ಕಣ್ಣೋಟದಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರಂತೆ ಮುದ್ದಾದ ಸುಂದರಿ ಶರಣ್ಯ ಶೆಟ್ಟಿ

First Published | Feb 22, 2024, 6:04 PM IST

ಗಟ್ಟಿಮೇಳ ಸೀರಿಯಲ್ ನಲ್ಲಿ ವಿಲನ್ ಸಾಹಿತ್ಯ ಆಗಿ ಗುರುತಿಸಿಕೊಂಡ ನಟಿ ಮತ್ತು ಮಾಡೆಲ್ ಶರಣ್ಯ ಶೆಟ್ಟಿ ಫಾಲೋವರ್ಸ್ ಗಳಲ್ಲಿ ಹುಡುಗರೇ ಹೆಚ್ಚು. ಸೋಶಿಯಲ್ ಮೀಡಿಯಾ ಟ್ರೋಲ್ ಪೇಜ್ ಗಳಲ್ಲೆಲ್ಲಾ ಈ ಬ್ಯೂಟಿಯದ್ದೆ ಸುದ್ದಿ ಇರುತ್ತೆ. 
 

ಮಾಡೆಲಿಂಗ್ ಜಗತ್ತಿನ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಅಲ್ಲಿ ಯಶಸ್ಸು ಪಡೆಯುತ್ತಲೇ ಕಿರುತೆರೆಯಲ್ಲಿ ಗಟ್ಟಿಮೇಳ ಸೀರಿಯಲ್ ನಲ್ಲಿ ವಿಲನ್ ಸಾಹಿತ್ಯ ಪಾತ್ರಕ್ಕೆ ಜೀವ ತುಂಬಿದ ನಟಿ ಶರಣ್ಯ ಶೆಟ್ಟಿ (Sharanya Shetty). 
 

ಗಟ್ಟಿಮೇಳ (Gattimela) ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ಸ್ವಲ್ಪ ಸಮಯ ಕಾಣಿಸಿಕೊಂಡರೂ ಸಹ ನಟಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು. ಅಲ್ಲಿಂದ ನೇರವಾಗಿ ಹಿರಿತೆರೆಗೆ ಕಾಲಿಟ್ಟು ಹಲವು ಸಿನಿಮಾಗಳಲ್ಲಿ, ಆಲ್ಬಂ ಹಾಡುಗಳಲ್ಲೂ ನಟಿಸಿದ್ದರು ಶರಣ್ಯ. 
 

Tap to resize

ಕೆಲವು ಸಮಯದ ಹಿಂದೆ ರಕ್ಷಿತ್ ಶೆಟ್ಟಿ (Rakshith Shetty) ಜೊತೆಗೂ ನಟಿಯ ಹೆಸರು ಕೇಳಿ ಬಂದಿತ್ತು. ಶರಣ್ಯ ಮತ್ತು ರಕ್ಷಿತ್ ಶೆಟ್ಟಿ ಮದುವೆಯಾಗುತ್ತಿದ್ದಾರಂತೆ ಎನ್ನುವ ಗಾಳಿ ಸುದ್ದಿ ಹರಡಿತ್ತು. ಅದಕ್ಕೆ ನಟಿ ಅಯ್ಯೋ ಪಾಪ ಅವರ ಜೊತೆ ಎಲ್ಲರ ಹೆಸರು ಹೇಳ್ತಾರೆ. ಹಾಗೇನೂ ಇಲ್ಲ ಎಂದು ಹೇಳಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ಶರಣ್ಯ ಶೆಟ್ಟಿಯವರು ಟ್ರೋಲ್ ಪೇಜ್ ಗಳಲ್ಲೂ ಯಾವಾಗಲೂ ಟಾಪ್ ಅಲ್ಲಿ ಇರ್ತಾರೆ. ಶರಣ್ಯ ಅವರ ವಿವಿಧ ಫೊಟೋ ಶೇರ್ ಮಾಡುವ ಮೂಲಕ ಟ್ರೋಲ್ ಪೇಜ್ ಗಳು ಹಾಡೀ ಹೊಗಳುತ್ತಲೇ ಇರುತ್ತಾರೆ. 
 

ಇದೀಗ ಶರಣ್ಯ ತಮ್ಮ ಇನ್ ಸ್ಟಾಗ್ರಾಂ(Instagram)  ಖಾತೆಯಲ್ಲಿ ಲೆಹೆಂಗಾ, ಚೋಲಿ ಧರಿಸಿರುವ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದು, ಫ್ಯಾನ್ಸ್ ಗಳಂತೂ ಕಾಮೆಂಟ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. 
 

ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರೆ ಮುದ್ದಾದ ಸುಂದರಿ ಶರಣ್ಯ ಶೆಟ್ಟಿ , ಈ ರೀತಿ ಫೋಟೋ ಹಾಕೋ ಮೂಲಕ ಎಷ್ಟೋ ಹುಡುಗರ ಹೃದಯ ಕದ್ದಿದ್ದೀರಿ, ಕರ್ನಾಟಕ ಕ್ವೀನ್ (Queen of Karnataka) ನೀವು ಎಂದು ಹಾಡಿ ಹೊಗಳಿದ್ದಾರೆ. 
 

ಮತ್ತೊಬ್ಬ ಅಭಿಮಾನಿಯಂತೂ ನಟಿಯ ಸೌಂದರ್ಯವನ್ನು ಹೊಗಳಿ ಕವನವನ್ನೇ ಬರೆದಿದ್ದಾರೆ. ಅವಳೋ ಮಾಯಾಸುಂದರಿ, ಮನಸ ಕದ್ದ ದೇವ ಕಿನ್ನರಿ, ಕಣ್ಣಿನಲ್ಲೆ ಗೆಲ್ಲುತಿಹಳು ನನ್ನ ಹೃದಯದಿ ಗರಿಗೆದರಿ, ಕಣ್ಣ ಕುಂಚದಲ್ಲಿ ಸಂಚೊಂದು ಮಾಡುತಿಹಳು, ಕೊಂಚ ನಾಚುತಿಹಳು, ದೇವ ಕನ್ಯೆ ಇವಳು ಪ್ರಪಂಚದಲ್ಲಿ, ಅವಳ ದಂತ ಪಂಕ್ತಿಯು, ದಾಳಿಂಬೆಯು ನಾಚುವಂತಿಹುದು ಅವಳ ಕೆನ್ನೆ ಕುಳಿಗಳು, ಶಿಲ್ಪಿಯ ಉಳಿಯಂತಿಹುದು!, ವರ್ಣಿಸಬಹುದೇ ಇವಳ ಸೌಂದರ್ಯವ!? ವರ್ಣಮಾಲೆಗಳು ಸಾಕಾಗಬಹುದೇ? ಎನ್ನುತ್ತಾ ದೊಡ್ಡ ಕವನವನ್ನೇ ಬರೆದಿದ್ದಾರೆ.
 

ಇತ್ತೀಚೆಗೆ ಶರಣ್ಯ ಶೆಟ್ಟಿ ಮತ್ತು ಅಭಿದಾಸ್ (Abhidas)ಅಭಿನಯದ ನಗುವಿನ ಹೂಗಳ ಮೇಲೆ ಎನ್ನುವ ಪ್ರೇಮ ಕತೆ ಹೊಂದಿರುವ ಸಿನಿಮಾ ಬಿಡುಗಡೆಯಾಗಿತ್ತು. 1980 ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಶರಣ್ಯ 2022 ರಲ್ಲಿ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದರು. 
 

Latest Videos

click me!