ಕಿಚ್ಚ ಸುದೀಪ್‌ಗೆ ಜೋಡಿಯಾಗಿ ವರದನಾಯಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟಿ ಸಮೀರಾ ರೆಡ್ಡಿ.
ಎರಡು ಮಗುವಿನ ನಂತರ ಸಮೀರಾ ತುಂಬಾನೇ ದಪ್ಪವಾದರು. ಹೀಗಾಗಿ ಎಲ್ಲರೂ ಆಕೆಯನ್ನು ಡುಮ್ಮಿ, ನೀನು ನಟಿ ನಾ? ಹಾಗೆ ಹೀಗೆ ಎಂದು ನೆಗೆಟಿವ್ ಆಗಿ ಕಾಮೆಂಟ್ ಮಾಡಲು ಶುರು ಮಾಡಿದ್ದರು.
ಕೊರೋನಾ ಮೊದಲನೇ ಲಾಕ್‌ಡೌನ್ ಸಮಯದಲ್ಲಿ ಮುಂಬೈಯಿಂದ ಸಮೀರಾ ತಮ್ಮ ಕುಟುಂಬದ ಜೊತೆ ಗೋವಾಗೆ ಪ್ರಯಾಣ ಮಾಡಿ, ಈಗ ಅಲ್ಲೇ ನೆಲೆಸಿದ್ದಾರೆ. ತಮ್ಮ ಅತ್ತೆ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.
ಎರಡನೇ ಮಗು ಸಾಲಿಡ್ ಆಹಾರ ಸೇವಿಸುವ ಸಮಯದಿಂದ ನಾನ್ ಸ್ಟಾಪ್ ವರ್ಕೌಟ್, ಯೋಗ ಮತ್ತು ಇಡೀ ಮನೆ ಕೆಲಸವನ್ನು ಸಮೀರಾ ಅವರೇ ಮಾಡುವ ಮೂಲಕ ತಮ್ಮ ದೇಹಕ್ಕೆ ಕೆಲಸ ಕೊಡುತ್ತಿದ್ದರು.
'ಒಂದು ವರ್ಷದಿಂದ ನಾನು ನನ್ನ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿವಹಿಸಿದೆ. 92 ಕೆಜಿ ಇದ್ದ ನಾನು ಈಗ 81 ಕೆಜಿ ಆಗಿರುವೆ. ನನಗೆ ಗೊತ್ತು ಸಣ್ಣ ಆಗುವುದಕ್ಕೆ. ಆದರೆ ಈಗ ಆಗಿರುವ ಟ್ರಾನ್ಸ್‌ಫಾರ್ಮೆಶನ್ ನನ್ನ ಜೀವನ ಬದಲಾಯಿಸಿದೆ,'ಎಂದು ಸಮೀರಾ ಬರೆದುಕೊಂಡಿದ್ದಾರೆ.
'ನಾನು ಆಗಾಗ ಗಮನ ಕಳೆದುಕೊಳ್ಳುತ್ತಿದ್ದೆ. ಆದರೂ ಛಲ ಬಿಡಲಿಲ್ಲ. ರಾತ್ರಿ ಎದ್ದು ಊಟ ಮಾಡುವುದ ನಿಲ್ಲಿಸಿದೆ. ಹಾಗೇ intermittent ಉಪವಾಸ ಶುರು ಮಾಡಿದ್ದು ಸಹಾಯ ಮಾಡಿದೆ,' ಎಂದು ಸಮೀರಾ ಹೇಳಿದ್ದಾರೆ.
'ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸ್ನೇಹಿತರ ಸಂಪರ್ಕದಲ್ಲಿ ಇರಿ. ಆಗ ನೀವು ಏನೇ ಮಾಡಲು ಮನಸ್ಸು ಇಲ್ಲದಿದ್ದರೂ ಅವರೇ ಸ್ಫೂರ್ತಿ ತುಂಬುತ್ತಾರೆ,' ಎಂದಿದ್ದಾರೆ ನಟಿ.