ಮದ್ವೆ ಸಂಭ್ರಮ ಇನ್ನೂ ಮುಗ್ದೇ ಇಲ್ಲ... ಅಷ್ಟ್ರಲ್ಲೆ ಸೋನಲ್ ಪ್ರೆಗ್ನೆಂಟಾ ಅಂತ ಪ್ರಶ್ನಿಸಿದವನಿಗೆ ನೆಟ್ಟಿಗರಿಂದ ಕ್ಲಾಸ್!

First Published | Aug 31, 2024, 4:55 PM IST

ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಮದುವೆ ಸಂಭ್ರಮ ಇನ್ನು ನಡೆಯುತ್ತಲೇ ಇದೆ, ಅಷ್ಟರಲ್ಲೇ ವ್ಯಕ್ತಿಯೊಬ್ಬ ಸೋನಲ್ ಫೋಟೊ ನೋಡಿ ಪ್ರೆಗ್ನೆಂಟಾ ಅಂತ ಕೇಳಿದ್ದು, ನೆಟ್ಟಿಗರು ಕೋಪಗೊಂಡಿದ್ದಾರೆ. 
 

ಸದ್ಯ ಸುದ್ದಿಯಲ್ಲಿರುವ ಸ್ಯಾಂಡಲ್ ವುಡ್ ಜನಪ್ರಿಯ ಜೋಡಿ ಅಂದ್ರೆ ಅದು ತರುಣ್ ಸುಧೀರ್ (Tharun Sudheer) ಮತ್ತು ಸೋನಲ್ ಮೊಂತೆರೋ. ಇತ್ತೀಚೆಗಷ್ಟೇ ಈ ಜೋಡಿ ಭಾರಿ ಅದ್ಧೂರಿಯಾಗಿ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 
 

ಸೋಶಿಯಲ್ ಮೀಡಿಯಾ, ಟಿವಿ ಚಾನೆಲ್ ಎಲ್ಲಾ ಕಡೆಯೂ ಈ ನವ ಜೋಡಿಗಳದ್ದೆ ಹವಾ ಜೋರಾಗಿಯೇ ಇದೆ. ತರುಣ್ ಮತ್ತು ಸೋನಲ್ (Sonal Monteiro) ಪ್ರೀತಿ ಆರಂಭವಾದದ್ದು ಹೇಗೆ? ಇಬ್ಬರ ಪರಿಚಯ ಹೇಗೆ? ಹನಿಮೂನ್ ಎಲ್ಲಿ? ಎಲ್ಲಾ ವಿಷ್ಯಗಳ ಬಗ್ಗೆ ಸಖತ್ ಚರ್ಚೆ ನಡೆಯುತ್ತಲೇ ಇದೆ. 
 

Tap to resize

ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ (Married life) ಕಾಲಿಟ್ಟ ಈ ಜೋಡಿ, ಇದೀಗ ಮಂಗಳೂರಲ್ಲಿ ಸೋನಲ್ ಮೊಂತೆರೋ ಅವರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ಎಲ್ಲಾ ತಯಾರಿ ನಡೆಯುತ್ತಿದ್ದು, ರೋಸ್ ಸಭಾರಂಭವು ಸೋನಲ್ ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ. 
 

ಇದೆಲ್ಲಾ ಸಂಭ್ರಮಗಳ ಮಧ್ಯೆ ನಟಿ ಸೋನಲ್ ಮೊಂತೆರೋ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಮದುವೆಯಾದ ಬಳಿಕ ಮೊದಲ ಬಾರಿ ತಮ್ಮ ಸಿಂಗಲ್ ಫೋಟೊ ಅಪ್ ಲೋಡ್ ಮಾಡಿದ್ದಾರೆ. ನವ ವಧು ಸೋನಲ್ ಹೊಸ ಫೋಟೊ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದು, ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. 
 

ಸೋನಲ್ ಮೊಂತೆರೋ ಗೋಲ್ಡನ್ ಬಾರ್ಡರ್ ಇರುವಂತಹ ಕಪ್ಪು ಬಣ್ಣದ ಮೋಟಿಫ್ ಸೀರೆಯನ್ನು ಉಟ್ಟಿದ್ದು, ಅದಕ್ಕೆ ಮ್ಯಾಚ್ ಆಗುವಂತ ಕಪ್ಪು ಬಳೆ, ಜೊತೆಗೆ ಗೋಲ್ಡನ್ ಬಳೆ, ಕುತ್ತಿಗೆಯಲ್ಲಿ ಗೋಲ್ಡನ್ ನೆಕ್ಲೆಸ್, ಕಿವಿಯಲ್ಲಿ ಜುಮುಕಿ, ಕತ್ತಿನಲ್ಲಿ ತಾಳಿ… ಇವೆಲ್ಲಾ ಸೇರಿ ದೇವತೆಯಂತೆ ಕಾಣಿಸ್ತಿದ್ದಾರೆ ಸೋನಲ್. 
 

ಮದುವೆಯಾದ ನಂತ್ರ ಮುಖದಲ್ಲಿ ಎಕ್ಸ್ಟ್ರಾ ಗ್ಲೋ ಬಂದಿದೆ, ಮಂಗಳೂರು ಬ್ಯೂಟಿ, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ, ಗೊಂಬೆ, ಬ್ಯೂಟಿಫುಲ್, ಸ್ಯಾಂಡಲ್ ವುಡ್ ಬ್ಯೂಟಿ ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ಸೋನಲ್ ಮೊಂತೆರೋಗೆ ಮೆಚ್ಚುಗೆ ಸೂಚಿಸಿದ್ದಾರೆ. 
 

ಇನ್ನೂ ಕೆಲವರು ಪ್ರೆಗ್ನೆಂಟಾ ಅಂತಾನೂ ಕೇಳಿದ್ದು, ಫೋಟೊ ನೋಡಿದ್ರೆ ಪ್ರೆಗ್ನೆಂಟ್ ತರ ಕಾಣಿಸ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ನೋಡಿ ನೆಟ್ಟಿಗರು ಕೋಪಗೊಂಡಿದ್ದು, ಆ ರೀತಿ ಕಾಮೆಂಟ್ ಮಾಡಿದವರಿಗೆ ಸರಿಯಾಗಿ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಕೆಲವರು ಕಾಮೆಂಟ್ ಡಿಲಿಟ್ ಮಾಡಿದ್ರೆ, ಮತ್ತೊಂದಿಷ್ಟು ಜನ ಕಾಮೆಂಟ್ ಗೆ ಲೈಕ್ ಕೂಡ ಕೊಟ್ಟಿದ್ದಾರೆ. 
 

Latest Videos

click me!