90ರ ದಶಕದ ಸುಂದರಿ ತಾರಾ ಅನುರಾಧ ಈಗ ಕನ್ನಡ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಾರಮ್ಮ ಇದ್ರೆ ಶೋ ಸೂಪರ್ ಡೂಪರ್ ಅನ್ನೋ ಮಾತುಗಳು ಇದೆ.
ವಾರ ವಾರವೂ ತಾರಾ ಅನುರಾಧ ಧರಿಸುವ ಸೀರೆ, ಡಿಸೈನರ್ ಬ್ಲೌಸ್ ಮತ್ತು ಆಭರಣ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಲ್ಲದೆ ತಾರಾ ಹೇರ್‌ಸ್ಟೈಲ್ ಕೂಡ ಸಖತ್ ಡಿಫರೆಂಟ್ ಆಗಿರುತ್ತದೆ.
ಇತ್ತೀಚಿಗೆ ತಾರಾ ಧರಿಸಿದ್ದ ಪಿಂಕ್ ಬಣ್ಣದ ಬನಾರಸ್ ಸೀರೆ ಹಾಗೂ ಫ್ಲೋರಲ್ ಡಿಸೈನರ್ ಬ್ಲೌಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಲೇಬಲ್ ಸಾಯಿ ಸ್ಟುಡಿಯೋ ಅವರ ಸೀರೆ ಇದಾಗಿದ್ದು, ಸಂಧ್ಯಾ ಕಿರಣ್ ರೆಡ್ಡಿ ಬ್ಲೌಸ್ ಡಿಸೈನ್ ಮಾಡಿದ್ದಾರೆ. ಏಎಮ್ ಸ್ಟುಡಿಯೋದವರು ಫೋಟೋ ಕ್ಲಿಕ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಸಂಕ್ರಾಂತಿ ಸ್ಪೆಷಲ್ ಕಾರ್ಯಕ್ರಮಕ್ಕೆ ಈ ಬನಾರಸ್ ಸೀರೆಯಲ್ಲಿ ತಾರಾ ಕಾಣಿಸಿಕೊಂಡಿದ್ದರು. ಇದಕ್ಕೆ ಮ್ಯಾಚ್ ಆಗುವ ದೊಡ್ಡ ಸರ ಧರಿಸಿದ್ದರು.
ಸಾಕ್ಷಾತ್ ಮಹಾಲಕ್ಷ್ಮಿಯ ತರ ನಮ್ಮ ತಾರಾ ಅಕ್ಕಾ, ನಗು ಮುಖದ ತಾಯಿ ತಾರಮ್ಮ ನಿಮ್ಮ ಎನರ್ಜಿಯಲ್ಲಿ 1% ನಮಗೂ ಕೊಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Vaishnavi Chandrashekar