ನಮ್ ಮನಸು ನಮ್ ಕಣ್ಣು ಚೆನ್ನಾಗಿದ್ರೆ ಎಲ್ಲ ಚೆನ್ನಾಗಿರುತ್ತೆ.. ಏನಂತೀರಾ: ಮೇಘಾ ಶೆಟ್ಟಿ ಫೋಟೋಶೂಟ್‌ಗೆ ಹೀಗಾ ಅನ್ನೋದು!

First Published Mar 2, 2024, 1:00 AM IST

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಮಸ್ತ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿರುವ ನಟಿ ಮೇಘಾ ಶೆಟ್ಟಿ ಕನ್ನಡ ಚಿತ್ರರಂಗದ ಭರವಸೆಯ ನಾಯಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಜೊತೆ ಜೊತೆಯಲಿ ಅನು ಸಿರಿಮನೆ ಎಂದೇ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿ ಹೊಸ ಫೋಟೋಶೂಟ್‌ ಮಾಡಿಸಿದ್ದು, ಹೊಸ ಫೋಟೋ‌ಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗುಲಾಬಿ ಬಣ್ಣದ ಮಾರ್ಡನ್ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಹಾಟ್ ಆಗಿ ಕಾಣುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಮೇಘಾ ಶೆಟ್ಟಿ ಹೊಸ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಅಲ್ಲದೇ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್​ಗಳ ಸುರಿಮಳೆ ಗೈದಿದ್ದಾರೆ. ಹಾಟ್ ಬ್ಯೂಟಿ, ಅನು ಬಂಗಾರ, ಬ್ಯೂಟಿಫುಲ್ ಬೇಬಿ, ನಮ್ ಮನ್ಸು ನಮ್ ಕಣ್ಣು ಚೆನ್ನಾಗಿದ್ದರೆ ಎಲ್ಲ ಚೆನ್ನಾಗಿ ಇರುತ್ತೆ ಏನ್ ಅಂತೀರಾ ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಬೇರೆ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಚಂದನವನ ಪ್ರವೇಶಿಸಿದರು. ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು.

ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಮೇಘಾ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್​ ಆ್ಯಕ್ಟಿವ್​ ಆಗಿದ್ದಾರೆ.

ಇತ್ತೀಚಿಗಷ್ಟೇ ಕೈವ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಮೇಘಾ ಶೆಟ್ಟಿ, ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.

click me!