ಕೆಜಿಎಫ್ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಂಜಯ್ ದತ್ ದೊಡ್ಡ ಮಟ್ಟದ್ಲಲಿ ಸದ್ದು ಮಾಡಿದರು. ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಅಂದಹಾಗೆ ಅಧೀರ ಆಗಿ ಅಬ್ಬರಿಸಿದ್ದ ಸಂಜಯ್ ದತ್ ಈ ಬಾರಿ ಧ್ರುವ ಸರ್ಜಾ ಎದುರು ತೊಡೆತಟ್ಟಲು ಸಜ್ಜಾಗಿದ್ದಾರೆ.
ಖಡಕ್ ಖದರ್, ಭರ್ಜರಿ ಆಕ್ಷನ್, ಜಬರ್ದಸ್ತ್ ಡೈಲಾಗ್ ಹೊಡೆದು ಅಭಿಮಾನಿಗಳ ಹೃದಯ ಸಿಂಹಾಸದಲ್ಲಿ ಮನೆ ಮಾಡಿರೋ ಧ್ರುವ ಸರ್ಜಾ ಹಾಗೂ ದಿ ಶೋ ಮ್ಯಾನ್ ಜೋಗಿ ಪ್ರೇಮ್ ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಸಿದ್ಧವಾಗ್ತಿದೆ. ಈ ಸಿನಿಮಾಗಾಗಿ ಸಂಜಯ್ ದತ್ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ಪ್ರೇಮ್ ಸಂಜಯ್ ದತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನೇನಿದ್ರು ಅಧಿಕೃತ ಘೋಷಣೆಯೊಂದೆ ಬಾಕಿ. ಶೋ ಮ್ಯಾನ್ ಜೋಗಿ ಪ್ರೇಮ್ ಸಿನಿಮಾ ಅಂದ್ರೆನೇ ಹಾಗೆ ಸ್ಪೆಷಲ್ ಟ್ರೀಟ್ಮೆಂಟ್ ಒಂದನ್ನ ಇಟ್ಟಿರ್ತಾರೆ. ಲವ್, ಎಮೋಷನ್ ಸೂಪರ್ ಹಾಡುಗಳು ಮಾತ್ರ ಅಲ್ಲ, ಬಿಗ್ ಸ್ಟಾರ್ ಕಾಸ್ಟ್ ಅನ್ನ ತಮ್ಮ ಸಿನಿಮಾದಲ್ಲಿ ತೋರಿಸೋ ಪಂಟರ್ ಪ್ರೇಮ್
ಈಗ ಧ್ರುವನ ಸಿನಿಮಾಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದ ಟೈಟಲ್ ಇದೇ ತಿಂಗಳು 20ರಂದು ರಿಲೀಸ್ ಆಗುತ್ತಿದೆ. ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಸಂಜಯ್ ದತ್ ಆಗಮಿಸುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿದ್ದು ಇದೀಗ ಸಂಜಯ್ ದತ್ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಅಂದಹಾಗೆ ಧ್ರುವ ಸರ್ಜಾ ಸದ್ಯ ತಂದೆಯಾದ ಸಂಭ್ರಮದಲ್ಲಿದ್ದಾರೆ. ಇನ್ನು ಈಗಾಗಲೇ ಮಾರ್ಟಿನ್ ಸಿನಿಮಾದಲ್ಲಿ ನಿರತರಾಗಿರುವ ಧ್ರುವ ಈ ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಮ್ ಜೊತೆ ಸಿನಿಮಾ ಮಾಡಲಿದ್ದಾರೆ.