ಅಮೃತಾ ಮುದ್ದಾದ ನಗು ನೋಡಿ, ಜನ ತಕ್ಷಣ ಯಾಕೆ ಇಷ್ಟು ಚಂದ ನೀನು, ದೃಷ್ಟಿ ಬೊಟ್ಟನಿಡಲೇನು ಎಂದು ಕಾಮೆಂಟ್ ಮಾಡಿಯೇ ಬಿಟ್ಟಿದ್ದಾರೆ. ಅಷ್ಟೆ ಅಲ್ಲ ನಿಮ್ಮ ಹೆಸರು ಅಮೃತಾ ಅಯ್ಯರ್ ಅಲ್ಲ, ಬ್ಯೂಟಿ ಫುಲ್ ಅಯ್ಯರ್ ಅಂತ ಇರಬೇಕಿತ್ತು ಅಂದಿದ್ದಾರೆ.
58
ಇನ್ನು ಅಮೃತಾ ಅಯ್ಯಂಗಾರ್ ಕೊಡೆ ಹಿಡಿದು, ಮಳೆಯಲ್ಲಿ ಎಂಜಾಯ್ ಮಾಡ್ತಿರೋದನ್ನು ನೋಡಿ, ಮೇಡಂ ಮುಂಗಾರು ಮಳೆ 3 ಸಿನಿಮಾಗೆ ರೆಡಿಯಾಗ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.
68
ಅಮೃತಾ ಬಗ್ಗೆ ಹೇಳೋದಾದ್ರೆ ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಅಮೃತಾಗೆ ಜನಪ್ರಿಯತೆ ತಂದು ಕೊಟ್ಟಿದ್ದು ಲವ್ ಮಾಕ್ಟೇಲ್ (Love Mocktail) ಸಿನಿಮಾ. ಈ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ರೂ ಜನ ಇಷ್ಟ ಪಟ್ಟಿದ್ದರು.
78
ಇದಲ್ಲದೇ ಲವ್ ಮಾಕ್ಟೇಲ್ 2, ಹೊಯ್ಸಳ, ಬಡವ ರಾಸ್ಕಲ್, ೦, ವಿಂಡೋ ಸೀಟ್, ಅಬ್ಬಬ್ಬಾ ಸಿನಿಮಾಗಳನ್ನು ನಟಿಸಿದ್ದಾರೆ. ಬಡವ ರಾಸ್ಕಲ್ ಸಿನಿಮಾಗಾಗಿ ಫಿಲಂ ಫೇರ್ ಪ್ರಶಸ್ತಿ , ಸೈಮಾ ಅವಾರ್ಡ್ ಕೂಡ ಬಂದಿದೆ.
88
ಸದ್ಯ ಮತ್ತೆರಡು ಸಿನಿಮಾಗಳು ಅಮೃತಾ ಅಯ್ಯಂಗಾರ್ ಕೈಯಲ್ಲಿದೆ. ಫಾದರ್ (Father)ಎನ್ನುವ ಸಿನಿಮಾ ಹಾಗೂ ಇನ್ನೂ ಹೆಸರಿಡದ ಸಿನಿಮಾಗಳ ಶೂಟಿಂಗ್ ನಲ್ಲಿ ಸದ್ಯ ನಟಿ ಬ್ಯುಸಿಯಾಗಿದ್ದಾರೆ.