ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ ಈ ವರ್ಷ ಹುಟ್ಟುಹಬ್ಬವನ್ನು ಅನೇಕಲ್‌ನಲ್ಲಿ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ವಿಜಯ್ 49ನೇ ಹುಟ್ಟುಹಬ್ಬದ ಪ್ರಯುಕ್ತ ಆಗಮಿಸಿದ ಪ್ರತಿಯೊಬ್ಬ ಅಭಿಮಾನಿಗೂ ಭರ್ಜರಿ ಬಾಡೂಟ ಬಡಸಿದ್ದಾರೆ. ಅಲ್ಲದೆ ತಿನ್ನಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಅಣ್ಣ ಸಾಕು ಕಡಿಮೆ ಕಡಿಮೆ ಎನ್ನುತ್ತಿದ್ದ ಅಭಿಮಾನಿಗೆ ಊಟ ಎಲೆಗೆ ಬಿರಿಯಾನಿ ಬಡಸಿ ವಿಜಯ್ ಕೈ ತುತ್ತು ನೀಡಿದ್ದಾರೆ. ಸಂತಸದಲ್ಲಿ ಅಭಿಮಾನಿ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ.
ತಂದೆ- ತಾಯಿ ಸಮಾಧಿಗೆ ದೇವಸ್ಥಾನದ ಮಂಟಪವನ್ನು ಹೂಗಳಿಂದ ಅಲಂಕಾರ ಮಾಡಿಸಿದ್ದಾರೆ. ಅಲ್ಲಿಯೇ ವೇದಿಕೆ ನಿರ್ಮಾಣ ಮಾಡಿದ್ದಾರೆ. ಎಕರೆಗಟ್ಟಲೇ ಪೇಂಡಲ್ ಹಾಕಿ ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ.
ವಿಜಯ್ ಹುಟ್ಟುಹಬ್ಬದ ದಿನ ಭೀಮ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಎಲ್ಲೆಡೆ ಪೋಸ್ಟರ್ ಅಂಟಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್, ಅನ್ನ ಮತ್ತು ರಸಮ್ ಮಾಡಿಸಿದ್ದರು. ಸುಮಾರು ಮೂರು ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಎನ್ನಲಾಗಿದೆ.