Mark ಚಿತ್ರದ 'ಮಸ್ತ್​ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್​ ಭರ್ಜರಿ ಸ್ಟೆಪ್​​

Published : Dec 24, 2025, 04:11 PM IST

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಹಾಡು ಜನಪ್ರಿಯವಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ, 'ಭಾರ್ಗವಿ ಎಲ್ಎಲ್​ಬಿ' ಸೀರಿಯಲ್ ಖ್ಯಾತಿಯ ರಾಧಾ ಭಗವತಿ ಮತ್ತು ಮನೋಜ್ ಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

PREV
15
ಸುದೀಪ್​ ಅಭಿನಯದ ಮಾರ್ಕ್​

ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಚಿತ್ರ ನಾಳೆ ಅಂದರೆ ಡಿಸೆಂಬರ್​ 25ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

25
ಅಭಿಮಾನಿಗಳಲ್ಲಿ ಕ್ರೇಜ್​

ಈ ಚಿತ್ರದ ಮಸ್ತ್​ ಮಲೈಕಾ ಹಾಡು ಇದಾಗಲೇ ಅಭಿಮಾನಿಗಳಲ್ಲಿ ಕ್ರೇಜ್​ ಹುಟ್ಟಿಸಿದೆ. ಕೆಲವರು ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ.

35
ಪ್ರಮೋಷನ್​ಗೆ ಬೇಕು

ಆದರೆ ಚಿತ್ರದ ಪ್ರಮೋಷನ್​ ಆಗಬೇಕು ಎಂದರೆ ಕಿರುತೆರೆಯ ಸೆಲೆಬ್ರಿಟಿಗಳಿಂದ ಹಾಡುಗಳಿಗೆ ಸ್ಟೆಪ್​ ಹಾಕಿಸಲಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಸಿನಿಮಾಗಳು ಹಿಟ್​ ಆಗಬೇಕು ಎಂದರೆ ಮೊದಲು ಅವುಗಳ ಹಾಡುಗಳು ಕ್ರೇಜ್​ ಹುಟ್ಟಿಸಬೇಕು. ಇದೇ ಕಾರಣಕ್ಕೆ ಜನರಿಗೆ ಅತ್ಯಂತ ಹತ್ತಿರವಾಗಿರುವ ಕಿರುತೆರೆ ಕಲಾವಿದರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ.

45
ಭಾರ್ಗವಿ ಎಲ್​ಎಲ್​ಬಿ ಜೋಡಿ

ಇದೀಗ ಮಾರ್ಕ್​ ಚಿತ್ರದ ಮಸ್ತ್​ ಮಲೈಕಾ ಹಾಡಿಗೆ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಖ್ಯಾತಿಯ ಭಾರ್ಗವಿ ಮತ್ತು ಅರ್ಜುನ್​ ಜೋಡಿ ಅರ್ಥಾತ್​ ರಾಧಾ ಭಗವತಿ ಮತ್ತು ಮನೋಜ್​ ಕುಮಾರ್​ ಅವರು ಸಕತ್​ ಸ್ಟೆಪ್​ ಹಾಕಿದ್ದಾರೆ.

55
ಸೀರೆಯುಟ್ಟು ಹೆಜ್ಜೆ

ಇವರಿಬ್ಬರೂ ಒರಿಜಿನಲ್​ ಡಾನ್ಸ್​ನಂತೆಯೇ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಒರಿಜಿನಲ್​ ಸಾಂಗ್​ನಲ್ಲಿ ನಿಶ್ವಿಕಾ ನಾಯ್ಡು ಗ್ಲಾಮರಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರೆ, ಇಲ್ಲಿ ಭಾರ್ಗವಿ ಅರ್ಥಾತ್​ ರಾಧಾ ಭಗವತಿ ಅವರು ಸೀರೆಯುಟ್ಟು ಹೆಜ್ಜೆ ಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories