ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಈಗ ಬಾಡಿ ಟ್ರಾನ್ಸ್‌ಫಾರ್ಮ್ ಮಾಡಿಕೊಂಡಿದ್ದಾರೆ. ಶೈಲ್ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಿಗ್ ಬಾಸ್ ನಂತರ ಫುಡ್ ಟ್ರಕ್ ಮತ್ತು ಹೋಟೆಲ್ ಉದ್ಯಮದ ಕಡೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಶೈನ್ ಶೆಟ್ಟಿ ಆಗಾಗ ಒಂದೊಂದು ಸಿನಿಮಾ ಸಹಿ ಮಾಡುತ್ತಿದ್ದರು.
ಚಾಕೋಲೇಟ್ ಬಾಯ್ ರೀತಿ ಇದ್ದ ಶೈನ್ ಶೆಟ್ಟಿ ಈಗ ಮಾಸ್ ಬಾಯ್ ಆಗಿರುವುದು ಹೆಣ್ಣು ಮಕ್ಕಳಿಗೆ ಸಖತ್ ಇಷ್ಟವಾಗಿದೆ. ಸಾಕಷ್ಟು ಪಾಸಿಟಿವ್ ಕಾಮೆಂಟ್ ಬರ್ತಿದೆ.
83 ಕೆಜಿ ತೂಕವಿದ್ದ ಶೈನ್ ಶೆಟ್ಟಿ ಈಗ 67 ಕೆಜಿ ಆಗಿದ್ದಾರೆ. ಬರೋಬ್ಬರಿ 16 ಕೆಜಿ ಕಡಿಮೆ ಆಗಿದಲ್ಲದೆ 6 ಪ್ಯಾಕ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
'Victoru isnt defined by wins and losses, its defined by effort' ಎಂದು ಶೈನ್ ಶೆಟ್ಟಿ ಜಿಮ್ ಟ್ರೈನರ್ ಈ ರೀತಿ ಕ್ಯಾಪ್ಶನ್ ಕೊಟ್ಟಿದ್ದಾರೆ.
ಕಾಂತಾರ ಚಿತ್ರದಲ್ಲಿ ಶೈನ್ ಪಾತ್ರ ಮೆಚ್ಚುಗೆ ಪಡೆದಿದೆ. ಇದಾದ ಮೇಲೆ ಮಾಫಿಯಾ, ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ, ಜಸ್ಟ್ ಮ್ಯಾರಿಡ್ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿನಿಮಾಗೋಸ್ಕರ ಶೈನ್ ಶೆಟ್ಟಿ ಸಣ್ಣಗಾಗಿದ್ದಾರಾ ಅಥವಾ ಮದುವೆನಾ ಅನ್ನೋದು ಜನರ ಪ್ರಶ್ನೆ. ಈ ಟ್ರಾನ್ಸ್‌ಫಾರ್ಮೆಶನ್ ಬಗ್ಗೆ ಶೈನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Vaishnavi Chandrashekar