ವನಿತಾ ವಾಸು ಭಾರೀ ರಹಸ್ಯಗಳು ರಿವೀಲ್; ಎಲ್ಲಿ ಹೇಳಿದ್ದು.. ಏನಂದ್ರು..?!

Published : Apr 27, 2025, 06:04 PM ISTUpdated : Apr 27, 2025, 06:28 PM IST

ಅನಂತ್‌ ನಾಗ್ ಸರ್ ಸಿನಿಮಾದಲ್ಲಿ ಅದೇನ್ ಆಯ್ತು ಅಂದ್ರೆ.. 'ಅವ್ರಿಗೆ, ಅಂದ್ರೆ ಅನಂತ್‌ ನಾಗ್‌ ಸರ್‌ಗೆ, ಏನೋ ಆಗಿದೆ ಮ್ಯಾಟರ್ ಅಂತ ಗೊತ್ತಾಗಿದೆ, ಆದ್ರೆ ಅವ್ರು ಏನೂ ಕೇಳಿಲ್ಲ. ಯಾಕೆ ಅಂದ್ರೆ ನಾನು..

PREV
110
ವನಿತಾ ವಾಸು ಭಾರೀ ರಹಸ್ಯಗಳು ರಿವೀಲ್; ಎಲ್ಲಿ ಹೇಳಿದ್ದು.. ಏನಂದ್ರು..?!

ಕನ್ನಡದ ಹಿರಿಯ ನಟಿ ವನಿತಾ ವಾಸು ಅವರು ಸಂದರ್ಶನವೊಂದರಲ್ಲಿ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ರಘುರಾಮ್ (RR) ಸಂದರ್ಶನದಲ್ಲಿ ನಟಿ ವನಿತಾ ವಾಸು ಅವರು ಅನೇಕ ಸಂಗತಿಗಳ  ಬಗ್ಗೆ ಬೆಳಕು ಚೆಲ್ಲಿದ್ದಾರೆ. 

210

ಜೊತೆಗೆ, 'ನೂರೊಂದು ನೆನಪು' ಶೀರ್ಷಿಕೆಯಡಿ ಮೂಡಿ ಬಂದ ರಘುರಾಮ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಬಗ್ಗೆ ಬರುತ್ತಿದ್ದ ನೆಗೆಟಿವ್ ಸುದ್ದಿಗಳ ಬಗ್ಗೆಯೂ ರಿಯಾಕ್ಟ್ ಮಾಡಿದ್ದಾರೆ. ಹಾಗಿದ್ದರೆ ನಟಿ ವನಿತಾ ವಾಸು ಅವರು ಅದೇನು ಹೇಳಿದ್ದಾರೆ ನೋಡಿ.. 

310

'ಕೆಲವು ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ಏನಾದ್ರೂ ಬರೆದಾಗ ನೀವು ಇನ್ನೂ ಸ್ಟ್ರಾಂಗ್ ಅದ್ರಿ' ಎಂದ ರಘುರಾಮ್ ಮಾತಿಗೆ ನಟಿ ವನಿತಾ ವಾಸು ಅವರು 'ಹೌದು, ಪಕ್ಕದಮನೆಯವ್ರ ಬಗ್ಗೆ ಯಾರಾದ್ರೂ ಬರೀತಾರಾ? ಫೇಮಸ್ ಆಗಿರೋ ವ್ಯಕ್ತಿಗಳ ಬಗ್ಗೆ ಬರೀತಾರೆ. ನಿಮ್ಮ ಬಗ್ಗೆ ಏನೇ ಬರೆದ್ರೂ, ಕೆಟ್ಟದಾಗಿ ಬರೆದ್ರೂ ಕೂಡ ನೀವು ಫೇಮಸ್ಸು ಅಂತ ಅರ್ಥ..' ಎಂದಿದ್ದಾರೆ ವನಿತಾ ವಾಸು. 
 

410

ಇನ್ನೂ ಕೆಲವು ಸಂಗತಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ವನಿತಾ ವಾಸು ಅವರು 'ನನ್ನಲ್ಲಿ ಒಂದು ಸ್ವಭಾವ ಇದೆ.. ನೀವು ಪ್ರೀತಿಯಿಂದ ಮಾತಾಡಿಸಿದ್ರೆ ನಾನು ಫ್ರೀ ಆಗಿ ಬೇಕಾದ್ರೂ ಕೆಲಸ ಮಾಡಿಬಿಡ್ತೀನಿ.. 
 

