ಯುವ ರಾಜ್‌ಕುಮಾರ್‌ ಮನೆಯಲ್ಲಿ ಸಪ್ತಮಿ ಗೌಡ; ಅಣ್ಣಾವ್ರ ಬಟ್ಟೆ ಮುಟ್ಟಿ ಎಲ್ಲರಿಗೂ ಹೇಳಿಕೊಂಡು ಓಡಾಡಿದ ನಟಿ!

First Published | Jun 19, 2024, 5:24 PM IST

 ಯುವ ಮನೆಗೆ ಭೇಟಿ ನೀಡಿದ ಸಪ್ತಮಿ ಗೌಡ. ಆ ದಿನ ಏನೆಲ್ಲಾ ಮಾಡಿದ್ದರು, ಏನೆಲ್ಲಾ ಮಾತನಾಡಿದರು ಎಂದು ಹಂಚಿಕೊಂಡ ನಟಿ....
 

ಕಾಂತಾರ ಸುಂದರಿ, ಯುವ ನಟಿ ಸಪ್ತಮಿ ಗೌಡ ಮೊದಲ ಸಲ ರಾಘವೇಂದ್ರ ರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಹಳೆ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಈಗ ಮತ್ತೆ ವೈರಲ್ ಆಗುತ್ತಿದೆ.

'ಡಾ. ರಾಜ್‌ಕುಮಾರ್ ಹುಟ್ಟುಹಬ್ಬ ಏಪ್ರಿಲ್‌ 24. ಯುವ ಹುಟ್ಟುಹಬ್ಬ ಏಪ್ರಿಲ್ 23. ಯುವ ಕೂಡ 24ರಂದೇ ಹುಟ್ಟಬೇಕಿತ್ತು ಎಂದು ತಾಯಿ ಮಂಗಳಮ್ಮ ಹೇಳುತ್ತಿರುತ್ತಾರೆ.

Tap to resize

ಕಳೆದ ವರ್ಷ ಏಪ್ರಿಲ್ 23ರಂದು ನಾನು ಅವರ ಮನೆಗೆ ಭೇಟಿ ನೀಡಿದ್ದೆ. ಅವರ ಮನೆಯ ಮಹಡಿಯಲ್ಲಿ ಸಣ್ಣ ಮ್ಯೂಸಿಯಂ ರೀತಿ ಇದೆ. ಆ ಮ್ಯೂಸಿಎಂನಲ್ಲಿ ಅಣ್ಣಾವ್ರು ಬಳಸುತ್ತಿದ್ದ ಸಾಕಷ್ಟು ವಸ್ತುಗಳನ್ನು ಇಟ್ಟಿದ್ದಾರೆ. 

ಚಿತ್ರೀಕರಣಕ್ಕೆ ಬಳಸಿದ್ದ ಕಿರೀಟ, ಹಾರ್ಮೋನಿಯಂ, ಮೇಕಪ್ ಕಿಟ್, ತೊಡುತ್ತಿದ್ದ ಬಟ್ಟೆ, ಜೊನೆಯದಾಗಿ ಓದಿದ ಪುಸ್ತಕ,ದಾದಾ ಸಾಹೇಬ್ ಪಾಲ್ಕೆ ಅವಾರ್ಡ್‌, ಪಾಂಡ್ಸ್‌ ಕ್ರೀಮ್‌ ಇನ್ನೂ ಹಾಗೆ ಇದೆ. 
 

ಇದವರೆಗೂ ಮಡಚಿಟ್ಟ ಅಣ್ಣಾವ್ರ ಬಟ್ಟೆಯನ್ನು ಒಮ್ಮೆಯೂ ಒಗೆದಿಲ್ಲವಂತೆ. ಮಂಗಳಮ್ಮ ಹೇಳುತ್ತಿದ್ದರು, ಅಣ್ಣಾವ್ರು ಮನಸ್ಸು ಎಷ್ಟು ಸ್ವಚ್ಛವಾಗಿತ್ತು ಅಂದ್ರೆ ಅವರ ಬಟ್ಟೆ ಸಹ ಈವರೆಗೆ ವಾಸನೆ ಬಂದಿಲ್ಲ ಅಂದ್ರು. 
 

ಅದನ್ನೆಲ್ಲಾ ಕೈಯಲ್ಲಿ ಹಿಡಿದುಕೊಳ್ಳಲು ಕೊಟ್ಟರು. ನನಗೆ ಬಹಳ ಖುಷಿಯಾಯಿತ್ತು. ಇಡೀ ದಿನ ಅದನ್ನೇ ಎಲ್ಲರಿಗೂ ಹೇಳಿಕೊಂಡು ಸುತ್ತಾಡುತ್ತಿದ್ದೆ. ಅದಂತೂ ನಿಜಕ್ಕೂ ಬ್ಯೂಟಿಫುಲ್' ಎಂದು ಸಪ್ತಮಿ ಗೌಡ ಹೇಳಿದ್ದಾರೆ. 

ಈ ಮಾತುಗಳನ್ನು ಸಪ್ತಮಿ ಗೌಡ ತಮ್ಮ ಹಳೆ ಸಂದರ್ಶನದಲ್ಲಿ ಹೇಳಿದ್ದಾರೆಂದು ಕನ್ನಡ ಖಾಸಗಿ ವೆಬ್‌ ಪೋರ್ಟಲ್‌ ವರದಿ ಮಾಡಿದೆ. ಯುವ ಸಿನಿಮಾ ಚಿತ್ರೀಕರಣ ಅಥವಾ ಪ್ರಚಾರದ ಸಮಯದಲ್ಲಿ ಹೇಳಿಲಾಗಿದೆ.

Latest Videos

click me!