ಕನ್ನಡ ಚಿತ್ರರಂಗದ ಸಿಂಪಲ್ ಹುಡುಗಿ ಅದಿತಿ ಪ್ರಭುದೇವ (Aditi Prabhudeva) ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ.
ಜನವರಿ 1, 2024ರಂದು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಅದಿತಿ ಪ್ರಭುದೇವ ಪೋಸ್ಟ್ ಹಾಕಿದ್ದರು. ಇದಕ್ಕೆ ಫೋಟೋಶೂಟ್ ಮಾಡಿಸಿದ್ದರು.
ಹಸಿರು ಮತ್ತು ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಕ್ರೀಮ್ ಬಣ್ಣದ ಶೇರ್ವಾನಿಯಲ್ಲಿ ಯಶಸ್ ಕಾಣಿಸಿಕೊಂಡಿದ್ದಾರೆ.
ಅದಿತಿ ಸೀಮಂತ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ಭಾಗಿಯಾಗಿದ್ದಾರೆ. ಅದರಲ್ಲಿ ಶರಣ್ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.
ಅದಿತಿ ಪ್ರಭುದೇವಗೆ ಹೆಣ್ಣು ಮಗು ಆಗಬೇಕು ಗಂಡು ಮಗು ಆಗಬೇಕು ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಗೆಸ್ ಮಾಡುತ್ತಿದ್ದಾರೆ.
'ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ"' ಎಂದು ಅದಿತಿ ಬರೆದುಕೊಂಡಿದ್ದರು.
'ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ "ಅಮ್ಮ". ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ 'ಅಮ್ಮ' 2024 ಕ್ಕೆ ನಾನು ' ಅಮ್ಮ' ಎಂದಿದ್ದರು ಅದಿತಿ.
Vaishnavi Chandrashekar