ಮದುವೆಯ ಚಂದದ ಫೋಟೋಸ್ ಶೇರ್ ಮಾಡಿದ ಶ್ರುತಿ..!

First Published | Oct 17, 2021, 10:05 PM IST
  • ಮದುವೆಯ ಫೋಟೋಸ್ ಶೇರ್ ಮಾಡಿದ ನಟಿ
  • ಚಂದದ ವಿವಾಹ ಪೋಟೋಗಳು ವೈರಲ್

ಬಹುಭಾಷಾ ನಟಿ ಶ್ರುತಿ ಹರಿಹರನ್ ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸೈಡ್ ಡ್ಯಾನ್ಸರ್ ಆಗಿ ನಂತರ ನಟಿಯಾಗಿ ಮಿಂಚಿದ ಶ್ರುತಿ ಅವರ ಜರ್ನಿ ನಿಜಕ್ಕೂ ಸೂಪರ್ ಆಗಿತ್ತು.

ಲೂಸಿಯಾ ಇವರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ನಂತರ ಅವರು ಹಿಂತಿರುಗಿ ನೋಡಲೃ ಇಲ್ಲ. ಆದರೆ ಸೈಡ್ ಡ್ಯಾನ್ಸರ್ ಆಗಿ ಮನೋರಂಜನಾ ಲೋಕದಲ್ಲಿ ವೃತ್ತಿ ಜೀವನ ಆರಂಭಿಸಿದ್ದರು ಎಂಬುದು ಹಲವರಿಗೆ ಗೊತ್ತಿಲ್ಲ

Tap to resize

ಬಹು ಬೇಡಿಕೆಯ ನಟಿ ಆಗಿ ಬೆಳೆದ ಶ್ರುತಿ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ್ದು ಭಾರೀ ಚರ್ಚೆಯಾಗಿತ್ತು. ಸ್ಟಾರ್ ನಟನ ಮೇಲೆ ಆರೋಪ ಮಾಡಿ ಭಾರೀ ಸುದ್ದಿಯಾಗಿದ್ದರು ನಟಿ.

ಮೀಟೂ ಚರ್ಚೆ, ಸುದ್ದಿಗಳ ನಂತರ ಶ್ರುತಿ ಬೇಡಿಕೆ ಕಳೆದುಕೊಂಡಿದ್ದು ನಿಜ.  ಸಾಮಾಜಿಕ ಜಾಲತಾಣದಲ್ಲಿ ತಕ್ಕಮಟ್ಟಿಗೆ ಆಕ್ಟಿವ್ ಆಗಿರೋ ನಟಿ ಅಷ್ಟಾಗಿ ಪರ್ಸನಲ್ ಫೋಟೋಸ್ ಶೇರ್ ಮಾಡುವುದಿಲ್ಲ.

ಅವಳು: ನಾವು ಎಷ್ಟು ಹೊತ್ತು ಹೀಗೆ ಕೈ ಹಿಡಿಯಬೇಕು?
ಅವನು: ಶಾಶ್ವತವಾಗಿ ... ಇದು ನಮ್ಮ ವಾರ್ಷಿಕೋತ್ಸವವಲ್ಲ, ಅದು ಆ ವಿಶೇಷ ದಿನಗಳಲ್ಲಿ ಒಂದಲ್ಲ ... ಅಂತಿಮವಾಗಿ ನಾವು ಈ ಪರ್ಸನಲ್ ಹೊರಗೆ ಶೇರ್ ಮಾಡುತ್ತಿದ್ದೇವೆ ಎಂದಿದ್ದಾರೆ

ಮೀಟೂ ವಿವಾದದ ಸಂದರ್ಭದಲ್ಲಿ ಶ್ರುತಿ ಹರಿಹರನ್ ವಿವಾಹ ಬಹಿರಂಗವಾಗಿತ್ತು. ಅವರ ಪರ್ಸನಲ್​ ಲೈಫ್​ ಬಗ್ಗೆ ಅಲ್ಲಿಯವರೆಗೂ ಯಾರಿಗೂ ಗೊತ್ತಿರಲಿಲ್ಲ. ಸರ್ಜಾ ವಿರುದ್ಧ ನೀಡಿದ ಮೀಟೂ ದೂರಿನಲ್ಲಿ W/O ರಾಮ್ ಕುಮಾರ್ ಎಂದು ಶ್ರುತಿ ನಮೂದಿದ್ದು ಅವರ ವಿವಾಹ ಬಹಿರಂಗವಾಗಿತ್ತು.

ಶ್ರುತಿ ಹರಿಹರನ್ ಪತಿ ರಾಮ್ ಡ್ಯಾನ್ಸರ್. ಮಾರ್ಷಲ್ ಆರ್ಟ್ಸ್ ಪಟು ಕೂಡಾ ಹೌದು. ಶ್ರುತಿ ಕೂಡ ಮೊದಲು ಡ್ಯಾನ್ಸರ್ ಆಗಿದ್ದರು. ಅಲ್ಲಿಂದಲೇ ರಾಮ್ ಮತ್ತು ಶ್ರುತಿ ಪರಿಚಯವಾಗಿದೆ. ಈ ಜೋಡಿ ಕೆಲವು ವರ್ಷ ಪ್ರೀತಿಸಿ ಮದುವೆಯಾಗಿದ್ದಾರೆ.

2017ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿದ್ದರು. ಶ್ರುತಿ ಪತಿ ರಾಮ್​ ಫೇಮಸ್​ ಕಲರಿ ಫೈಟ್​ ಆರ್ಟಿಸ್ಟ್​. ಮನೋರಂಜನಾ ಕ್ಷೇತ್ರದಿಂದಲೇ ಬಂದಿರುವುದರಿಂದ ಇಬ್ಬರೂ ಸಖತ್ ಹೊಂದಾಣಿಕೆಯಲ್ಲಿದ್ದಾರೆ.

ಶ್ರುತಿ ಗರ್ಭಿಣಿಯಾದಾಗ ಪೋಟೋವೊಂದನ್ನ ಶೇರ್​ ಮಾಡಿದ್ದರು. ಈ ಜೋಡಿಗೆ ಜಾನಕಿ ಎಂಬ ಮುದ್ದಾದ ಹೆಣ್ಣು ಮಗುವಿದೆ. ಇಬ್ಬರದೂ ಸುಖ ಸಂಸಾರ

ಹೆಡ್​ಬುಷ್​ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಬ್ಯುಸಿ ಇದ್ದು ಬಹಳಷ್ಟು ಆಫರ್​ಗಳು ಬರುತ್ತಿವೆ. ಕೆಲ ಸಿನಿಮಾಗಳಿಗೆ ಮಾತ್ರ ಕಾಲ್​ಶೀಟ್​ ಕೊಡ್ತಾ ಇದ್ದಾರಂತೆ ಶ್ರುತಿ ಹರಿಹರನ್​.

Latest Videos

click me!