ಕ್ರಾಪ್ ಟಾಪ್ ಪ್ಯಾಂಟ್ ಧರಿಸಿ ಮೋಹಕ ಭಂಗಿಯಲ್ಲಿ ಪಡ್ಡೆಗಳ ನಿದ್ದೆ ಕದ್ದ ಮೇಘಾ

Published : Jul 25, 2024, 12:47 PM IST

ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡ ವೀಕ್ಷಕರ ಫೇವರಿಟ್ ನಟಿಯಾಗಿದ್ದ ಮೇಘಾ ಶೆಟ್ಟಿ ಇದೀಗ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡ್ತಿದ್ದಾರೆ.  

PREV
16
ಕ್ರಾಪ್ ಟಾಪ್ ಪ್ಯಾಂಟ್ ಧರಿಸಿ ಮೋಹಕ ಭಂಗಿಯಲ್ಲಿ ಪಡ್ಡೆಗಳ ನಿದ್ದೆ ಕದ್ದ ಮೇಘಾ

ಕಿರುತೆರೆಯಲ್ಲಿ ಅನು ಸಿರಿಮನೆಯಾಗಿ ಜನಪ್ರಿಯತೆ ಪಡೆದು, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಒಂದಾದ ನಂತರ ಒಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮೇಘಾ ಶೆಟ್ಟಿ (Megha Shetty), ಇದೀಗ ತಮ್ಮ ಹೊಸ ಫೋಟೋ ಶೂಟ್ ಮೂಲಕ ಗಮನ ಸೆಳೆದಿದ್ದಾರೆ. 
 

26

ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ಮೇಘಾ ಹೆಚ್ಚಾಗಿ ತಮ್ಮ ಫೋಟೋ ಶೂಟ್ ಶೇರ್ ಮಾಡ್ತಾ ಇರ್ತಾರೆ. ಈ ಬಾರಿಯೂ ನಟಿ ಸಖತ್ ಬೋಲ್ಡ್ ಅವತಾರದಲ್ಲಿ, ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ನೋಡಿದ ಯುವಕರು ನಿಮ್ಮ ಅಂದ ನೋಡಿ ನಮ್ಮ ನಿದ್ದೆ ಹಾರೋಯ್ತು ಅಂತಿದ್ದಾರೆ. 
 

36

ಡಿಸೈನರ್ ಲಕ್ಷ್ಮೀ ಕೃಷ್ಣ ಅವರ ಚಾಕಲೇಟ್ ಬಣ್ಣದ ಕ್ರಾಪ್ ಟಾಪ್ ಮತ್ತು ಪ್ಯಾಂಟ್ ಧರಿಸಿರುವ ಮೇಘಾ ಶೆಟ್ಟಿ, ಕೆದರಿದಂತೆ ಓಪನ್ ಹೇರ್ ಬಿಟ್ಕೊಂಡಿದ್ದಾರೆ. ಕುತ್ತಿಗೆಯಲ್ಲಿ ಒಂದು ಸಿಂಪಲ್ ಚೈನ್, ಕಾಲಲ್ಲಿ ಹೈಹೀಲ್ಸ್ ಧರಿಸಿ, ಮೋಹಕ ಭಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. 

46

ಮೇಘಾ ಫೋಟೋ ಶೇರ್ ಮಾಡ್ತಿದ್ದಂಗೆ ಪಡ್ಡೆಗಳ, ಫ್ಯಾನ್ಸ್ ಗಳ ಕಾಮೆಂಟ್ ಗಳ ಸುರಿಮಳೆನೆ ಆಗ್ತಿದೆ, ಓ ಮತ್ತೆ ಬಂದ ಮೇಘ ದೇವತೆ ಇವತ್ತು ರಾತ್ರಿ ಪೂರ್ತಿ ನಿದ್ದೆ ಇಲ್ಲ ಜಾಗರಣೆ ಎಂದು ಒಬ್ರು ಹೇಳಿದ್ರೆ, ಈ ಹೇರ್ ಸ್ಟೈಲಲ್ಲಿ ಸಖತ್ತಾಗಿ ಕಾಣಿಸ್ತಿದ್ದೀರಾ ಎಂದು ಇನ್ನೊಬ್ರು ಹೇಳಿದ್ದಾರೆ, ಮತ್ತೆ ಹಲವರು ಹಾಲಿವುಡ್ ಬಾಲಿವುಡ್ ನ ಯಾವ ಹಿರೋಯಿನ್ ಗೂ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. 

56

ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ, ಸದ್ಯಕ್ಕಂತೂ ಸಿನಿಮಾ, ಜಾಹೀರಾತು, ಸೀರಿಯಲ್ ನಿರ್ಮಾಣಗಳಲ್ಲೇ ಬ್ಯುಸಿಯಾಗಿದ್ದಾರೆ. ಈಗಾಗಲೇ ಕೈವಾ, ಟ್ರಿಪಲ್ ರೈಡಿಂಗ್ (tripple riding), ದಿಲ್ ಪಸಂದ್ ಸಿನಿಮಾದಲ್ಲಿ ನಟಿಸಿದ್ದಾರೆ ಈ ಸುಂದರಿ. ಅಷ್ಟೇ ಅಲ್ಲ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿ ನಿರ್ಮಾಣ ಮಾಡ್ತಿರೋದು ಕೂಡ ಇವರೇ. 
 

66

ಇನ್ನು ಮೂರು ಚಿತ್ರಗಳಲ್ಲಿ ಮೇಘಾ ನಟಿಸುತ್ತಿದ್ದು, ಒಂದು ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಆಫ್ಟರ್ ಆಪರೇಶನ್ ಲಂಡನ್ ಕೆಫೆ ಸಿನಿಮಾ, ಕನ್ನಡ ಮತ್ತು ಮರಾಠಿಯಲ್ಲಿ ಸಹ ಬಿಡುಗಡೆಯಾಗ್ತಿದೆ. ಇನ್ನು ಚೀತಾ ಮತ್ತು ಗ್ರಾಮಾಯಣ ಸಿನಿಮಾದಲ್ಲೂ ನಾಯಕಿಯಾಗಿ ಮೇಘಾ ಶೆಟ್ಟಿ ನಟಿಸ್ತಿದ್ದಾರೆ. 
 

Read more Photos on
click me!

Recommended Stories