ಲೇಬರ್ ಸಮಯದಲ್ಲಿ ಹರಿಪ್ರಿಯಾ ತುಂಬಾ ನೋವು ಅನುಭವಿಸಿದ್ದರು: ವಸಿಷ್ಠ ಸಿಂಹ

Published : Jan 29, 2025, 12:27 PM ISTUpdated : Jan 29, 2025, 01:45 PM IST

ಮಗನನ್ನು ಬರ ಮಾಡಿಕೊಂಡ ಖುಷಿಯಲ್ಲಿ  ವಸಿಷ್ಠ ಸಿಂಹ. ಹರಿಪ್ರಿಯಾ ಮತ್ತು ಮಗ ಹೇಗಿದ್ದಾರೆ ಎಂದು ಹೇಳಿದ್ದಾರೆ. 

PREV
17
ಲೇಬರ್ ಸಮಯದಲ್ಲಿ ಹರಿಪ್ರಿಯಾ ತುಂಬಾ ನೋವು ಅನುಭವಿಸಿದ್ದರು: ವಸಿಷ್ಠ ಸಿಂಹ

ಸ್ಯಾಂಡಲ್‌ವುಡ್‌ ಲವ್ಲಿ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಗಣರಾಜ್ಯೋತ್ಸವದಂದು ರಾತ್ರಿ ಸಮಯದಲ್ಲಿ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ.

27

ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಡಬಲ್ ಸಂಭ್ರಮ ಮಾಡಿದ್ದು ಮಗ ಎಂಟ್ರಿ. ಮೊದಲ ಸಲ ಮಗುವನ್ನು ಎತ್ತಿಕೊಂಡಾಗ ಆದ ಮಿಕ್ಸಡ್‌ ಫೀಲಿಂಗ್‌ನ ವಸಿಷ್ಠ ಹಂಚಿಕೊಂಡಿದ್ದಾರೆ.

37

'ಇಡೀ ಪ್ರೆಗ್ನೆನ್ಸಿ ಜರ್ನಿಯಲ್ಲಿ ಮಗು ಬರಲಿದೆ ಎಂದು ಗೊತ್ತಿತ್ತು ಹೀಗಾಗಿ ನಾನು ತಯಾರಾಗಿದ್ದೆ. ಆದರೆ ಡಾಕ್ಟರ್ ಮಗುವನ್ನು ಕೈಗೆ ಇಟ್ಟ ತಕ್ಷಣ ರಿಯಾಲಿಟಿ ತಲೆಗೆ ಹೊಡೆಯಿತ್ತು' ಎಂದು ಟೈಮ್ಸ್ ಸಂದರ್ಶನದಲ್ಲಿ ವಸಿಷ್ಠ ಮಾತನಾಡಿದ್ದಾರೆ. 

47

'ಒಂದು ಹೊಸ ಪ್ರಪಂಚವನ್ನು ನನ್ನ ಕೈಯಲ್ಲಿ ಇಟ್ಟುಕೊಂಡಿದ್ದೀನಿ ಅನಿಸುತ್ತಿತ್ತು. ಮಗು ಹುಟ್ಟಿದ ಕ್ಷಣದಿಂದ ನನ್ನ ನಗುತ್ತಲೇ ಇರುವೆ. ಲೇಬರ್ ಸಮಯದಲ್ಲಿ ಹರಿಪ್ರಿಯಾ ತುಂಬಾ ನೋವು ಅನುಭವಿಸಿದ್ದಾಳೆ'

57

'ಅಕೆ ಕಷ್ಟ ಪಡುತ್ತಿರುವುದನ್ನು ನೋಡು ಮನಸ್ಸಿಗೆ ನೋವಾಯ್ತು. ಆಗ ಪುಟ್ಟ ಮಗುವನ್ನು ನೋಡುತ್ತಿದ್ದಂತೆ ನೋವು ಮಾಯವಾಗಿತ್ತು. ಒಳ್ಳೆ ಪೋಷಕರಾಗಿರಲು ಕಾಯುತ್ತಿದ್ದೀವಿ' ಎಂದಿದ್ದಾರೆ ವಸಿಷ್ಠ.  

67

ಜನವರಿ 2023ರಂದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಂದು ದಿನ ಅರಿಶಿಣ ಶಾಸ್ತ್ರ, ಒಂದು ದಿನ ಮೆಹೇಂದಿ, ಒಂದು ದಿನ ಸಂಗೀತ, ಮತ್ತೊಂದು ದಿನ ರಿಸೆಪ್ಶನ್...ಹೀಗೆ ನಾಲ್ಕೈದು ದಿನಗಳ ಕಾಲ ಮದುವೆ ಕಾರ್ಯಕ್ರಮ ನಡೆದಿದೆ. 

77

ನವೆಂಬರ್ 2024ರಲ್ಲಿ ಮಾಲ್ಡೀವ್ಸ್‌ ಪ್ರಯಾಣ ಮಾಡಿದ್ದರು. ಅಲ್ಲಿ ಮಾಡಿದ ಸಣ್ಣ ಫೋಟೋಶೂಟ್ ಮೂಲಕ ತಾಯಿ ಆಗುತ್ತಿರುವ ವಿಚಾರವನ್ನು ಅನೌನ್ಸ್ ಮಾಡಿದ್ದರು. ಜನವರಿ 2024ರಂದು ಅದ್ಧೂರಿಯಾಗಿ ಹರಿಪ್ರಿಯಾ ಸೀಮಂತ ಮಾಡಲಾಗಿತ್ತು.

Read more Photos on
click me!

Recommended Stories