ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೊಟ್ಟಿಗೆ ಇದ್ದಾರೆ, ಈಗಲೂ ಅಭಿಮಾನಿಗಳ ಬಗ್ಗೆ ಯೋಜಿಸುತ್ತಿರುತ್ತಾರೆ ಅನ್ನೋದಕ್ಕೆ ಪತ್ನಿ ಅಶ್ವಿನಿ ಮುಂದುವರೆಸುತ್ತಿರುವ ಕೆಲಸಗಳೇ ಸಾಕ್ಷಿ.
26
ಸದಾಶಿವನಗರದ ನಿವಾಸದ ಬಳಿ ಯಾರೇ ಅಭಿಮಾನಿ ಬಂದರೂ ಬಾಯಿ ತುಂಬಾ ಮಾತನಾಡಿಸಿ ಕಳುಹಿಸುತ್ತಾರೆ. ಫೋಟೋ ಬೇಕು ಅಂದ್ರೆ ಫೋಟೋ, ಆಟೋಗ್ರಾಫ್ ಬೇಕು ಅಂದ್ರೆ ಆಟೋಗ್ರಾಫ್ ಕೊಡುತ್ತಾ ಸದಾ ನಗುತ್ತಿರುತ್ತಾರೆ.
36
ಹೀಗೆ ಅಪ್ಪಟ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬರು ಹೊಸ ದುಬಾರಿ ಕಾರು ಖರೀದಿಸಿದ ತಕ್ಷಣವೇ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿದ್ದಾರೆ. ಅಲ್ಲಿ ಅಶ್ವಿನಿ ಅವರನ್ನು ಭೇಟಿ ಮಾಡಿದ್ದಾರೆ.
46
ಅಶ್ವಿನಿ ಪುನೀತ್ ರಾಜ್‌ಕುಮಾರ್ ಜೊತೆ ಮಾತನಾಡಿದ ಅಭಿಮಾನಿ ದಂಪತಿಗಳು ಆಟೋಗ್ರಾಫ್ ಬೇಕೆಂದು ಮನವಿ ಮಾಡುತ್ತಾರೆ. ಅದು ಕಾರಿನೊಳಗೆ ಇರುವ ಡಾಷ್ ಬೋರ್ಡ್ ಮೇಲೆ ಎಂದು.
56
ಬಳಿ ಬಣ್ಣಸ ಪರ್ಮನೆಂಟ್ ಇಂಕ್ ಇರುವ ಪೆನ್‌ನಲ್ಲಿ ಅಶ್ವಿನಿ ಪುನೀತ್ ಎಂದು ಕಾರಿನೊಳಗೆ ಬರೆಯುತ್ತಾರೆ. ಈ ಘಟನೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
66
'ನಮ್ಮ ಹೊಸ ಪಯಾಣ ಶುರುವಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಡಂ ಆಶೀರ್ವಾದದಿಂದ. ನಿಮ್ಮ ಮಾತುಗಳು ಕೇಳಿ ಖುಷಿ ಆಯ್ತು'ಎಂದು ವೀನಾ ಎಂಬುವವರು ಬರೆದುಕೊಂಡಿದ್ದಾರೆ.