Published : Aug 04, 2025, 11:36 AM ISTUpdated : Aug 04, 2025, 11:39 AM IST
ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಹೆರಲಿರುವ ನಟಿ ಭಾವನಾ ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಇದಾಗಲೇ ಹೆಣ್ಣು ಮಗುವಿನ ಹೆಸರನ್ನೂ ಡಿಸೈಡ್ ಮಾಡಿದ್ದಾರೆ ನಟಿ. ಅವರು ಹೇಳಿದ್ದೇನು?
ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಹೆರಲಿರುವ ನಟಿ ಭಾವನಾ ರಾಮಣ್ಣ (Bhavana Ramanna) ಸದ್ಯ ಸಕತ್ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ ಅದ್ಧೂರಿಯ ಸೀಮಂತ ಮಾಡಿಕೊಂಡಿದ್ದಾರೆ. ಇನ್ನೇನು ಮಕ್ಕಳ ಆಗಮನಕ್ಕೆ ನಟಿ ಸೇರಿದಂತೆ ಅವರ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟಕ್ಕೂ ಐವಿಎಫ್ ಮೂಲಕ ಹಲವಾರು ಮಂದಿ ಮಕ್ಕಳನ್ನು ಪಡೆಯುತ್ತಿದ್ದರೂ, ಭಾವನಾ ಸುದ್ದಿ ಮಾತ್ರ ಸಕತ್ ಸದ್ದು ಮಾಡುತ್ತಿರಲು ಕೆಲವು ಕಾರಣಗಳು ಇವೆ. ಮೊದಲನೆಯದ್ದು ಆಕೆ ಸೆಲೆಬ್ರಿಟಿ, ಇನ್ನೊಂದು ಆಕೆ ಅವಿವಾಹಿತೆ, ಮತ್ತೊಂದು ಮದುವೆಯಾಗಲು ಆಕೆ ಒಪ್ಪದೇ ಮಕ್ಕಳನ್ನು ಪಡೆಯಲು ಚಿಂತಿಸಿರುವುದು... ಇವೆಲ್ಲವೂ ಸೇರಿ ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಿದ್ದಾರೆ.
28
ಮದುವೆಯ ಬಗ್ಗೆ ಮಾತನಾಡಿದ್ದ ಭಾವನಾ
ಈ ಬಗ್ಗೆ ಇದಾಗಲೇ ನಟಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ನಿರ್ಧಾರವನ್ನು ಮಾಡಿದ್ಯಾಕೆ ಎನ್ನುವ ಬಗ್ಗೆಯೂ ಹೇಳಿದ್ದಾರೆ. 40 ವರ್ಷ ವಯಸ್ಸಿನ ಭಾವನಾ ಮದುವೆಯ ಬಗ್ಗೆ ತಾತ್ಸಾರ ಏಕೆ ಹೊಂದಿದ್ದಾರೆ ಎನ್ನುವ ಪ್ರಶ್ನೆಯೂ ಎದುರಾಗಿದ್ದು, ಅದಕ್ಕೂ ನಟಿ ಇದಾಗಲೇ ಉತ್ತರ ಕೊಟ್ಟಿಯಾಗಿದೆ.
38
ಮದುವೆಯ ಬಗ್ಗೆ ಮಾತನಾಡಿದ್ದ ಭಾವನಾ
ನನಗೆ ಸಂಗಾತಿ ಬೇಕೇ ಬೇಕು ಎನ್ನುವ ಮನಸ್ಥಿತಿ ಕೂಡ ಇಲ್ಲ. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳಲು ಒಳ್ಳೆಯ ಸ್ನೇಹಿತರು ಇದ್ದಾರೆ. ಅದಕ್ಕಾಗಿ ಇವೆಲ್ಲಾ ಬೇಕು ಎನ್ನಿಸುವುದಿಲ್ಲ ಎನ್ನುತ್ತಲೇ ಒಂದು ವೇಳೆ ಏನಾದರೂ ಮುಂದಿನ ದಿನಗಳಲ್ಲಿ ಹಾಗೆ ಆದರೆ ಆಗಲೂಬಹುದು ಎನ್ನುವ ಮೂಲಕ ಮದುವೆಯೇ ಆಗಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ಮದುವೆ ಆಗುತ್ತೇನೆ ಎಂದಿದ್ದಾರೆ.
