ಮದ್ವೆಯಾಗಿ ಎರಡು ವರ್ಷ ತುಂಬಾ ಕಷ್ಟ ಆಯ್ತು, ಮನೆಯಲ್ಲಿ ಎರಡು ಕತ್ತಿಗಳಿತ್ತು: ನಟಿ ಸಂಗೀತಾ

First Published | Dec 11, 2023, 2:54 PM IST

ಎರಡು ವಿಭಿನ್ನ ವ್ಯಕ್ತಿತ್ವಗಳು ಒಟ್ಟಿಗೆ ಸೇರಿದಾಗ ಕಷ್ಟವಾಗುತ್ತದೆ. ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಅನ್ನೋದು ನಟಿ ಸಂಗೀತಾ ಮಾತು. 

ಬಹುಭಾಷ ನಟಿ ಸಂಗೀತಾ ಕ್ರಿಶ್ ಮೊದಲ ಸಲ ತಮ್ಮ ವೈವಾಹಿಕ ಬದುಕು ಆರಂಭದಲ್ಲಿ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಎರಡು ವರ್ಷ ತುಂಬಾ ಕಷ್ಟ ಪಟ್ಟಿದ್ದಾರಂತೆ.

ಸೆಲೆಬ್ರಿಟಿನ ಮದುವೆ ಮಾಡಿಕೊಂಡರೆ ಲೈಫ್‌ ಚೆನ್ನಾಗಿರುತ್ತದೆ ಜಾಲಿಯಾಗಿರುತ್ತಾರೆ ಅಂದುಕೊಳ್ಳಬೇಡಿ. ಅಷ್ಟು ಸುಲಭವಲ್ಲ. ಮದುವೆಯಾದ ಮೊದಲು ಎರಡು ವರ್ಷ ನರಕದ ಜೀವನ. 

Tap to resize

ಏಕೆಂದರೆ ನಮಗೆ ಅವರ ಬಗ್ಗೆ ಏನೂ ಗೊತ್ತಿರಲ್ಲ ಅವರಿಗೆ ನಮ್ಮ ಬಗ್ಗೆ ಸಂಪೂರ್ಣವಾಗಿ ಏನೂ ಗೊತ್ತಿರುವುದಿಲ್ಲ. ಆ ಎರಡು ವರ್ಷ ಹೊರ ಪ್ರಪಂಚದಿಂದ ದೂರ ಉಳಿದುಬಿಟ್ಟೆವು. 

ಸಮಯ ತೆಗೆದುಕೊಂಡು ಒಬ್ಬರನ್ನೊಬ್ಬರ ಅರ್ಥ ಮಾಡಿಕೊಳ್ಳಲು ಶುರು ಮಾಡಿದೆವು. ಯಾರನ್ನೂ ಭೇಟಿ ಮಾಡುತ್ತಿರಲಿಲ್ಲ. ಸದಾ ಕೃಷ್ ಮತ್ತು ನಾನು ಇರುತ್ತಿದ್ದವೆ..ಅಲ್ಲಿಂದ ನಮ್ಮ ನಡುವೆ ಬಾಂಡ್ ಗಟ್ಟಿಯಾಗಿತ್ತು. 

ನಾವಿಬ್ಬರು ಒಟ್ಟಿಗೆ ಇರಬೇಕು ಜೀವನ ನಡೆಸಬೇಕು ಎಂದು ಅಲ್ಲಿಂದ ನಿರ್ಧಾರ ಮಾಡಿದೆವು. ಒಂದೇ ಮನೆಯಲ್ಲಿ ಇಬ್ಬರು ಸೆಲೆಬ್ರಿಟಿಗಳು ಇದ್ದಾರೆ ಅಂದ್ರೆ ಎರಡು ಕತ್ತಿ ಒಂದೇ ಕಡೆ ಇರುವ ಹಾಗೆ. 

ನೀನ್ ಮೊದಲು ನಾನು ಮೊದಲು ನೀನು ಸರಿ ನಾನು ಸರಿ ಎಲ್ಲಾ ಬಿಟ್ಟು ನಾನು ತಪ್ಪು ಮಾಡಿದರೆ ನೀನು ಕ್ಷಮಿಸು ನೀನು ತಪ್ಪು ಮಾಡಿದರೆ ನಾನು ಕ್ಷಮಿಸುತ್ತೀನಿ ಅನ್ನೋ ಅರ್ಥಕ್ಕೆ ಬಂದೆವು.

ನನ್ನ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನೀನು ನಿಲ್ಲಬೇಕು ನಿನ್ನ ಜೀವನದಲ್ಲಿ ಏನೇ ಆದರೂ ನಿನ್ನ ಪಕ್ಕ ನಾನು ಇರುತ್ತೀನಿ ಅನ್ನೋ ನಿರ್ಧಾರಕ್ಕೆ ಬಂದ್ವಿ. ಮೊದಲು ತುಂಬಾ ಕಷ್ಟ ಆಯ್ತು ಈಗ ಚೆನ್ನಾಗಿದ್ದೀನಿ. 

ನಮ್ಮ ಮದುವೆ ಗಟ್ಟಿಯಾಗಿರುವುದಕ್ಕೆ ಕೃಷ್ ಕಾರಣ. ನನ್ನ ಗಂಡನಿಗೆ ನಾನು ಹೆಂಡತಿ ಮಾತ್ರವಲ್ಲ ತಾಯಿ ಕೂಡ. ಏನೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ನನ್ನ ಜೊತೆ ಚರ್ಚೆ ಮಾಡುತ್ತಾರೆ. 

ರೆಲೇಷನ್‌ಶಿಪ್‌ ಬಗ್ಗೆ ಯಾರಿಗೂ ಸಲಹೆ ಕೊಡಲ್ಲ ಇಬ್ಬರೂ ಒಪ್ಪಿಕೊಂಡು ಜೀವನ ನಡೆಸಿದರೆ ಏನೇ ಬಂದರು ಎದುರಿಸಬಹುದು. ಇಲ್ಲವಾದರೆ ಎಷ್ಟೇ ಕಷ್ಟ ಪಟ್ಟರು ಒಟ್ಟಿಗೆ ಇರಲು ಆಗಲ್ಲ. ನಾಟಕ ಮಾಡುವುದು ಕಷ್ಟ.

Latest Videos

click me!