ಹೇಮಂತ್ ಎಂ ರಾವ್ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಅಂತ ಭಾವಿಸಿರಲಿಲ್ಲ ನಟಿ ಎಂದು ಪ್ರಿಯಾಂಕ ಮೋಹನ್ ಹೇಳಿಕೊಂಡಿದ್ದಾರೆ.
ಪೋಸ್ಟರ್ ಹಾಗೂ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಶಿವರಾಜ್‌ಕುಮಾರ್ ಹಾಗೂ ಧನಂಜಯ್ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಪ್ರಿಯಾಂಕ ಮೋಹನ್ ನಾಯಕಿಯಾಗಿ ಬಂದಿದ್ದಾರೆ.
26
ಮೊದಲ ಬಾರಿಗೆ ಕನ್ನಡಕ್ಕೆ ಬಂದ ಪ್ರಿಯಾಂಕ
ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ‘ಓಜಿ’ ನಾನಿ ಜೊತೆಗೆ ‘ಗ್ಯಾಂಗ್‌ಲೀಡರ್’, ‘ಸರಿಪೋದಾ ಶನಿವಾರಂ’, ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ‘ಡಾಕ್ಟರ್’, ಧನುಷ್ ಜೊತೆಗೆ ‘ಕ್ಯಾಪ್ಟನ್ ಮಿಲ್ಲರ್’ ಮುಂತಾದ ಚಿತ್ರಗಳಲ್ಲಿ ನಟಿಸಿ ಬೇಡಿಕೆಯಲ್ಲಿರುವ ಪ್ರಿಯಾಂಕ ಮೋಹನ್ ಮೊದಲ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ.
36
ನನ್ನ ಕನಸು ನನಸಾಗಿದೆ
‘ನಾನು ನಟ ಶಿವರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಭಾಗವಾಗುವ ಮೂಲಕ ನನ್ನ ಕನಸು ನನಸಾಗಿದೆ. ಪ್ರತಿಭಾನ್ವಿತ ನಟ ಧನಂಜಯ ಅವರೊಂದಿಗೆ ಕೆಲಸ ಮಾಡುವುದಕ್ಕಾಗಿ ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.
ಹೇಮಂತ್ ಎಂ ರಾವ್ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಅಂತ ಭಾವಿಸಿರಲಿಲ್ಲ ಎಂದು ಪ್ರಿಯಾಂಕ ಮೋಹನ್ ಹೇಳಿಕೊಂಡಿದ್ದಾರೆ.
56
ಬಾಂಡ್ ಶೈಲಿಯ ಸ್ಪೈ ಕತೆ ಸಿನಿಮಾ
ಹೇಮಂತ್ ರಾವ್ ನಿರ್ದೇಶನದ 80ರ ದಶಕದ ಬಾಂಡ್ ಶೈಲಿಯ ಸ್ಪೈ ಕತೆ ಒಳಗೊಂಡ ಸಿನಿಮಾ ಇದು. ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿದೆ.
66
ರೆಟ್ರೋ ಲುಕ್‌ಗಳು ವೈರಲ್
ಇನ್ನು ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ. ಶಿವಣ್ಣ ಹಾಗೂ ಧನಂಜಯ್ ಅವರ ರೆಟ್ರೋ ಲುಕ್‌ಗಳು ಈಗಾಗಲೇ ಗಮನಸೆಳೆದಿವೆ. ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ.