Actress Sonal Monteiro: ನಮ್‌ ಮದುವೆ ವಿಷಯ ಟ್ರೋಲ್‌ ಆಗಿದ್ದು ನೋಡಿ ನನ್ನ ತಾಯಿ ಬ್ರೇಕ್‌ಡೌನ್‌ ಆಗಿದ್ರು: Sonal Monteiro

Published : May 31, 2025, 01:04 PM ISTUpdated : May 31, 2025, 01:06 PM IST

ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಅವರು ಹಿಂದು, ಕ್ರಿಶ್ಚಿಯನ್‌ ಧರ್ಮದ ಪ್ರಕಾರ ಮದುವೆ ಆಗಿದ್ದಾರೆ. ಇವರಿಬ್ಬರದ್ದು ಲವ್‌ ಮ್ಯಾರೇಜ್.‌ ಆದರೆ ಇವರ ಮದುವೆಯನ್ನು ಕೆಲವರು ಟ್ರೋಲ್‌ ಮಾಡಿದ್ದರು. ಈಗ ಸೋನಲ್‌ ಈ ಬಗ್ಗೆ Boss Tv ಗೆ ನೀಡಿದ ಸಂದರ್ಶನದಲ್ಲಿ ಮೌನ ಮುರಿದಿದ್ದಾರೆ. 

PREV
16

“ನಾನು ಈ ಇಂಡಸ್ಟ್ರಿಯಲ್ಲಿ ಇದ್ದಿದ್ದರಿಂದ ಪರವಾಗಿಲ್ಲ. ಆದರೆ ನನ್ನ ಫ್ಯಾಮಿಲಿಗೆ ಇದು ಎಫೆಕ್ಟ್‌ ಮಾಡಿದೆ. ಮದುವೆ ಅನ್ನೋದು ಪ್ರತಿಯೊಬ್ಬರ ವೈಯಕ್ತಿಕ ಜೀವನ. ಲೈಫ್ ಪಾರ್ಟ್ನರ್ ಅವರವರ ಇಷ್ಟ, ಅವರೇ ಆಯ್ಕೆ ಮಾಡಿಕೊಳ್ಳಬೇಕು. ಒಂದು ಹುಡುಗ, ಹುಡುಗಿ ಮನೆಯವರಿಗೆ ಇಷ್ಟ ಆದರೆ ಆಯ್ತು. ಪಬ್ಲಿಕ್ ಫಿಗರ್ಸ್ ಅಂತ ಟ್ರೋಲ್‌ ಮಾಡಬಹುದು, ಆದರೆ ಅದಕ್ಕೂ ಮುನ್ನ ಕುಟುಂಬ ಇದೆ ಅಂತ ಅವರು ಆಲೋಚನೆ ಮಾಡಬೇಕು” ಎಂದು ಸೋನಲ್‌ ಹೇಳಿದ್ದಾರೆ. 

26

““ನಮಗೂ ಫ್ಯಾಮಿಲಿ ಇರತ್ತೆ. ಒಂದು ತಾಯಿಗೆ ಮಗಳು ಮದುವೆ ಆಗ್ತಿದ್ದಾಳೆ ಅಂತ ಅಂದಾಗಲೇ ದೊಡ್ಡ ಆತಂಕ ಇರುತ್ತದೆ. ನನ್ನ ಮಗಳು ಮದುವೆ ಆಗ್ತಿದ್ದಾಳೆ ಅನ್ನೋದೇ ಒಂದು ದೊಡ್ಡ ಚಿಂತೆ ಆಗಿರುತ್ತದೆ. ಅದರ ಮಧ್ಯದಲ್ಲಿ ಈ ರೀತಿ ಟ್ರೋಲ್‌ ನೋಡುವಾಗ ತುಂಬ ಕಷ್ಟ ಆಗುತ್ತದೆ. ನನಗಿಂತ ಜಾಸ್ತಿ ನಮ್ಮ ಫ್ಯಾಮಿಲಿಗೆ ಈ ಟ್ರೋಲ್ ತುಂಬಾ ಎಫೆಕ್ಟ್ ಆಯ್ತು” ಎಂದು ಸೋನಲ್‌ ಹೇಳಿದ್ದಾರೆ. 

36

“ನನ್ನ ತಾಯಿ, ಅಕ್ಕಂದಿರು ಅಷ್ಟೇ ಅಲ್ಲದೆ ಎಲ್ಲೆಲ್ಲೋ ಇರುವ ಸಂಬಂಧಿಕರಿಗೂ ಕೂಡ ಇದೆಲ್ಲ ನೋಡಿ ಬೇಸರ ಆಗಿತ್ತು. ಅವರೆಲ್ಲ ನನ್ನ ತಾಯಿಗೆ ಫೋನ್‌ ಮಾಡಿ ಸೋನಲ್‌ ಮದುವೆ ನ್ಯೂಸ್‌ ಬರ್ತಿದೆ ಅಂತ ಫೋನ್‌ ಮಾಡ್ತಿದ್ರು” ಎಂದು ಹೇಳಿದ್ದಾರೆ. 

