ಹೊಸ ಮನೆ ಖರೀದಿಸಿದ ಶ್ರೀನಗರ ಕಿಟ್ಟಿ-ಭಾವನಾ; ಗೃಹಪ್ರವೇಶ ಫೋಟೋ ವೈರಲ್!

First Published | Aug 31, 2024, 4:10 PM IST

ಹೊಸ ಮನೆ ಖರೀದಿಸಿದ ಶ್ರೀನಗರ ಕಿಟ್ಟಿ. ಸಂಜು ವೆಡ್ಸ್‌ ಗೀತಾ ಸಿನಿಮಾ ನೋಡಲು ಕಾಯುತ್ತಿದ್ದಾರೆ ಫ್ಯಾನ್ಸ್‌....

ಸ್ಯಾಂಡಲ್‌ವುಡ್‌ನಲ್ಲಿ ಬ್ಯೂಟಿ ಅನ್ನೋ ಪದಕ್ಕೆ ಬ್ಯೂಟಿಫುಲ್ ಅರ್ಥ ಕೊಟ್ಟಿಕೊಟ್ಟ ಸಂಜು ವೆಡ್ಸ್‌ ಗೀತಾ ನಟ ಶ್ರೀನಗರ ಕಿಟ್ಟಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 

ನಟ ಶ್ರೀನಗರ ಕಿಟ್ಟ ಮತ್ತು ಪತ್ನಿ ಭಾವನಾ ಬೆಳಗೆರೆ ಹೊಸ ಮನೆ ಖರೀದಿಸಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಮನೆ ಗೃಹಪ್ರವೇಶ ಮಾಡಿದ್ದಾರೆ. 

Tap to resize

ಬೆಂಗಳೂರಿನ ಉತ್ತರಹಳ್ಳಿ ಬಳಿ ಇರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ ಎನ್ನಲಾಗಿದೆ.. ಮನೆ ತುಂಬಾನೇ ಚೆನ್ನಾಗಿದೆ.

ಎರಡು ದಿನಗಳ ಕಾಲ ಹೊಸ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಮೊದಲ ದಿನ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡ ಭಾವನಾ ಎರಡನೇ ದಿನ ಹಸಿರು-ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಸಂಜು ವೆಡ್ಸ್‌ ಗೀತಾ 2 ಸಿನಿಮಾ ಮತ್ತೆ ಶುರು ಮಾಡಿದ ಮೇಲೆ ನಿಮಗೆ ಒಳ್ಳೆಯದಾಗುತ್ತಿದೆ ಅಲ್ಲದೆ ಹೊಸ ಮನೆ ತೆಗೆದುಕೊಂಡಿದ್ದೀರಾ ಅಂದ್ರೆ ವರಮಹಾಲಕ್ಷ್ಮಿ ಜೋರಾ ಎಂದಿದ್ದಾರೆ ನೆಟ್ಟಿಗರು.....

ಕೆಲವು ದಿನಗಳ ಹಿಂದೆ ಶ್ರೀನಗರ ಕಿಟ್ಟ ಪತ್ನಿ ಭಾವನಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಆಗ ಕಿಟ್ಟಿ ಕೊಟ್ಟ ಸ್ಪೆಷಲ್ ಗಿಫ್ಟ್ ವೈರಲ್ ಆಯ್ತು.

Latest Videos

click me!