ಹಿರಿಯ ನಟ ಚರಣ್ ರಾಜ್ ತಮ್ಮ ಕಷ್ಟದ ದಿನಗಳನ್ನು ಮತ್ತು ನಟಿ ವಿಜಯಶಾಂತಿ ತಮ್ಮ ಪತ್ನಿಯ ಬಳಿ ಮಾಡಿದ ತಮಾಷೆಯೊಂದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. 'ಪ್ರತಿಘಟಣ' ಚಿತ್ರದ ದೃಶ್ಯವೊಂದನ್ನು ಉಲ್ಲೇಖಿಸಿ ವಿಜಯಶಾಂತಿ ಆಡಿದ ಮಾತಿನಿಂದ ತಮ್ಮ ಪತ್ನಿ ಹೇಗೆ ಆಘಾತಕ್ಕೊಳಗಾಗಿದ್ದರೆಂದು ವಿವರಿಸಿದ್ದಾರೆ.
ಕನ್ನಡ, ತಮಿಳು, ತೆಲುಗು, ಒಡಿಯಾ ಸೇರಿ 11 ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡವರು ಹಿರಿಯ ನಟ ಚರಣ್ ರಾಜ್ (Charan Raj). ಅವರಿಗೆ ಈಗ 67 ವರ್ಷ ವಯಸ್ಸು. ಅವರು ಸದ್ಯ ಚಿತ್ರರಂಗದಿಂದ ತುಸು ದೂರವಾಗಿದ್ದರೂ, ಸಂದರ್ಶನಗಳ ಮೂಲಕ ತಮ್ಮ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
26
ಸಾಯಲೂ ಹೋಗಿದ್ದ ನಟ
ಅತ್ಯಂತ ಕಷ್ಟದ ಪರಿಸ್ಥಿತಿಯಿಂದ ಮೇಲೆ ಬಂದು, ಬದುಕು ಕಟ್ಟಿಕೊಂಡವರು ಚರಣ್ ರಾಜ್. ಅವರು ಈ ಹಿಂದೆ, ಕೆಲಸವಿಲ್ಲದ ಕಾರಣ ರೈಲು ಹಳಿಯ ಮೇಲೆ ಬಿದ್ದು ಕೆಲವು ಬಾರಿ ಸಾಯಲೂ ಹೋಗಿದ್ದನ್ನು ಹೇಳುತ್ತಾರೆ. 1978ರ ಸಮಯ. ಆರ್ಕೆಸ್ಟ್ರಾದಲ್ಲಿ ಇದ್ದಾಗ ಊಟಕ್ಕೆ ಇಲ್ಲದೇ ಕೆಲವು ದಿನ ನೀರು ಕುಡಿದು ಬದುಕಿದವರು ಇವರು. ಕೆಲವೊಮ್ಮೆ ಸ್ನೇಹಿತರು ಬನ್ ಕೊಟ್ಟರೆ ಅದರಿಂದಲೇ ಹೊಟ್ಟೆ ತುಂಬಿಸಿಕೊಂಡವರು.
36
ನಟಿ ವಿಜಯಶಾಂತಿ ಕಿತಾಪತಿ
ಇಂಥ ನಟ, ಚಿತ್ರಲೋಕಕ್ಕೆ ನೀಡಿದ್ದ ಸಂದರ್ಶನದಲ್ಲಿ ನಟಿ ವಿಜಯಶಾಂತಿ ಅವರು ತಮ್ಮ ಪತ್ನಿಯ ಎದುರು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದು, ಅದರ ವಿಡಿಯೋ ಪುನಃ ವೈರಲ್ ಆಗುತ್ತಿದೆ.
ಅದು ತೆಲಗು ಚಿತ್ರ ಪ್ರತಿಘಟಣ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದ ಚರಣ್ ಅವರು, ಅದಾದ ಬಳಿಕ ತಮಗೆ ಮದುವೆಯಾದಾಗ, ಈ ಚಿತ್ರದ ನಾಯಕಿ ವಿಜಯಶಾಂತಿ ಮಾಡಿದ್ದ ಜೋಕ್ ಹೇಗೆ ತಮ್ಮ ಪತ್ನಿಯನ್ನು ಶಾಕ್ಗೆ ಒಳಮಾಡಿತ್ತು ಎನ್ನುವ ಬಗ್ಗೆ ಹೇಳಿದ್ದಾರೆ.
56
ಪತ್ನಿಗೆ ಶಾಕ್
ನನ್ನ ಪತ್ನಿಗೆ ಈ ಸಿನಿಮಾದ ಬಗ್ಗೆ ಗೊತ್ತಿರಲಿಲ್ಲ. ಆಗ ನಟಿ ವಿಜಯಶಾಂತಿ ಅವರು ಬಂದು ನಿನ್ನ ಗಂಡ ನಿಮಗಿಂತ ಮೊದಲೇ ನನ್ನನ್ನು ರೇ*ಪ್ ಮಾಡಿರುವುದಾಗಿ ಹೇಳಿದಾಗ, ಪತ್ನಿಗೆ ಶಾಕ್ ಆಗಿಹೋಯ್ತು ಎಂದಿದ್ದಾರೆ.
66
ಪತ್ನಿ ಸುಸ್ತು!
ಕೊನೆಗೆ, ಅದು ಪ್ರತಿಘಟಣ ಚಿತ್ರದಲ್ಲಿ ಚರಣ್ ರಾಜ್ ಅವರು ನಟಿ ವಿಜಯಶಾಂತಿ ಅವರನ್ನು ರೇ*ಪ್ ಮಾಡುವ ದೃಶ್ಯವಿತ್ತು. ಆ ಬಗ್ಗೆ ಹೀಗೆ ತಮಾಷೆಯಾಗಿ ನಟಿ ಮಾತನಾಡಿ ಚರಣ್ ರಾಜ್ ಅವರ ಪತ್ನಿಯನ್ನು ಸುಸ್ತು ಮಾಡಿದ್ದರು.