ಗೋಲ್ಡನ್ ಡ್ರೆಸ್‌ನಲ್ಲಿ ಚುಟು ಚುಟು ಬೆಡಗಿ ಆಶಿಕಾ: ಝೂಮ್ ಹಾಕಿ ನೋಡಿದ್ರು ಏನು ಕಾಣ್ತಿಲ್ಲ ಎಂದ ಫ್ಯಾನ್ಸ್‌!

First Published | Dec 11, 2023, 1:30 AM IST

ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಕನ್ನಡದ ಸಹಜ ಸುಂದರಿ ನೋಡಿ. ಎಲ್ಲೂ ಹುಚ್ಚು ಇಲ್ಲ ಕಿಚ್ಚು ಕಾಣಿಸೋದಿಲ್ಲ. ತಮ್ಮದೇ ರೀತಿಯಲ್ಲಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 
 

ಸ್ಯಾಂಡಲ್​ವುಡ್​ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್​ ತಮ್ಮ ನಟನೆಯ ಜೊತೆಗೆ ಸೌಂದರ್ಯದಿಂದಲೂ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಬಗೆ ಬಗೆಯ ಫೋಟೋಶೂಟ್​ ಮೂಲಕ ಕನ್ನಡಿಗರಿಗೆ ಮತ್ತಷ್ಟು ಸನಿಹವಾಗಿದ್ದಾರೆ. 

ಆಶಿಕಾ ಹಂಚಿಕೊಳ್ಳುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಬಹುಬೇಗನೆ ಜಾಗ ಗಿಟ್ಟಿಸಿಕೊಳ್ಳುತ್ತವೆ. ಇವರ ಹೊಸ ಚಿತ್ರಗಳಿಗಾಗಿಯೇ ಫ್ಯಾನ್ಸ್​ ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಈ ಚೆಲುವೆ ತಮ್ಮ ವಿಭಿನ್ನ ಫ್ಯಾಷನ್​ ಸೆನ್ಸ್​ ಅನ್ನು ಫೋಟೋಗಳ ಮೂಲಕವೇ ರಿವೀಲ್​ ಮಾಡುತ್ತಾರೆ.

Tap to resize

ಇದೀಗ ಆಶಿಕಾ ಸಖತ್ ಬೋಲ್ಡ್ ಮತ್ತು ಗೋಲ್ಡನ್ ಕಲರ್ ಡ್ರೆಸ್ ತೊಟ್ಟು ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಖ್ಯಾತ ಛಾಯಾಗ್ರಾಹಕ ಸಂದೀಪ್​ ಎಂ.ವಿ ಕ್ಯಾಮರಾದಲ್ಲಿ ಆಶಿಕಾ ರಂಗನಾಥ್ ಸೌಂದರ್ಯ ಸೆರೆಯಾಗಿದೆ. ವಿವಿಧ ಭಂಗಿಯಲ್ಲಿ ನಿಂತು ಚುಟು ಚುಟು ಬೆಡಗಿ ತಮ್ಮ ಅಂದವನ್ನು ಪ್ರದರ್ಶಿಸಿದ್ದಾರೆ. ಇವರ ಬ್ಯೂಟಿಗೆ ಅಭಿಮಾನಿಗಳು ಲೈಕ್ಸ್​ ಮೂಲಕವೇ ಮೆಚ್ಚುಗೆ ಸೂಚಿಸಿದ್ದಾರೆ.

ಆಶಿಕಾರನ್ನು ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ನೋಡಿದ ನೆಟ್ಟಿಗರು, ಸಕ್ಕರೆ ಗೊಂಬೆ, ಅಪ್ಸರೆ ರಂಗನಾಥ್, ಝೂಮ್ ಹಾಕಿದ್ರು ಏನು ಕಾಣ್ತಿಲ್ಲ, ಮೇಡಂ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗ್ಬೇಡಿ ಪ್ಲೀಸ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್​​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ.

ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ, 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಆಶಿಕಾ ರಂಗನಾಥ್ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾದಲ್ಲಿ ಮಿಂಚ್ತಾ ಇದ್ದಾರೆ. ಮದಗಜ, ಪತ್ತಟ್ಟು ಅರಸನ್ ಮತ್ತು ಅಮಿಗೋಸ್ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.

Latest Videos

click me!