ತಮಿಳಿನ ಖ್ಯಾತ ನಟ ಅಜಿತ್ ಜೊತೆ ಸಾನ್ಯಾ ಅಯ್ಯರ್…. ಜೊತೆಯಾಗಿ ಸಿನಿಮಾ ಮಾಡ್ತಿದ್ದಾರಾ?

Published : Mar 25, 2024, 05:13 PM IST

ಇತ್ತೀಚೆಗೆ ನಟಿ ಸಾನ್ಯಾ ಅಯ್ಯರ್ ತಮಿಳಿನ ಸೂಪರ್ ಸ್ಟಾರ್ ನಟ ಅಜಿತ್ ಜೊತೆ ಫೋಟೊ ತೆಗೆಸಿಕೊಂಡಿದ್ದು, ಸಾನ್ಯಾ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರ ಅಂತ ಕೇಳ್ತಿದ್ದಾರೆ ಫ್ಯಾನ್ಸ್.   

PREV
17
ತಮಿಳಿನ ಖ್ಯಾತ ನಟ ಅಜಿತ್ ಜೊತೆ ಸಾನ್ಯಾ ಅಯ್ಯರ್…. ಜೊತೆಯಾಗಿ ಸಿನಿಮಾ ಮಾಡ್ತಿದ್ದಾರಾ?

ಕನ್ನಡದ ಪುಟ್ಟ ಗೌರಿಯ ಮದುವೆ ಮತ್ತು ಬಿಗ್ ಬಾಸ್ ಮೂಲಕ ಸಂಚಲನ ಮೂಡಿಸಿದ ನಟಿ ಸಾನ್ಯಾ ಅಯ್ಯರ್ (Saanya Iyer). ಇವರು ತಮ್ಮ ಸೋಶಿಯಲ್ ಲೈಫ್ ನಿಂದಾಗಿಯೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸ್ಟಾರ್ ನಟನೊಂದಿಗೆ ಫೋಟೋ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ. 

27

ಹೌದು, ನಟಿ ಸಾನ್ಯಾ ಅಯ್ಯರ್ ಇತ್ತೀಚೆಗೆ ತಮಿಳು ಚಿತ್ರರಂಗದ ಖ್ಯಾತೆ ನಟ ಅಜಿತ್ ಕುಮಾರ್ (Ajith Kumar) ಅವರನ್ನು ಭೇಟಿಯಾಗಿದ್ದು, ಅವರೊಂದಿಗೆ ಕೆಲವು ಫೋಟೋಗಳಿಗೆ ಪೋಸ್ ಕೊಟ್ಟಿದ್ದು, ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

37

ಸಾನ್ಯಾ ಒಬ್ಬರು ಮಾತ್ರವಲ್ಲ, ಅವರ ತಾಯಿ ದೀಪಾ ಅಯ್ಯರ್ ಮತ್ತು ಚಿಕ್ಕಮ್ಮ ಶಿಲ್ಪಾ ಅಯ್ಯರ್ ಸಹ ಜೊತೆಗಿದ್ದು, ಅಜಿತ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಅಜಿತ್ ಭೇಟಿಯಿಂದ ಸಾನ್ಯಾ ಅಯ್ಯರ್ ಸಿಕ್ಕಾಪಟ್ಟೆ ಖುಷಿಯಾಗಿದ್ದು, ಆ ಸಂಭ್ರಮವನ್ನು ಸೋಶಿಯಲ್ ಮಿಡಿಯಾದಲ್ಲಿ (social media) ಹಂಚಿಕೊಂಡಿದ್ದಾರೆ. 
 

47

ಕ್ರಶಿಂಗ್, ಫ್ಯಾನ್ ಗರ್ಲ್ ಮೂಮೆಂಟ್ (fangirl moment) ಎಂದು ಬರೆದಿರುವ ಸಾನ್ಯಾ, ತಲಾ ಅಜಿತ್ ಅವರನ್ನು ಭೇಟಿಯಾಗುವ ಸಿಹಿ ಅವಕಾಶವೊಂದು ನನಗೆ ಒದಗಿ ಬಂದಿದೆ. ಧೈರ್ಯಶಾಲಿ ಸಜ್ಜನ,  ವಿನಮ್ರ ವ್ಯಕ್ತಿತ್ವದ ಮ್ಯಾಗ್ನೆಟ್ ನಂತೆ ಆಕರ್ಷಿತ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. 
 

57

ಸಾನ್ಯಾ ತನ್ನ ಫ್ಯಾಮಿಲಿ ಜೊತೆ ಕಳೆದ ಕೆಲದಿನಗಳಿಂದ ಕೂರ್ಗ್ ನಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಆಯಾತ ರೆಸಾರ್ಟ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಅಜಿತ್ ಅವರನ್ನು ಭೇಟಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತದೆ. 
 

67

ಇಂದ್ರಜಿತ್ ಮಗ ಸಮರ್ಜಿತ್ ಲಂಕೇಶ್ (Samarjith Lankesh) ಜೊತೆ ಗೌರಿ ಸಿನಿಮಾದಲ್ಲಿ ನಟಿಸುತ್ತಿರುವ ಪುಟ್ಟ ಗೌರಿ ಸಾನ್ಯಾ ಅಯ್ಯರ್, ಈಗಷ್ಟೇ ಡಬ್ಬಿಂಗ್ ಮುಗಿಸಿದ್ದು, ಇನ್ನೇನು ಸಿನಿಮಾ ಬಿಡುಗಡೆಯಾಗುವ ಹೊಸ್ತಿಲಲ್ಲಿದೆ. ಸಿನಿಮಾದ ಫೋಟೋಗಳು ಸಹ ಸಾಕಷ್ಟು ವೈರಲ್ ಆಗಿದ್ದವು. 
 

77

ಇವೆಲ್ಲದರ ನಡುವೆ ಸಾನ್ಯಾ ನಟ ಅಜಿತ್ ಅವರನ್ನು ಭೇಟಿಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಅಭಿಮಾನಿಗಳಂತೂ ಸಾನ್ಯಾ ತಮಿಳು ಸಿನಿಮಾಕ್ಕೆ ಹಾರಿದರೆ? ಅಜಿತ್ ಜೊತೆ ನಟಿಸುತ್ತಿದ್ದೀರಾ? ಅವರನ್ನು ನೀವು ಎಲ್ಲಿ ಭೇಟಿಯಾದಿರಿ ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. 

Read more Photos on
click me!

Recommended Stories