ದೇಶದೆಲ್ಲೆಡೆ ಗಣೇಶೋತ್ಸವ ಸಡಗರ ಸಂಭ್ರಮದಿಂದ ನಡೆದಿದೆ. ಸಿನಿಮಾ ತಾರೆಯರ ಮನೆಯಲ್ಲಂತೂ ಅದ್ದೂರಿಯಾಗಿ ಹಬ್ಬ ಆಚರಿಸಲಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟ ರಿಯಲ್ ಸ್ಟಾರ್ ಉಪೇಂದ್ರ (Real star Upendra)- ನಟಿ ಪ್ರಿಯಾಂಕ ಮನೆಯಲ್ಲೂ ಅದ್ದೂರಿಯಾಗಿ ಹಬ್ಬ ಆಚರಿಸಲಾಗಿದೆ.
ಗಣೇಶ ಹಬ್ಬದ ಸಂಭ್ರಮದ ಫೋಟೋಗಳನ್ನು ಉಪೇಂದ್ರ ಮತ್ತು ಪ್ರಿಯಾಂಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದು, ಉಪೇಂದ್ರ, ಪ್ರಿಯಾಂಕ ಮತ್ತು ಮುದ್ದಾದ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ (Aishwarya Upendra) ಜೊತೆಗಿನ ಫೋಟೋ ಇದಾಗಿದೆ.
ಈ ಫೋಟೋದಲ್ಲಿ ಉಪೇಂದ್ರ ಪುತ್ರಿ ಐಶ್ವರ್ಯ ಫೋಟೋ ಸದ್ಯ ಭಾರಿ ವೈರಲ್ ಆಗುತ್ತಿದೆ. ಲೆಹೆಂಗಾದನಲ್ಲಿ ಜೀವಂತ ಬೊಂಬೆಯಂತೆ ಕಾಣುತ್ತಿರುವ ಐಶ್ವರ್ಯನನ್ನು ನೋಡಿ ಜನರು ಭಾರಿ ಮೆಚ್ಚಿಕೊಂಡಿದ್ದು, ಮಗಳಿಗೂ ಶುಭ ಹಾರೈಸಿದ್ದಾರೆ.
ಐಶ್ವರ್ಯ ಲೆಹೆಂಗಾ ಧರಿಸಿದ ವಿಡೀಯೋವನ್ನು ಸಹ ಪ್ರಿಯಾಂಕ ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಮೆಚ್ಚಿಕೊಂಡ ನೆಟ್ಟಿಗರು ಜೀವಂತ ಬೊಂಬೆ, ಅಮ್ಮನಂತೆ ನೀವು ಸಹ ಥೇಟ್ ಗೊಂಬೆಯಂತೆ ಇದ್ದೀರಿ ಎಂದು ಕೆಲವರು ಹೇಳಿದ್ದಾರೆ.
ಇನ್ನೂ ಕೆಲವರು ಬಾರ್ಬಿ ಡಾಲ್ ಎಂದು ಕಾಮೆಂಟ್ ಮಾಡಿದ್ರೆ, ಮತ್ತೆ ಕೆಲವರು ತುಂಬಾನೆ ಮುದ್ದಾಗಿದ್ದಾರೆ, ಇವರು ಯಾವಾಗ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಾರೆ ಎಂದು ಕೇಳಿದ್ದಾರೆ. ಅಪ್ಸರೆಯಂತೆ ಕಾಣುತ್ತಿದ್ದಾರೆ, ಏಂಜಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಐಶ್ವರ್ಯ ಉಪೇಂದ್ರ ಈಗಾಗಲೆ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬಾಲ ನಟಿಯಾಗಿ ಪ್ರಿಯಾಂಕ ಜೊತೆ ಮಮ್ಮಿ ಮತ್ತು ದೇವಕಿ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಯುವ ರಾಜ್ ಕುಮಾರ್ ನಟಿಸಿರುವ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.