ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ರಾಗಿಣಿ ದ್ವಿವೇದಿ: ಆರೆಂಜ್ ಕಲರ್ ವಾವ್ ಎಂದ ಫ್ಯಾನ್ಸ್!

First Published | Jan 19, 2024, 12:57 PM IST

ತುಪ್ಪದ ಬೆಡಗಿ, ನಟಿ ರಾಗಿಣಿ ದ್ವಿವೇದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ರಾಗಿಣಿ ಲೆಹೆಂಗಾ ಡ್ರೆಸ್‌ನಲ್ಲಿ ಮಿಂಚಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಗಿಣಿ ದ್ವಿವೇದಿ ಯಾವಾಗಲೂ ವಿಶೇಷ ಫೋಟೋ ಶೂಟ್ ಮಾಡಿಸುತ್ತಾರೆ. ಅದು ಯಾವುದಾದರೂ ಬ್ರ್ಯಾಂಡ್‌ಗೆ ಸಂಬಂಧಿಸಿದ ಫೋಟೋ ಶೂಟ್ ಆಗಿರುತ್ತದೆ. ವಿಶೇಷವಾಗಿ ವಿವಿಧ ರೀತಿಯ ಆಭರಣಗಳನ್ನ ಧರಿಸಿಕೊಂಡು ರಾಗಿಣಿ ಪೋಸ್‌ ಕೊಡುತ್ತಾರೆ.

ಇತ್ತೀಚೆಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಲೆಹೆಂಗಾ ತೊಟ್ಟು ರಾಗಿಣಿ ಸ್ಪೆಷಲ್ ಆಗಿ ಮಿಂಚಿದ್ದಾರೆ. ಸ್ಪೆಷಲ್ ಆಭರಣಗಳನ್ನ ಧರಿಸಿಕೊಂಡು ರಾಣಿಯಂತೆ ಕಂಗೊಳಿಸಿದ್ದಾರೆ.

Tap to resize

ರಾಗಿಣಿ ದ್ವಿವೇದಿ ಧರಿಸಿರುವ ಲೆಹೆಂಗಾ ತುಂಬಾ ಚೆನ್ನಾಗಿದೆ. ಕಿತ್ತಳೆ ಬಣ್ಣದ ಈ ಡ್ರೆಸ್‌ನಲ್ಲಿ ಬಂಗಾರ ಕಲರ್‌ ಹೂವುಗಳೂ ಇವೆ. ಸದ್ಯ ಡ್ರೆಸ್ ರಾಗಿಣಿಗೆ ರಾಯಲ್ ಕ್ವೀನ್ ಲುಕ್ ತಂದುಕೊಟ್ಟಿದೆ.

ರಾಗಿಣಿ ದ್ವಿವೇದಿ ಫೋಟೋಶೂಟ್ ನೋಡಿದ ನೆಟ್ಟಿಗರು, ಬೆಳದಿಂಗಳ ಬಾಲೆ, ಅಂದವಾಗಿ ಕಾಣುವ ಅಪರೂಪದ ಚೆಲುವೆ ನೀನು, ನಮ್ಮೂರ ಮಂದಾರ ಹೂವೇ ನನ್ನೊಲುಮೆ ಬಾಂದಳದ ಚೆಲುವೆ ಸೇರಿದಂತೆ ತರೇಹವಾರಿ ಕಾಮೆಂಟ್ ಮಾಡಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ವಿವಿಧ ಫೋಟೋ ಶೂಟ್‌ಗಳಲ್ಲಿ ಬ್ಯುಸಿ ಇರ್ತಾರೆ. ವಿವಿಧ ಫ್ಯಾಷನ್‌ ಶೋಗಳಲ್ಲೂ ವಾಕ್ ಮಾಡುತ್ತಾರೆ. ಮೊನ್ನೆಯಷ್ಟೇ ರಾಗಿಣಿ ಅಭಿನಯದ ಇಮೇಲ್ ಚಿತ್ರದ ಪೋಸ್ಟರ್  ರಿಲೀಸ್ ಆಗಿದೆ. 

ಬಿಂಗೋ ಚಿತ್ರದ ಶೂಟಿಂಗ್ ಕೂಡ ಇತ್ತೀಚೆಗೆ ಪೂರ್ಣಗೊಂಡಿದೆ. ಇದರ ಜೊತೆಗೆ ರಾಗಿಣಿ ಇನ್ನೂ ಒಂದು ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ಹೌದು! ಮೋಹನ್ ಲಾಲ್ ಅಭಿನಯದ ವೃಷಭ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಇವರ ಜೋಡಿಯಾಗಿ ರಾಗಿಣಿ ನಟಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. 

Latest Videos

click me!