ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಇಬ್ಬರೂ ಅಧಿಕೃತವಾಗಿ ಒಂದಾಗುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಮತ್ತು ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಹಾಗಾದ್ರೆ ಈ ಜೋಡಿಯ ವಯಸ್ಸಿನ ವ್ಯತ್ಯಾಸ ಎಷ್ಟು?
ಟಾಲಿವುಡ್‌ನ ಈ ಪ್ರೇಮ ಪಕ್ಷಿಗಳು ತಮ್ಮ ಮದುವೆಯ ಬಗ್ಗೆ ಇದ್ದ ಸಸ್ಪೆನ್ಸ್‌ಗೆ ತೆರೆ ಎಳೆದಿದ್ದಾರೆ. ಹಲವು ವರ್ಷಗಳಿಂದ ರಹಸ್ಯವಾಗಿ ಪ್ರೀತಿಸುತ್ತಿದ್ದ ಈ ಜೋಡಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಭಿಮಾನಿಗಳಿಗಾಗಿ ತಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ 'ವಿರೋಶ್' (Virosh) ಹೆಸರಿನಲ್ಲಿ ಮದುವೆ ಆಯೋಜಿಸುತ್ತಿರುವುದಾಗಿ ಘೋಷಿಸಿದ್ದಾರೆ. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
25
ಇಬ್ಬರ ವಯಸ್ಸಿನ ಅಂತರ
ಮದುವೆ ಘೋಷಣೆ ಬೆನ್ನಲ್ಲೇ, ಇಬ್ಬರ ವಯಸ್ಸಿನ ಅಂತರ ಹಾಟ್ ಟಾಪಿಕ್ ಆಗಿದೆ. ಇಂಟರ್‌ನೆಟ್ ಮಾಹಿತಿ ಪ್ರಕಾರ, ವಿಜಯ್ ದೇವರಕೊಂಡ 1989ರ ಮೇ 9ರಂದು ಜನಿಸಿದ್ದು, ಅವರಿಗೆ 36 ವರ್ಷ. ರಶ್ಮಿಕಾ ಮಂದಣ್ಣ 1996ರ ಏಪ್ರಿಲ್ 5ರಂದು ಹುಟ್ಟಿದ್ದು, ಅವರಿಗೆ 29 ವರ್ಷ. ಇಬ್ಬರ ನಡುವೆ ಸುಮಾರು 7 ವರ್ಷಗಳ ವಯಸ್ಸಿನ ಅಂತರವಿದೆ. ಆದರೂ, ನೋಡಲು ಅಷ್ಟು ವ್ಯತ್ಯಾಸ ಕಾಣಿಸುವುದಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
35
ಎಲ್ಲಿ ಮದುವೆ ಆಗಲಿದೆ?
ವಿಜಯ್ ಮತ್ತು ರಶ್ಮಿಕಾ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಫೆಬ್ರವರಿ 26ರಂದು ಅಲ್ಲಿನ ಒಂದು ಐತಿಹಾಸಿಕ ಅರಮನೆಯಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ. ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮದುವೆಯ ಒಂದೇ ಒಂದು ಫೋಟೋ ಹೊರಗೆ ಬರದಂತೆ ನೋಡಿಕೊಳ್ಳಲು ವಿಜಯ್ ಅಂತರಾಷ್ಟ್ರೀಯ ಭದ್ರತೆಯನ್ನು ನೇಮಿಸಿದ್ದಾರೆ ಎನ್ನಲಾಗಿದೆ. ಸಂಬಂಧಿಕರಿಗೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 24ರಂದು ಹಳದಿ ಶಾಸ್ತ್ರದೊಂದಿಗೆ ಮದುವೆ ಸಂಭ್ರಮ ಶುರುವಾಗಲಿದೆ. ಫೆಬ್ರವರಿ 25ರಂದು ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ. ಫೆಬ್ರವರಿ 26ರಂದು ಅರಮನೆಯಲ್ಲಿ ವಿವಾಹ ನಡೆಯಲಿದೆ. ನಂತರ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದವರಿಗಾಗಿ ಭಾರಿ ರಿಸೆಪ್ಷನ್ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ಗಣ್ಯರು ಹಾಗೂ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ.
55
ಲವ್ ಬಗ್ಗೆ ಮಾತಾಡಿರಲಿಲ್ಲ
ವಿಜಯ್ ಮತ್ತು ರಶ್ಮಿಕಾ ಪರಿಚಯ 'ಗೀತ ಗೋವಿಂದಂ' ಚಿತ್ರದಿಂದ ಶುರುವಾಯಿತು. ನಂತರ 'ಡಿಯರ್ ಕಾಮ್ರೇಡ್' ಸಿನಿಮಾ ಸಮಯದಲ್ಲಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು ಎಂದು ಹೇಳಲಾಗುತ್ತದೆ. ಈ ಚಿತ್ರದ ಲಿಪ್‌ಲಾಕ್ ದೃಶ್ಯದ ನಂತರ ಇಬ್ಬರ ನಡುವೆ ಏನೋ ಇದೆ ಎಂಬ ಮಾತುಗಳು ಶುರುವಾಗಿದ್ದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ತುಟಿ ಬಿಚ್ಚಿರಲಿಲ್ಲ. ಆದರೂ, ವೆಕೇಷನ್ ಫೋಟೋಗಳ ಮೂಲಕ ಆಗಾಗ ಸಿಕ್ಕಿಬೀಳುತ್ತಿದ್ದರು. ಈಗ ಮದುವೆ ಘೋಷಣೆಯೊಂದಿಗೆ ಎಲ್ಲವೂ ನಿಜವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.