ಧನ್ವೀರ್ ಗೌಡ ಹಣ ಕೊಟ್ಟು ಜನ ಕರೆಸುತ್ತಾರೆ; ನೆಟ್ಟಿಗರಿಗೆ ಖಡಕ್ ಟಾಂಗ್ ಕೊಟ್ಟ ಜಾನ್ವಿ ರಾಯಲಾ

First Published | Dec 12, 2023, 1:46 PM IST

ಪದೇ ಪದೇ ಧನ್ವೀರ್ ಗೌಡ ಸಿನಿಮಾಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರಿಗೆ ಖಡಕ್ ಉತ್ತರ ಕೊಟ್ಟ ಕಿರುತೆರೆ ನಿರೂಪಕಿ ಜಾನ್ವಿ ರಾಯಲಾ.
 

ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾ ರಿಲೀಸ್ ಅಗಿದೆ. ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಅಭಿನಯಿಸಿರುವ ಈ ಚಿತ್ರ ನೈಜ ಕಥೆ ಹೇಳುತ್ತದೆ. ಆದರೆ ನೆಗೆಟಿವ್ ವಿಮರ್ಶೆ ಬರೆಯುತ್ತಿರುವವರಿಗೆ ಜಾನ್ವಿ ಉತ್ತರ ಕೊಟ್ಟಿದ್ದಾರೆ.  

'ಕೈವ ಸಿನಿಮಾ ಬಗ್ಗೆ ಎಲ್ಲರೂ ನೆಗೆಟಿವ್ ಕಾಮೆಂಟ್ ಬರುತ್ತಿದೆ ಎನ್ನುತ್ತಿದ್ದೀರಾ ಅಲ್ವಾ..ಇದರಲ್ಲಿ ನಿಮಗೆ ನಾನು ಪಾಸಿಟಿವ್ ವಿಚಾರ ಹೇಳುತ್ತೀನಿ'

Tap to resize

'ಧನ್ವೀರ್ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಹಣ ಕೊಟ್ಟು ಸಿನಿಮಾ ನೋಡಲು ಜನ ತರುತ್ತಿದ್ದಾರೆ ಅಂತ. ಆದರೆ ಅದೇ ಧನ್ವೀರ್ ಲೇಡಿ ಡಿಓಪಿ ಜೊತೆ ಕೆಲಸ ಮಾಡಿದ್ದಾರೆ'

 'ಅದೇ ಧನ್ವೀರ್ ಮೇಘಾ ಶೆಟ್ಟಿ ಜೊತೆನೂ ಕೆಲಸ ಮಾಡಿದ್ದಾರೆ. ನಿರ್ದೇಶಕರಾದ ಜಯತೀರ್ಥ ಅವರು ಕಥೆ ಯಾವ ರೀತಿ ಬರೆದುಕೊಂಡಿದ್ದಾರೆ ಅದೇ ರೀತಿ ಸಿನಿಮಾ ಮಾಡಿದ್ದಾರೆ'

'ಇಲ್ಲಿ ಧನ್ವೀರ್‌ಗೋಸ್ಕರ ಬಿಲ್ಡಪ್ ಸೀನ್ ಬೇಕು ಬಿಲ್ಡಪ್ ಸಾಂಗ್ ಬೇಕು ಅನ್ನೋ ಕಮರ್ಷಿಯಲ್ ಎಲಿಮಿಂಟ್ ಏನೋ ಇಲ್ಲ. ಅರ್ಥ ಮಾಡಿಕೊಳ್ಳಿ ಕಷ್ಟ ಪಟ್ಟು ಸಿನಿಮಾ ಮಾಡಿರುವುದ'

 'ನಮ್ಮ ರಾಜ್ಯದ ಮೊದಲ ಮಹಿಳಾ ಡಿಓಪಿ ಕೈವ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ. ಪಾಸಿಟಿವ್ ಸುದ್ದಿ ಹರಡಿಸಿ. ಆಗ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂತ ಹೊಗಳುತ್ತಾರೆ'

'ನೆಗೆಟಿವಿಟಿ ಬಿಟ್ಟು ಬಿಡಿ ಎಲ್ಲರಿಗೂ ಸಪೋರ್ಟ್ ಮಾಡಿ ಕನ್ನಡ ಸಿನಿಮಾವನ್ನು ಬೆಳೆಸೋಣ. ಸಿನಿಮಾ ಒಮ್ಮೆ ನೋಡಿ ಆಮೇಲೆ ಚೆನ್ನಾಗಿದೆ ಎಂದು ಹೇಳೇ ಹೇಳುತ್ತಾರೆ' 

Latest Videos

click me!