ಲೈಫ್‌ನಲ್ಲಿ ಎಲ್ಲವೂ ಒಳ್ಳೆಯ ಕಾರಣಕ್ಕೆ ನಡೆಯುತ್ತೆ: ಫೋಟೋ ಸಮೇತ ಸತ್ಯ ಹೇಳಿದ ನಟಿ ರಶ್ಮಿಕಾ ಮಂದಣ್ಣ

Published : Apr 09, 2026, 09:10 PM IST

ನಟಿ ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ಮದುವೆಯಾದರು. ಈ ಹಿಂದೆ ಗೀತಾ ಗೋವಿಂದಂ, ಡಿಯರ್‌ ಕಾಮ್ರೇಡ್‌ ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್‌ ದೇವರಕೊಂಡ ಅವರನ್ನು ರಶ್ಮಿಕಾ ಮಂದಣ್ಣ ಪ್ರೀತಿಸಿ ಮದುವೆಯಾದರು. ಈಗ ಕೂರ್ಗ್‌ನಲ್ಲಿ ಒಂದು ಡಿನ್ನರ್‌ ಪಾರ್ಟಿ ಮಾಡಿದ್ದಾರೆ. ಜನ್ಮದಿನವನ್ನು ಆಚರಿಸಿದ್ದಾರೆ.

PREV
110
ಫೋಟೋ ಹಂಚಿಕೊಂಡ್ರು

ರಶ್ಮಿಕಾ ಮಂದಣ್ಣ ಅವರು ಕೂರ್ಗ್‌ನಲ್ಲಿ ನಡೆದ ಡಿನ್ನರ್‌ ಪಾರ್ಟಿಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದಿಷ್ಟು ಮನದ ಭಾವನೆಗಳನ್ನು ಹೊರಹಾಕಿದ್ದಾರೆ. 

210
30ನೇ ಜನ್ಮದಿನ

ನನ್ನ 30ನೇ ಹುಟ್ಟುಹಬ್ಬ ಈ ಬಾರಿ ಸ್ವಲ್ಪ ಭಿನ್ನವಾಗಿತ್ತು. ಬಹಳ ದಿನಗಳ ನಂತರ ಮನೆಗೆ ಮರಳಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

310
ದೇವಸ್ಥಾನ, ಶಾಲೆಗೆ ಹೋದೆ

ನಾನು ಯಾವಾಗಲೂ ಹೋಗುತ್ತಿದ್ದ ದೇವಸ್ಥಾನಕ್ಕೆ ಭೇಟಿ ನೀಡಿದೆ. ನನ್ನ ಶಾಲೆಗೆ ಹೋಗಿ ಹೊರಗಿನಿಂದಲೇ ನೋಡಿದೆ (ಟೈಮ್‌ ಇರಲಿಲ್ಲ), ಒಂದು ಕ್ಷಣ ಬಾಲ್ಯದ ನೆನಪುಗಳಲ್ಲಿ ಮುಳುಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.

410
ಕೇಕ್‌ ಕಟ್‌ ಮಾಡಿದೆ

ನನ್ನ ಅಸ್ತಿತ್ವಕ್ಕೆ ಕಾರಣರಾದವರು ಮತ್ತು ಎಂದೆಂದಿಗೂ ನನ್ನವರಾಗಿರುವವರ ಮಧ್ಯೆ ಕೇಕ್ ಕತ್ತರಿಸಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

510
ಡಿನ್ನರ್ ಪಾರ್ಟಿ‌ ಮಾಡಿದೆವು

ಮದುವೆಗೆ ಬರಲಾಗದ ಕುಟುಂಬದ ಸದಸ್ಯರನ್ನು ಒಂದು ಸಣ್ಣ ರಾತ್ರಿಯ ಔತಣಕೂಟದಲ್ಲಿ ಭೇಟಿಯಾದೆ.. ನಾನು ಹುಟ್ಟಿದ ದಿನದಿಂದ ಇಂದಿನವರೆಗೆ ನನ್ನನ್ನು ಹರಸುತ್ತಿರುವವರು ಇವರು ಎಂದಿದ್ದಾರೆ ರಶ್ಮಿಕಾ. 

610
ಸ್ನೇಹಿತರು, ಆಪ್ತರಿದ್ದಾರೆ

ಶಾಲಾ ದಿನಗಳಿಂದ ಇಂದಿನವರೆಗೆ ನನ್ನ ಪ್ರತಿಯೊಂದು ಹಂತದಲ್ಲೂ ಜೊತೆಗಿರುವ ಗೆಳತಿಯರು ಮತ್ತು ಸ್ನೇಹಿತರಿಗಿಂತ ಹೆಚ್ಚಾಗಿ ಕುಟುಂಬದಂತಿರುವ ನನ್ನ ಆಪ್ತರು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

710
ಎಲ್ಲವೂ ಒಳ್ಳೆಯ ಕಾರಣಕ್ಕೆ ನಡೆಯುತ್ತೆ

ಜೀವನದಲ್ಲಿ ಪ್ರತಿಯೊಂದೂ ಒಂದು ಒಳ್ಳೆಯ ಕಾರಣಕ್ಕಾಗಿ ನಡೆಯುತ್ತದೆ ಎಂದು ನನಗೆ ಅನಿಸುತ್ತದೆ, ಆ ಕಾರಣ ಇದೇ ಇರಬೇಕು! ಎಲ್ಲವೂ ಸಾರ್ಥಕವೆನಿಸುತ್ತಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

810
ಸಿನಿಮಾಗಳಲ್ಲಿ ಬ್ಯುಸಿ

ರಶ್ಮಿಕಾ ಮಂದಣ್ಣ ಅವರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸ್ಟಾರ್‌ಗಳ ಜೊತೆ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

910
ಪಾಲಕರ ಜೊತೆ...

ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಅವರು ಪಾಲಕರ ಜೊತೆಗೆ ತೆಗೆಸಿಕೊಂಡ ಫೋಟೋ ಇದು..

1010
ಸಂಪ್ರದಾಯ ಬಿಟ್ಟಿಲ್ಲ

ರಶ್ಮಿಕಾ ಮಂದಣ್ಣ ಅವರು ಕೊಡಗಿನ ಸೀರೆಯಲ್ಲಿ ಮಿಂಚಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories