Lucia, U-Turn ನಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕರು ಎಲ್ಲಿ ಕಾಣೆಯಾದ್ರು?

Published : Aug 05, 2025, 05:09 PM IST

ಲೂಸಿಯಾ, ಯೂಟರ್ನ್, ಲೈಫು ಇಷ್ಟೇನೆಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಪವನ್ ಕುಮಾರ್ ಎಲ್ಲಿ ಕಾಣೆಯಾಗಿದ್ದಾರೆ? ಹೊಸ ಸಿನಿಮಾ ಯಾವಾಗ ಬರುತ್ತಿದೆ?

PREV
16

ಚಂದನವನದ ಪ್ರತಿಭಾನ್ವಿತ ನಿರ್ದೇಶಕರುಗಳಲ್ಲಿ ಪವನ್ ಕುಮಾರ್ (Pawan Kumar) ಕೂಡ ಒಬ್ಬರು. ನಟನಾಗಿ ನಿರ್ದೇಶಕನಾಗಿ, ಸಿನಿಮಾ ಕಥೆ ಬರೆಯುವವರಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ ಪವನ್. ಆದರೆ ಪವನ್ ಕುಮಾರ್ ಸಿನಿಮಾ ಮಾಡಿಯೇ ಇದೀಗ ಸುಮಾರು 2 ವರ್ಷಗಳು ಕಳೆದಿವೆ.

26

ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಮತ್ತು ಪಂಚರಂಗಿ ಚಿತ್ರಕ್ಕೆ ಕಥೆ ಬರೆದಿದ್ದ ಪವನ್ ಕುಮಾರ್, ಲೈಫು ಇಷ್ಟೇನೆ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದಲ್ಲಿ ಲೂಸಿಯಾ, ಯೂಟರ್ನ್ (U turn)ನಂತಹ ಅದ್ಭುತ ಸಿನಿಮಾಗಳನ್ನು ಮಾಡಿ ದೇಶ ಸಿನಿರಸಿಕರು ಕನ್ನಡದತ್ತ ನೋಡುವಂತೆ ಮಾಡಿದರು.

36

ಇದಾದ ನಂತರ ಕನ್ನಡದಲ್ಲಿ ಪವನ್ ಕುಮಾರ್ ಸಿನಿಮಾ ನಿರ್ದೇಶನ ಮಾಡಿಯೇ ಇಲ್ಲ. ಕೊನೆಯದಾಗಿ 2023ರಲ್ಲಿ ಮಲಯಾಳಂ ಸಿನಿಮಾ ಧೂಮಂ ನಿರ್ದೇಶನ ಮಾಡಿದರು. ಅದಕ್ಕೂ ಮುನ್ನ ಯೂಟರ್ನ್ ತಮಿಳು ಮತ್ತು ತೆಲುಗಿನಲ್ಲಿ ನಿರ್ದೇಶನ ಮಾಡಿ ಗೆದ್ದರು.

46

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪ್ರತಿಭಾನ್ವಿತ ನಿರ್ದೇಶಕರಿಗೆ ಬೇಡಿಕೆ ಹೆಚ್ಚುತ್ತಿದೆ. ಟ್ರೋಲ್ ಪೇಜ್ ಗಳು ಸರ್ ಆದಷ್ಟು ಬೇಗ ನಿಮ್ಮ ಮಾಸ್ಟರ್ ಪೀಸ್ ಸಿನಿಮಾದೊಂದಿಗೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಿ. ನಿಮ್ಮ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.

56

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಪೋಸ್ಟ್ ಗೆ ಉತ್ತರಿಸಿರುವ ಪವನ್ ಕುಮಾರ್, Lets hope something happens soon ಎಂದು ಕಾಮೆಂಟ್ ಮಾಡಿದ್ದಾರೆ. ಅಂದರೆ ಪವನ್ ಕುಮಾರ್ ಹೊಸದಾಗಿ ಸಿನಿಮಾ ನಿರ್ದೇಶನಕ್ಕೆ ತಯಾರಿ ಮಾಡುತ್ತಿದ್ದಾರೆಯೇ? ಹಾಗಿದ್ರೆ ಆ ಸಿನಿಮಾ ಯಾವಾಗ ಶುರುವಾಗಲಿದೆ? ಯಾವಾಗ ಬಿಡುಗಡೆಯಾಗಲಿದೆ ಅನ್ನೋದನ್ನು ನಿರ್ದೇಶಕರೇ ಹೇಳಬೇಕು.

66

ಅಂದ ಹಾಗೆ ಪವನ್ ಕುಮಾರ್ ನಿರ್ದೇಶಕರಾಗಿ ಮಾತ್ರ ಅಲ್ಲ, ನಟರಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೈಫು ಇಷ್ಟೇನೆ, ಗುಲ್ಟು, ಪಂಚರಂಗಿ. ಸರ್ಕಸ್, ಮನಸಾರೆ, ಅಳಿದು ಉಳಿದವರು, ನ್ಯೂ ಫ್ರೆಂಡ್, ಹನಿಮೂನ್, ಗಾಳಿಪಟ 2 (Galipata 2) ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಬ್ಯಾಚುಲರ್ ಪಾರ್ಟಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಲೈಲಾ ಎನ್ನುವ ಹಿಂದಿ ಹಾಗೂ ಕುಡಿ ಎಡಮೈತೆ ಎನ್ನುವ ತೆಲುಗು ವೆಬ್ ಸೀರಿಸ್ ಗಳನ್ನು ಸಹ ನಿರ್ದೇಶನ ಮಾಡಿದ್ದಾರೆ.

Read more Photos on
click me!

Recommended Stories