ಕೈಯಲ್ಲಿ ಬೀಡಿ ಹಿಡಿದು ಬೋಲ್ಡ್ ಪೋಸ್ ನೀಡಿದ ಸಂಗೀತ ಭಟ್…. ಹಾಟಪ್ಪ ಹಾಟ್ ಎಂದ ಫ್ಯಾನ್ಸ್

First Published | Feb 18, 2024, 6:57 PM IST

ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ಆಲಿಯಾಸ್ ಸುದರ್ಶನ್ ರಂಗಪ್ರಸಾದ್ ಪತ್ನಿ ಕನ್ನಡ ಸಿನಿಮಾ ನಟಿ ಸಂಗೀತ ಭಟ್ ಕೈಯಲ್ಲಿ ಬೀಡಿ ಹಿಡಿದು ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಈ ಹಾಟ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಹಲವು ಕಮೆಂಟ್ಸ್ ಹರಿದು ಬಂದಿವೆ.
 

ಕನ್ನಡದ ಖ್ಯಾತ ನಟಿ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ನ ತಾಂಡವ್ ಖ್ಯಾತಿಯ ಸುದರ್ಶನ್ ರಂಗಪ್ರಸಾದ್ ಪತ್ನಿ ಸಂಗೀತ ಭಟ್ (Sangeetha Bhat) ಸಖತ್ ಬೋಲ್ಡ್ ಆಗಿ ಪೋಸ್ ನೀಡಿರುವ ಫೋಟೋಗಳ ಸೀರೀಸ್ ಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಕ್ರೀಂ ಬಣ್ಣದ ಲಂಗ ಮತ್ತು ಡೀಪ್ ನೆಕ್ ಬ್ಲೌಸ್ ಧರಿಸಿರುವ ಸಂಗೀತ ಭಟ್, ಕೈಯಲ್ಲಿ ಬೀಡಿ ಹಿಡಿದು, ತುಂಬಾನೆ ಬೋಲ್ಡ್ ಆಗಿ ಫೋಟೊ ಶೂಟ್ (bold photoshoot) ಮಾಡಿಸಿಕೊಂಡಿದ್ದಾರೆ. ಆ ಮೂಲಕ ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ್ದಾರೆ. 
 

Tap to resize

ಫೋಟೋಗಳ ಸೀರೀಸ್ ಶೇರ್ ಮಾಡಿರುವ ಸಂಗೀತ ಭಟ್ ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ. ಬಿಳಿ ಲಂಗ, ಬ್ಲೌಸ್ ಜೊತೆ ರೆಡ್ ಲಿಪ್ ಸ್ಟಿಕ್, ರೆಡ್ ಬಿಂದಿ, ಜೊತೆಗೆ ಸಿಲ್ವರ್ ಜ್ಯುವೆಲ್ಲರಿ ಧರಿಸಿದ್ದಾರೆ. 
 

ಸಿನಿಮಾ, ಸೀರಿಯಲ್ ಒಟ್ಟಲ್ಲಿ ನಟನೆಯಿಂದ ಕೊಂಚ ದೂರವೇ ಉಳಿದಿರುವ ಸಂಗೀತ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಬೋಲ್ಡ್ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಸಂಗೀತ ಫೋಟೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಟಪ್ಪ ಹಾಟು ಸಖತ್ತು ಹಾಟು ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಏನು ಭಾವ ಭಂಗಿ ಎಂದು ಹೇಳಿದ್ದಾರೆ. 
 

ತುಂಬಾನೆ ಹಾಟ್ ಆಗಿ ಕಾಣುತ್ತಿದ್ದೀರಿ, ಸ್ಮೋಕಿಂಗ್ ಆರೋಗ್ಯಕ್ಕೆ ಹಾನಿಕಾರಕ, ಆದರೆ ನೀವಂತೂ ತುಂಬಾನೆ ಹಾಟ್, ಬೆಂಕಿ ತರ ಕಾಣಿಸುತ್ತಿದ್ದೀರಿ. ಫೈರ್ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 
 

ಸಂಗೀತ್ ಭಟ್ ಕೊನೆಯದಾಗಿ ರೂಪಾಂತರ, ಕ್ಲಾಂತಾ ಸಿನಿಮಾಗಳಲ್ಲಿ ಕೊನೆಯದಾಗಿ ನಟಿಸಿದ್ದರು. ಇದರ ನಂತರ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸೀರಿಯಲ್ ನಲ್ಲೂ ಸಹ ನಟಿಸಿದ್ದರು. ಇದಾದ ನಂತರ ನಟನೆಯಿಂದ ದೂರಾನೆ ಉಳಿದಿದ್ದಾರೆ. 
 

Latest Videos

click me!