46

“ನನ್ನ ಫ್ಯಾಮಿಲಿಯಲ್ಲಿ ಕೆಲವರು ನ್ಯೂಜಿಲ್ಯಾಂಡ್‌ನಲ್ಲಿ ಇದ್ದಾರೆ, ಇನ್ನೂ ಕೆಲವರು ಕೆನಡಾದಲ್ಲಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಪೋಸ್ಟ್‌ಗಳು ಬರುತ್ತವೆ, ಅದನ್ನೆಲ್ಲ ಅವರು ನೋಡಿರುತ್ತಾರೆ. ಆ ಪೋಸ್ಟ್‌ಗಳಿಗೆ 100 ನೆಗೆಟಿವ್ ಕಮೆಂಟ್ಸ್‌ ಬಂದಿರುತ್ತದೆ. ಇದನ್ನೆಲ್ಲ ಅವರು ನೋಡಿರುತ್ತಾರೆ” ಎಂದಿದ್ದಾರೆ. 

56

“ನಮಗೆ ಕೂಡ ಈ ಥರಹದ್ದು ಎಫೆಕ್ಟ್‌ ಆಗತ್ತೆ, ನಮಗಿಂತ ಜಾಸ್ತಿ ನಮ್ಮ ಕುಟುಂಬದವರು ಬೇಸರ ಮಾಡಿಕೊಳ್ತಾರೆ. ನನ್ನ ತಾಯಿಗೆ ಇದೆಲ್ಲ ನೋಡೋಕೆ ತುಂಬ ಕಷ್ಟ ಆಯ್ತು, ಅವರು ಮಾನಸಿಕವಾಗಿ ಕುಸಿದಿದ್ದೂ ಇದೆ. ತರುಣ್‌ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ತಾರೆ ಎನ್ನುವ ಒಂದು ನಂಬಿಕೆಯಿಂದ ಅವರು ಗಟ್ಟಿಯಾಗಿದ್ದರು ಅಷ್ಟೇ” ಎಂದಿದ್ದಾರೆ. 

66

“ನಮ್ಮ ಮದುವೆಗೆ 5000 ಜನರು ಬರ್ತಾರೆ ಅಂದುಕೊಂಡಿದ್ದೆವು, ಆದರೆ ಅದಕ್ಕಿಂತ ಡಬಲ್‌ ಜನರು ಬಂದ್ರು. ಎಲ್ಲರೂ ಅವರ ಕೆಲಸ ಬಿಟ್ಟು ನಮ್ಮ ಮದುವೆಗೆ ಬಂದಿದ್ದು ನಮಗೆ ದೊಡ್ಡ ಆಶೀರ್ವಾದ. ಇಂದು ನಾನು ಖುಷಿಯಾಗಿದ್ದೀನಿ. ನನ್ನ ಗಂಡ ಆಫೀಸ್‌ನಲ್ಲೋ, ಮನೆಯಲ್ಲೋ ಇದ್ದಾರೆ. ನಾನು ಇಲ್ಲಿ ಕೆಲಸ ಮಾಡ್ತಿದ್ದೀನಿ. ನನ್ನ ಗಂಡ ಫೋನ್‌ ಮಾಡಿ ಯಾವಾಗ ಮನೆಗೆ ಬರ್ತೀಯಾ? ಯಾಕೆ ಲೇಟ್‌ ಅಂತೆಲ್ಲ ಕೇಳೋದಿಲ್ಲ. ನನಗೆ ತುಂಬ ಬೆಂಬಲ ಕೊಡ್ತಾರೆ, ಇದಕ್ಕಿಂತ ಇನ್ನೇನು ಬೇಕು? ಈಗ ಎಲ್ಲರೂ ಬಂದು ನಿಮ್ಮ ಜೋಡಿ ಚೆನ್ನಾಗಿದೆ, ಖುಷಿಯಾಗಿರಿ ಅಂತ ಹೇಳ್ತಾರೆ. ಮೊದಲು ಏನೇ ಹೇಳಬಹುದು, ಆಮೇಲೆ ಮರೆತು ಹೋಗ್ತಾರೆ ಅಂತ ನನಗೆ ಅರ್ಥ ಆಗಿದೆ” ಎಂದಿದ್ದಾರೆ. 

Read more Photos on
click me!

Recommended Stories