ನಿಖಿಲ್ ಕುಮಾರಸ್ವಾಮಿ 33ನೇ ಹುಟ್ಟುಹಬ್ಬ; ಫ್ಯಾಮಿಲಿ- ಫ್ಯಾನ್ಸ್‌ ಜೊತೆ ಆಚರಣೆ

Published : Jan 23, 2023, 10:52 AM IST

ಯುವರಾಜ ನಿಖಿಲ್ ಕುಮಾರಸ್ವಾಮಿ 33ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರ ಜೊತೆ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ....

PREV
16
ನಿಖಿಲ್ ಕುಮಾರಸ್ವಾಮಿ 33ನೇ ಹುಟ್ಟುಹಬ್ಬ; ಫ್ಯಾಮಿಲಿ- ಫ್ಯಾನ್ಸ್‌ ಜೊತೆ ಆಚರಣೆ

ಕನ್ನಡ ಚಿತ್ರರಂಗದ ಯುವರಾಜ, ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ಹಾಗೂ ರಾಮನಗರ ಕ್ಷೇತ್ರದ ಜೆಡಿಎಸ್‌ ಸಂಭಾ​ವ​ನೀ​ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 33ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

26

ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜನವರಿ 22ರಂದು ನಿಖಿಲ್ ನಿವಾಸಕ್ಕೆ ಆಗಮಿಸಿ ಸಂಭ್ರಮದಿಂದ ಆಚರಿಸಿದ್ದಾರೆ. ಬಿಡ​ದಿ ಹೋಬ​ಳಿಯ ಹೆಜ್ಜಾ​ಲ​ದಿಂದ ಬೈಕ್‌ ರಾರ‍ಯಲಿ​ಯಲ್ಲಿ ಆಗ​ಮಿ​ಸಿದ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರನ್ನು ಬಿಡದಿ ಪಟ್ಟ​ಣದ ಬಿಜಿಎಸ್‌ ವೃತ್ತ​ದಲ್ಲಿ ಹೂವಿನ ಹಾರ ಹಾಕಿ ಸ್ವಾಗ​ತಿ​ಸ​ಲಾ​ಯಿತು.

36

ಅಭಿಮಾನಿಗಳನ್ನು ಭೇಟಿ ಮಾಡುವ ಮುನ್ನ ನಿಖಿಲ್ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ತಂದೆ ತಾಯಿ ಆಶೀರ್ವಾದ ಪಡೆದಿದ್ದಾರೆ. ತಂದೆ ಹುಟ್ಟುಹಬ್ಬವನ್ನು ಪುತ್ರ ಅವ್ಯಾನ್ ದೇವ್ ಮಹಡಿಯಿಂದ ನಿಂತು ನೋಡಿದ್ದಾನೆ.

46

ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ಜ. 22ರಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರವನ್ನು ಮನೋಹರ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

56

ಚಿತ್ರದ ಫಸ್ಟ್‌ ಲುಕ್ ಪೋಸ್ಟರ್‌ ಬಿಡುಗಡೆ ಆಗಿದ್ದು,  ಇದು ಕ್ರೀಡೆಯನ್ನು ಆಧರಿಸಿದ ಸಿನಿಮಾ ಎನ್ನಲಾಗುತ್ತಿದೆ. ಚಿತ್ರಕ್ಕೆಯಾವಾಗ ಶೂಟಿಂಗ್, ತಾರಾಬಳಗ ಇತ್ಯಾದಿಗಳು ಎನ್ನಷ್ಟೆ ಅಂತಿಮಗೊಳ್ಳಬೇಕಿದೆ. 

66

ಬಿಡ​ದಿ ಹೋಬ​ಳಿಯ ಹೆಜ್ಜಾ​ಲ​ದಿಂದ ಬೈಕ್‌ ರಾರ‍ಯಲಿ​ಯಲ್ಲಿ ಆಗ​ಮಿ​ಸಿದ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರನ್ನು ಬಿಡದಿ ಪಟ್ಟ​ಣದ ಬಿಜಿಎಸ್‌ ವೃತ್ತ​ದಲ್ಲಿ ಹೂವಿನ ಹಾರ ಹಾಕಿ ಸ್ವಾಗ​ತಿ​ಸ​ಲಾ​ಯಿತು.

Read more Photos on
click me!

Recommended Stories