ಫ್ಯಾಮಿಲಿ ಜೊತೆ ಗೋಲ್ಡನ್ ಕ್ವೀನ್ ಅಮೂಲ್ಯ ಮಸ್ತ್ ಫೋಟೋಶೂಟ್: ಏನ್ ವಿಶೇಷ ಐಸೂ ಎಂದ ಫ್ಯಾನ್ಸ್‌!

Published : Feb 19, 2024, 12:30 AM IST

ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಇದರ ನಡುವೆ ತಮ್ಮ ಪತಿ ಮತ್ತು ಅವಳಿ ಮಕ್ಕಳೊಂದಿಗೆ ಮಸ್ತ್ ಆಗಿ ಫೋಟೋಶೂಟ್ ಮಾಡಿದ್ದಾರೆ. 

PREV
18
ಫ್ಯಾಮಿಲಿ ಜೊತೆ ಗೋಲ್ಡನ್ ಕ್ವೀನ್ ಅಮೂಲ್ಯ ಮಸ್ತ್ ಫೋಟೋಶೂಟ್: ಏನ್ ವಿಶೇಷ ಐಸೂ ಎಂದ ಫ್ಯಾನ್ಸ್‌!

‘ಚೆಲುವಿನ ಚಿತ್ತಾರ’ನಟಿಯ ಕುಟುಂಬದ ಸುಂದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದೀಗ ಪತಿ ಮತ್ತು ಅವಳಿ ಮಕ್ಕಳೊಂದಿಗೆ ನಟಿ ಫೋಟೋಶೂಟ್ ಮಾಡಿಸಿದ್ದಾರೆ. 

28

ಅವಳಿ ರಾಜಕುಮಾರರ ಜೊತೆ ರಾಜ ಮತ್ತು ರಾಣಿಯಾಗಿ ಅಮೂಲ್ಯ ದಂಪತಿ ಮಿಂಚಿದ್ದಾರೆ. ಇಬ್ಬರು ಮಕ್ಕಳು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅಮೂಲ್ಯ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಜಗದೀಶ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. 

38

ನಟಿಯ ಫೋಟೋಶೂಟ್‌ ನೋಡಿದ ನೆಟ್ಟಿಗರು, ಸೂಪರ್ ಫ್ಯಾಮಿಲಿ, ನಿಮ್ಮ ಕುಟುಂಬದ ಮೇಲೆ ಯಾರ ಕಣ್ಣು ಬೀಳದೆ ಇರಲಿ, ಏನ್ ವಿಶೇಷ ಐಸೂ, ತುಂಬಾ ಮುದ್ದಾಗಿದ್ದೀರಾ ಅಂತೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

48

ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದ್ದ ನಟಿ ಅಮೂಲ್ಯ ಅವರು ಅಪ್ಪಟ ಗೃಹಿಣಿಯಾಗಿ ಕುಟುಂಬದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅದರಲ್ಲೂ ಅವಳಿ ಮಕ್ಕಳು ಆದ್ಮೇಲಂತೂ ಮತ್ತಷ್ಟು ನಟಿ ಬ್ಯುಸಿಯಾದರು. ಈಗ ಮತ್ತೆ ತಮ್ಮ ಕೆರಿಯರ್ ಕಡೆ ನಟಿ ಮುಖ ಮಾಡಿದ್ದಾರೆ.

58

ಸುಮಾರು 7 ವರ್ಷಗಳ ಹಿಂದೆ ನಟ ಗಣೇಶ್ ಅವರ 'ಮುಗುಳು ನಗೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಕ್ಯಾಮೆರಾ ಮುಂದೆ ಬರಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

68

ಸದ್ಯ ಪ್ರಜ್ವಲ್ ದೇವರಾಜ್ ನಟನೆಯ ಮುಂಬರುವ ಸಿನಿಮಾದಲ್ಲಿ ಅಮೂಲ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೊಸ ಕಥೆ, ಹೊಸ ಬಗೆಯ ಪಾತ್ರದ ಮೂಲಕ ಬರಲು ತಯಾರಿ ಮಾಡಿಕೊಂಡಿದ್ದಾರೆ. 

78

ಅಭಿಮಾನಿಗಳ ಆಸೆಯಂತೆ ಮತ್ತೆ ನಾಯಕಿಯಾಗಿ ಬರುತ್ತಿರುವ ಅಮೂಲ್ಯ ಜಿಮ್‌ನಲ್ಲಿ ವರ್ಕೌಟ್ ಮಾಡಿ, ಬ್ಯೂಟಿ ಮತ್ತು ಫಿಟ್‌ನೆಸ್ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮದುವೆಯಾಗಿ 2 ಮಕ್ಕಳ ತಾಯಿಯಾಗಿದ್ದರೂ ಕೂಡ ಸಂತೂರ್ ಮಮ್ಮಿಯಂತೆ ಮಿಂಚ್ತಿದ್ದಾರೆ ಅಮೂಲ್ಯ.

88

ನಟಿ ಅಮೂಲ್ಯ  2000ರ ದಶಕದ ಆರಂಭದಲ್ಲಿ  'ಪರ್ವ' ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು. 2007ರಲ್ಲಿ ಚೆಲುವಿನ ಚಿತ್ತಾರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories