ಕನ್ನಡದ ಬೆಸ್ಟ್ ಸಿನಿಮಾಗಳಿವು… ಆದ್ರೆ 2ನೇ ಸಲ ನೋಡುವ ಧೈರ್ಯ ಮಾತ್ರ ಯಾರಿಗೂ ಇಲ್ಲ

Published : Aug 20, 2025, 07:54 PM IST

ಇವು ಕನ್ನಡದ ಜನಪ್ರಿಯ ಹಾಗೂ ಸಿನಿ ರಸಿಕರ ಮನಸು ಗೆದ್ದ ಸಿನಿಮಾಗಳು. ಆದರೆ, ಇದನ್ನು ಮತ್ತೊಂದು ಬಾರಿ ನೋಡುವ ಧೈರ್ಯ ಮಾತ್ರ ಯಾರಿಗೂ ಇಲ್ಲ. ಅಂತಹ ಸಿನಿಮಾಗಳು ಯಾವುವು ನೋಡೋಣ.

PREV
112
ಕನ್ನಡದ ಬೆಸ್ಟ್ ಸಿನಿಮಾಗಳಿವು

ಕನ್ನಡ ಸಿನಿರಸಿಕರನ್ನು ಗೆದ್ದ ಎಷ್ಟೊ ಸಿನಿಮಾಗಳಿವೆ. ಕೆಲವು ಸಿನಿಮಾಗಳನ್ನು ಜನರು ಮತ್ತೆ ಮತ್ತೆ ನೋಡಿ ಎಂಜಾಯ್ ಮಾಡ್ತಾರೆ. ಆದರೆ ಇನ್ನೂ ಕೆಲವು ಸಿನಿಮಾಗಳನ್ನು ಜನ ಒಂದು ಸಲ ಮಾತ್ರ ನೋಡೋದಕ್ಕೆ ಸಾಧ್ಯ. ಮತ್ತೆ ಯಾವತ್ತೂ ಆ ಸಿನಿಮಾ ನೋಡೋದೆ ಇಲ್ಲ. ಅಂತಹ ಸಿನಿಮಾಗಳು ಯಾವುವು ನೋಡೋಣ.

212
ಅಂಬಾರಿ

ಚಪ್ಪಲಿ ಹೊಲಿಯುವ ಹುಡುಗ ಮತ್ತು ಶ್ರೀಮಂತ ಹುಡುಗಿಯ ನಡುವೆ ನಡೆಯುವ ಪ್ರೇಮ ಕತೆ ಇದೆ. ಪ್ರೇಮ ಸೌಧ ತಾಜ್ ಮಹಲ್ ಮುಂದೆ ತಮ್ಮ ಪ್ರೀತಿಯ ಅಂಬಾರಿ ಏರುವ ಜೋಡಿ, ಕೊನೆಗೆ ನಾಯಕನೇ ಸಾಯುತ್ತಾನೆ. ಈ ದೃಶ್ಯ ನೋಡಿದ್ರೆ ಕಣ್ಣಲ್ಲಿ ನೀರು ಬರೋದು ಖಚಿತಾ.

312
ಲವ್ ಮಾಕ್ ಟೈಲ್

ಇದೊಂದು ಮುದ್ದಾದ ಪ್ರೇಮ ಕತೆ ಹೌದು, ಆದರೆ ಮುಂದೇನಾಗುತ್ತೆ? ಪ್ರೀತಿಯಿಂದ ಕೈಹಿಡಿದ ಪತ್ನಿಗೆ ಕ್ಯಾನ್ಸರ್ ಆಗಿ ಆಕೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ಬರುತ್ತದೆ. ಇದು ಟ್ರಾಜಿಡಿ ಅಲ್ಲದೇ ಮತ್ತೇನು?

412
ದಿಯಾ

ಇದೊಂದು ಟ್ರಾಜಿಡಿ ಸಿನಿಮಾ ಅಂತಾನೇ ಹೇಳಬಹುದು. ಖುಷಿ ರವಿ, ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ತ್ರಿಕೋನ ಪ್ರೇಮತೆಯನ್ನು ಹೊಂದಿರುವ ಒಂದು ಟ್ರಾಜಿಡಿ. ಒಂದು ಸಲ ನೋಡಿದ್ರೆ ಮತ್ತೊಂದು ಸಲ ಖಂಡಿತವಾಗಿಯೂ ಈ ಸಿನಿಮಾವನ್ನು ನೋಡಲಾರಿರಿ.

512
ಸಂಜು ವೆಡ್ಸ್ ಗೀತಾ

ಶ್ರೀನಗರ ಕಿಟ್ಟಿ ಮತ್ತು ರಮ್ಯಾ ನಟಿಸಿರುವ ಈ ಸಿನಿಮಾ ತನ್ನ ಹಾಡುಗಳ ಮೂಲಕ ಮೋಡಿ ಮಾಡಿತ್ತು. ಆದರೆ ಚಿತ್ರದ ಕ್ಲೈಮಾಕ್ಸ್ ನೋಡಿದ್ರೆ, ಇಂತಹ ನೋವು ಯಾರಿಗೂ ಬಾರದೆ ಇರಲಿ ಎಂದು ಅನಿಸೋಕೆ ಶುರುವಾಗುತ್ತೆ.