ಸಾಮಾನ್ಯವಾಗಿ ಗರ್ಭಿಣಿಯಾದ ಬಳಿಕ ಅಪ್ಪ-ಅಮ್ಮ ಆಗುವವರು ತಮ್ಮ ಮಕ್ಕಳ ಹೆಸರು ಏನಿಡಬಹುದು ಎಂದು ಚರ್ಚಿಸುವುದು ಸರ್ವೇ ಸಾಮಾನ್ಯ. ಹುಟ್ಟುವ ಮಗು ಗಂಡೋ, ಹೆಣ್ಣೋ ಎಂದು ತಿಳಿದಿರದ ಕಾರಣ, ಎರಡೂ ಹೆಸರುಗಳನ್ನು ಹುಡುಕಿರುತ್ತಾರೆ. ಹೆಚ್ಚಿನವರು ನಕ್ಷತ್ರ, ರಾಶಿಗೆ ಅನುಗುಣವಾಗಿ ಹೆಸರನ್ನು ಇಟ್ಟರೂ ಕೊನೆಗೆ ಕರೆಯುವುದಕ್ಕಾಗಿ ಮುದ್ದಾದ ಹೆಸರುಗಳನ್ನು ಇಡಲು ಮೊದಲೇ ರೆಡಿಯಾಗಿರುತ್ತಾರೆ.
58
ಹೆಣ್ಣು ಮಗುವಿನ ಹೆಸರು ರೆಡಿ
ಅದೇ ರೀತಿ ಭಾವನಾ ಕೂಡ ಹೆಸರು ಏನು ಇಡಬೇಕು ಎಂದು ನಿಗದಿ ಮಾಡಿದ್ದಾರೆ. ಆದರೆ ಅವರಿಗೆ ಅವಳಿ ಮಕ್ಕಳಾಗುವುದು ಕನ್ಫರ್ಮ್ ಆಗಿದೆ. ಆದರೆ ಮಕ್ಕಳು ಗಂಡೋ, ಹೆಣ್ಣೋ ಅಥವಾ ಎರಡೂ ಗಂಡೋ, ಎರಡೂ ಹೆಣ್ಣೋ ಎನ್ನುವುದು ತಿಳಿಯಬೇಕಿದೆ.
68
ಹೆಣ್ಣು ಮಗುವಿನ ಹೆಸರು ರೆಡಿ
ಮಕ್ಕಳಿಗೆ ಏನೆಂದು ಹೆಸರು ಇಡುವಿರಿ ಎನ್ನುವ ಪ್ರಶ್ನೆಗೆ ಭಾವನಾ ಅವರು, ಸದ್ಯ ಹೆಣ್ಣುಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ (Rukmini) ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಗಂಡು ಮಗುವಿನ ಹೆಸರನ್ನು ಇನ್ನೂ ಯೋಚಿಸಿಲ್ಲ ಎಂದಿರೋ ನಟಿಗೆ ಮನಸ್ಸಿನಲ್ಲಿ ಒಂದಾದರೂ ಹೆಣ್ಣುಮಗು ಆಗಲಿ ಎನ್ನುವ ಕಾತರ ಇರುವುದು ತಿಳಿದಿದೆ.
78
ಐವಿಎಫ್ ಚಿಕಿತ್ಸೆ ನಡೆಯುವುದು ಹೇಗೆ?
ಇನ್ನು ಈ ಚಿಕಿತ್ಸೆ ಕುರಿತು ಹೇಳುವುದಾದರೆ, ಐವಿಎಫ್ ಪ್ರಕ್ರಿಯೆಯು ಸಾಮಾನ್ಯವಾಗಿ ಅಂಡಾಶಯದ ಪ್ರಚೋದನೆಯಿಂದ ಭ್ರೂಣ ವರ್ಗಾವಣೆಯವರೆಗೆ ಸುಮಾರು 4-6 ವಾರಗಳನ್ನು ತೆಗೆದುಕೊಳ್ಳುತ್ತದೆ. IVF ಪ್ರಕ್ರಿಯೆಯಲ್ಲಿ, ಮೊಟ್ಟೆಗಳನ್ನು ಉತ್ಪಾದಿಸಲು ಅಂಡಾಶಯಗಳನ್ನು ಉತ್ತೇಜಿಸಲು ಮಹಿಳೆಗೆ ಆರಂಭದಲ್ಲಿ ಕೆಲವಷ್ಟು ಔಷಧಿಗಳನ್ನು ನೀಡಲಾಗುತ್ತದೆ. ಮೊಟ್ಟೆಗಳು ಪಕ್ವವಾದ ನಂತರ, ಅವುಗಳನ್ನು ಅಂಡಾಶಯಗಳಿಂದ ಹೊರತೆಗೆಯಲಾಗುತ್ತದೆ.
88
ಐವಿಎಫ್ ಚಿಕಿತ್ಸೆ ನಡೆಯುವುದು ಹೇಗೆ?
ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ. ಫಲವತ್ತಾದ ಮೊಟ್ಟೆಗಳು ಭ್ರೂಣಗಳಾಗಿ ಬೆಳೆಯಲು ಅವಕಾಶ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ ಭ್ರೂಣಗಳನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಸುಮಾರು 10-14 ದಿನಗಳ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಲಾಗುತ್ತದೆ.