510

ಅನಂತ್‌ ನಾಗ್ ಸರ್ ಸಿನಿಮಾದಲ್ಲಿ ಅದೇನ್ ಆಯ್ತು ಅಂದ್ರೆ.. 'ಅವ್ರಿಗೆ, ಅಂದ್ರೆ ಅನಂತ್‌ ನಾಗ್‌ ಸರ್‌ಗೆ, ಏನೋ ಆಗಿದೆ ಮ್ಯಾಟರ್ ಅಂತ ಗೊತ್ತಾಗಿದೆ, ಆದ್ರೆ ಅವ್ರು ಏನೂ ಕೇಳಿಲ್ಲ. ಯಾಕೆ ಅಂದ್ರೆ ನಾನು ಯಾವತ್ತೂ ಯಾರನ್ನೂ ಹಾಗೆ ಕಾಯಿಸಿಲ್ಲ.. ಎಂದಿದ್ದಾರೆ ನಟಿ ವನಿತಾ ವಾಸು. 

610

ಪ್ರೋಮೋದಲ್ಲಿ ಬಿಟ್ & ಫೀಸ್‌ ಇದೆ, ಸಂಪೂರ್ಣ ಸಂಗತಿ ಬೇಕು ಅಂದ್ರೆ ಪೂರ್ತಿ ಸಂದರ್ಶನ ನೋಡಬೇಕು. ಅಂದಹಾಗೆ, ನಟಿ ವನಿತಾ ವಾಸು ಅವರ ಬಗ್ಗೆ ಕನ್ನಡಿಗರಿಗೆ ಸಾಕಷ್ಟು ಸಂಗತಿ ಗೊತ್ತಿದೆ. ಅವರನ್ನು ಹಿರಿಯ ನಟಿ ಎಂದೇ ಗುರ್ತಿಸುತ್ತಾರೆ.

710

ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ವನಿತಾ ವಾಸು ಅವರು, ಆಗುಂತಕ (Aaganthuka), ಕಾಡಿನ ಬೆಂಕಿ (Kadina Benki), ತರ್ಕ (Tarka), ಉತ್ಕರ್ಷ ಹಾಗೂ ನಾಗಮಂಡಲ (Utkarsha and Nagamandala) ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

810

ಅನಂತ್‌ ನಾಗ್, ಶಂಕರ್‌ ನಾಗ್, ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್‌ ನಟರುಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ಕಿರುತೆರೆ ಧಾರಾವಾಹಿಯಲ್ಲಿ ಬ್ಯುಸಿ ಅಗಿರುವ ನಟಿ ವನಿತಾ ವಾಸು ಅವರು ಸಿನಿಮಾದಿಂದ ದೂರವೇನೂ ಇಲ್ಲ. ಆದರೆ, ಅಳೆದೂ ತೂಗಿ ಪಾತ್ರ ಓಕೆ ಎನ್ನಿಸಿದರೆ ಮಾತ್ರ ಮಾಡುತ್ತಿದ್ದಾರೆ ಎನ್ನಬಹುದೇನೋ!

910

ಒಟ್ಟಿನಲ್ಲಿ, ನಟಿ ವನಿತಾ ವಾಸು ಅವರು ಹೆಚ್ಚಾಗಿ ನೆಗೆಟವ್ ರೋಲ್‌ನಲ್ಲೇ ಹೆಚ್ಚು ಗುರುತಿಸಕೊಂಡರೂ ಕೂಡ ನಾಯಕಿಯಾಗಿ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ಸಿಕ್ಕರೂ ಆ ಪಾತ್ರಕ್ಕೆ ನ್ಯಾಯ ಒದಿಗಿಸಿ ಸೈ ಎನ್ನಿಸಿಕೊಂಡಿದ್ದಾರೆ ನಟಿ ವನಿತಾ ವಾಸು. 

1010

ಕಿರುತೆರೆಯಲ್ಲಿ ಸದ್ಯ 'ಅಮೃತಧಾರೆ' ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಮಿಂಚುತ್ತಿದ್ದಾರೆ. ಇನ್ನೂ ಕೆಲವು ಸೀರಿಯಲ್‌ನಲ್ಲಿ ಕೂಡ ನಟಿಸುತ್ತಿದ್ದಾರೆ ವನಿತಾವಾಸು. ಈಗಲೂ ಕೂಡ ಅವರು ಬೇಡಿಕೆ ಉಳಿಸಿಕೊಂಡಿರುವುದನ್ನು ಗ್ರೇಟ್ ಎನ್ನಲೇಬೇಕು. 
 

Read more Photos on
click me!

Recommended Stories