀವನ ಮಾತ್ರ ತುಂಬಾ ಏಳು-ಬೀಳುಗಳ ಪಯಣ. ಹೆಚ್ಚಾಗಿ ಬಾಲಿವುಡ್‌ನಲ್ಲಿ ನಟಿಸುತ್ತಿದ್ದ ಈ ನಟಿ ಅಲ್ಲಿ ರಮೇಶ್ ತಲ್ವಾರ್ ಎಂಬವರ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ, ನಿರ್ಮಾಪಕ ಹಾಗೂ ನಿರ್ದೇಶಕ ಯಶ್ ಚೋಪ್ರಾ ಜತೆ ಈ ನಟಿ ಲವ್‌ಗೆ ಬಿದ್ದಿದ್ದರು.
ಯಶ್ ಚೋಪ್ರಾ ಇವರಿಗೆ ಬಂಗಲೆಯನ್ನೂ ನೀಡಿದ್ದರಂತೆ. ಅದನ್ನು ತಿಳಿದ ರಮೇಶ್ ತಲ್ವಾರ್ ನಟಿಯ ಜತೆ ಆಗಿದ್ದ ಎಂಗೇಝ್‌ಮೆಂಟ್ ಬ್ರೇಕಪ್ ಮಾಡಿಕೊಂಡರು. ಜತೆಗೆ ಯಶ್ ಚೋಪ್ರಾ ಜತೆಗಿನ ಸಂಬಂಧವೂ ಮುರಿದಬಿದ್ದ ಮೇಲೆ ರಾಜ್ ಸಿಪ್ಪಿ ಮೇಲೆ ಲವ್ ಆಯ್ತಂತೆ.
ಆದರೆ, ಈ ರಾಜ್ ಸಿಪ್ಪಿಗೆ ಅದಾಗಲೇ ಮದುವೆಯಾಗಿದೆ ಎಂದು ತಿಳಿದ ಈ ನಟಿ ಅವರ ಜೊತೆಗಿನ ಸಂಬಂಧವನ್ನೂ ಕಡಿದುಕೊಂಡು ಬಿಟ್ಟರು. ಇದೇ ನೋವಿನಲ್ಲಿದ್ದ ಈ ನಟಿ ಅಶೋಕ್ ತಾಕೇರಿಯಾ ಜತೆ ಮದುವೆ ಮಾಡಿಕೊಂಡರು.
ಈ ದಂಪತಿಗೆ ಇಬ್ಬರು ಮಕ್ಕಳೂ ಆದರು. ಆದರೆ ಇವರಿಬ್ಬರ ಮಧ್ಯೆ ಕೂಡ ಭಿನ್ನಾಭಿಪ್ರಾಯ ಮೂಡಿತು. ಆಗ ತಾವು ಗಂಡನಿಗೆ ಬುದ್ಧಿ ಕಲಿಸಲೇಬೇಕೆಂದು ಹಾಂಗ್‌ಕಾಂಗ್‌ನ ಕಿಕು ಎಂಬವರ ಜತೆ ಸಲುಗೆ ಬೆಳೆಸಿಕೊಂಡರಂತೆ.
ಈ ಸಂಗತಿ ಗೊತ್ತಾಗುತ್ತಿದ್ದಂತೆ ಗಂಡ ಅಶೋಕ್ ಇವರಿಗೆ ಡಿವೋರ್ಸ್ ಕೊಟ್ಟುಬಿಟ್ಟರು. ಬಳಿಕ ಈ ನಟಿ ಈಗಲೂ ಒಂಟಿಯಾಗಿಯೇ ಉಳಿದುಬಿಟ್ಟರು. ಹಾಗಿದ್ದರೆ ಯಾರೀಕೆ? ವೈಯಕ್ತಿಕ ಜೀವನದಲ್ಲಿ ಸದಾ ಸೋಲುಂಡು ನೋವನ್ನು ಅನುಭವಿಸಿದ ಈ ನಟಿ ಬೇರಾರೂ ಅಲ್ಲ, ಪೂನಂ ದಿಲ್ಲಾನ್.
ಹೌದು, ನಟಿ ಪೂನಂ ಧಿಲ್ಲಾನ್ ಅವರು ಹಿಂದಿ ಚಿತ್ರಗಳ ಹೊರತಾಗಿಯೂ ಕನ್ನಡವೂ ಸೇರಿದಂತೆ, ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಪೂನಂ ದಿಲ್ಲಾನ್ ನಾಯಕಿ ಹಾಗೂ ಮುಖ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ.
ಮಹಾ ಸುಂದರಿ ಎನ್ನುವಷ್ಟು ಚೆಂದವಿದ್ದ ಪೂನಂ, ಕಲಾವಿದೆಯಾಗಿ ಬೆಳೆಯುವ ಬದಲು ಮಾದಕ ನಟಿಯೆಂಬ ಪಟ್ಟಕ್ಕೆ ಸೀಮಿತವಾಗಿಬಿಟ್ಟರು. ಹೀಗಾಗಿ ಅವರ ಹೆಸರು ಮೇಲಿನ ಸ್ತರದ ನಟಿಯರ ಸಾಲಿನಲ್ಲಿ ಕೇಳಿ ಬಂದಿದ್ದು ಸ್ವಲ್ಪ ಕಡಿಮೆ ಎನ್ನಬಹುದು.
ಆದರೆ, ನಟಿ ಪೂನಂ ದಿಲ್ಲಾನ್ ಅವರನ್ನು ಒಮ್ಮೆ ತೆರೆಯ ಮೇಲೆ ಕಂಡವರು ಮರೆಯಲು ಸಾಧ್ಯವೇ ಇಲ್ಲ. ಯುದ್ಧಕಾಂಡ ಚಿತ್ರದಲ್ಲಿ ನಟ ರವಿಚಂದ್ರನ್ ಜೋಡಿಯಾಗಿ ಕಾಣಿಸಿಕೊಂಡಿರುವ ಈ ನಟಿಯನ್ನು ಕನ್ನಡ ಸಿನಿರಸಿಕರು ಮರೆಯಲು ಸಾಧ್ಯವೇ ಇಲ್ಲ.
ಈ ನಟಿಯ ಮುದ್ದುಮುದ್ದಾಗ ಮುಖ, ಆದರೆ ಕತ್ತಿಯಂತಹ ಕಣ್ಣು ಹಾಗೂ ಮಾದಕ ಹಾಗೂ ಖಳನಾಯಕಿಯ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಈ ನಟಿಯ ವೈಯಕ್ತಿಕ ಜೀವನ ಮಾತ್ರ ತುಂಬಾ ಏಳು-ಬೀಳುಗಳ ಪಯಣ. ಹೆಚ್ಚಾಗಿ ಬಾಲಿವುಡ್‌ನಲ್ಲಿ ನಟಿಸುತ್ತಿದ್ದ ಈ ನಟಿ ಅಲ್ಲಿ ರಮೇಶ್ ತಲ್ವಾರ್ ಎಂಬವರ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.