612
ರತ್ನನ್ ಪ್ರಪಂಚ

ಇದು ತಾಯಿ ಪ್ರೀತಿಯನ್ನು ಸಾರುವ ಸಿನಿಮಾವಾಗಿದೆ. ಆಕೆ ಮಲತಾಯಿ ಆಕೆಯ ಜೊತೆ ಇದ್ದಷ್ಟು ದಿನ ಆಕೆಯನ್ನು ಕಾಲ ಕಸದಂತೆ ನಡೆಸುವ ಮಗ, ತನ್ನ ನಿಜತಾಯಿಯನ್ನು ಹುಡುಕುತ್ತಾ ಹೊರಟಂತೆ ತನ್ನ ಸಾಕು ತಾಯಿಯ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಾನೆ.

712
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ

ಒಬ್ಬ ನಿಜವಾದ ಪ್ರೇಮಿ, ತನ್ನ ಹುಡುಗಿ ತನ್ನಿಂದ ದೂರ ಆಗಿ ಬೇರೆ ಮದುವೆಯಾದ ಮೇಲೂ ಏನೇನು ಮಾಡಬಹುದು ಎನ್ನುವುದನ್ನು ತೋರಿಸುವ ಕಥೆ ಇದು. ಭಗ್ನ ಪ್ರೇಮಿಯ ಈ ವ್ಯಥೆಯ ಕಥೆಯನ್ನು ಒಂದು ಸಲ ಮಾತ್ರ ನೋಡೋದಕ್ಕೆ ಸಾಧ್ಯ.

812
ಜಸ್ಟ್ ಮಾತ್ ಮಾತಲ್ಲಿ

ಇದು ಕೂಡ ಒಂದು ನವಿರಾದ ಪ್ರೇಮ ಕಥೆ. ಸುದೀಪ್ ಮತ್ತು ರಮ್ಯಾ ಅಭಿನಯದ ಈ ಸಿನಿಮಾ ಎಷ್ಟು ಮುದ್ದಾಗಿ ಸಾಗುತ್ತದೆಯೋ ಹಾಗೆಯೇ ಕ್ಲೈಮಾಕ್ಸ್ ಮಾತ್ರ ಅಯ್ಯೋ ಯಾಕೆ ಹೀಗಾಯ್ತು ಎನ್ನುವಷ್ಟು ಬೇಜಾರು ತರಿಸುತ್ತೆ.

912
ಮುಂಗಾರು ಮಳೆ

ಇದು ಪ್ರೀತಿಯ ಮುಂಗಾರು ಮಳೆ ಸಿನಿಮಾ. ಆರಂಭದಿಂದ ಕೊನೆಯವರೆಗೂ ಸುಂದರವಾದ ಕತೆ, ಹಾಡುಗಳು, ಸಂಭಾಷಣೆ ಮೂಲಕ ಸಾಗುವ ಸಿನಿಮಾ,ಕ್ಲೈಮಾಕ್ಸ್ ಮಾತ್ರ ನೋಡೊದೆ ಬೇಜಾರು. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವ ಸಾಲು ಕಣ್ಣಂಚನ್ನು ಒದ್ದೆ ಮಾಡುತ್ತೆ.

1012
777 ಚಾರ್ಲಿ

ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಇದು. ಮನುಷ್ಯ ಮತ್ತು ನಾಯಿ ನಡುವಿನ ಭಾಂದವ್ಯವನ್ನು ತೋರಿಸುವ ಸಿನಿಮಾ ಇದಾಗಿದೆ. ಸಿನಿಮಾ ಕಥೆ ತುಂಬಾನೆ ಸುಂದರವಾಗಿದೆ. ಆದರೆ ಶ್ವಾನ ಪ್ರಿಯರು ಯಾರೂ ಕೂಡ ಈ ಸಿನಿಮಾವನ್ನು ಮತ್ತೆ ನೋಡುವ ಧೈರ್ಯ ಮಾಡೋದೆ ಇಲ್ಲ ಅನ್ನೋದು ಖಚಿತಾ.

1112
ಇಂತಿ ನಿನ್ನ ಪ್ರೀತಿಯ

ಶ್ರೀನಗರ ಕಿಟ್ಟಿ, ಭಾವನಾ ಮತ್ತು ಸೋನು ಗೌಡ ಅಭಿನಯದ ಈ ಸಿನಿಮಾ ನೋಡಿದ್ರೆ ಕಣ್ಣೀರು ಬರೋದು ಗ್ಯಾರಂಟಿ. ಒಂದು ಸಲ ನೋಡಿರುವವರು ಮತ್ತೆ ಯಾವತ್ತೂ ಈ ಸಿನಿಮಾ ನೋಡಲಾರರು.

1212
ಹುಚ್ಚ

ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ಕೂಡ ಸೂಪರ್ ಹಿಟ್ ಆಗಿರುವ ಸಿನಿಮಾ. ಆದರೆ ಇದನ್ನು ಮತ್ತೆ ಮತ್ತೆ ನೋಡೋದಕ್ಕೆ ಸಾಧ್ಯಾನ? ಖಂಡಿತಾ ಇಲ್ಲ. ನಾಯಕಿಯ ದುರಂತ ಸಾವು, ಹುಚ್ಚಾಸ್ಪತ್ರೆ ಸೇರುವ ನಾಯಕ… ಅಬ್ಬಬ್ಬಾ ಅತ್ತು ಅತ್ತು ಕಣ್ಣೀರೆ ಬತ್ತಿ ಹೋಗಬಹುದು.

Read more Photos on
click me!

Recommended Stories