ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್; ಮಗು ಮುಖ ಮುಚ್ಚಿದ್ದಕ್ಕೆ ನೆಟ್ಟಿಗರಿಗೆ ಬೇಸರ

First Published | Aug 31, 2024, 7:09 PM IST

ಮನೆಯಲ್ಲಿ ಪುಟ್ಟ ಲಕ್ಷ್ಮಿ ಜೊತೆ ವರಮಹಾಲಕ್ಷ್ಮಿ ಆಚರಿಸಿದ ತೇಜಸ್ವಿನಿ ಪ್ರಕಾಶ್. ಮುಖ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು...... 

ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಹೆಸರು ಮಾಡಿರುವ ನಟಿ ತೇಜಸ್ವಿನಿ ಪ್ರಕಾಶ್ ಈ ಸಲ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

 ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ತೇಜಸ್ವಿನಿ ಪ್ರಕಾಶ್ ಈ ಸಲ ತಮ್ಮ ಪುಟ್ಟ ಮಗಳ ಜೊತೆ ಸೇರಿ ಸಂಭ್ರಮಿಸಿದ್ದಾರೆ.

Tap to resize

ನಾಲ್ಕು ಶುಕ್ರವಾರಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಶುಕ್ರವಾರವನ್ನು ಆಯ್ಕೆ ಮಾಡಿಕೊಂಡು ಹಬ್ಬ ಮಾಡಬಹುದು. ಈ ಸಲ ತೇಜಸ್ವಿನಿ ಎರಡು ಸಲ ಸಂಭ್ರಮಿಸಿದ್ದಾರೆ.

 ಮೊದಲ ಸಲವೂ ಅದ್ಧೂರಿಯಾಗಿ ಲಕ್ಷ್ಮಿ ಹಬ್ಬ ಆಚರಿಸಿರುವ ತೇಜಸ್ವಿನಿ ತಮ್ಮ ಮಗಳ ಜೊತೆ ಪೋಸ್ ಕೊಟ್ಟಿದ್ದಾರೆ ಆದರೆ ಮುಖವನ್ನು ರಿವೀಲ್ ಮಾಡಿಲ್ಲ.

ಮತ್ತೊಂದು ಸಲ ತಾಯಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ ಆಗಲೂ ಮಗಳ ಮುಖ ಮೇಲೆ ಎಮೋಜಿ ಹಾಕಿಟ್ಟಿದ್ದಾರೆ.

ನಿಮ್ಮ ಮನೆ ಮಹಾಲಕ್ಷ್ಮಿಯನ್ನು ಮಾತ್ರ ತೋರಿಸುತ್ತಿದ್ದೀರಿ ಆದರೆ ಪುಟ್ಟ ಲಕ್ಷ್ಮಿ ಮುಖವನ್ನು ಯಾವಾಗ ರಿವೀಲ್ ಮಾಡುವುದು ಎಂದು ನೆಟ್ಟಿಗರು ಬೇಸರದಲ್ಲಿ ಪ್ರಶ್ನಿಸಿದ್ದಾರೆ. 

Latest Videos

click me!