ರಾಧಿಕಾ ಪಂಡಿತ್‌ಗೆ ಇವರು ಕಾಣಿಸಿಕೊಂಡಾಗ ಹ್ಯಾಪಿ ಟೈಮ್​ ಶುರುವಾಗೋದಂತೆ?: ಫ್ಯಾನ್ಸ್ ಕೂಡಾ ಹೀಗೆ ಹೇಳೋದಾ?

First Published | Feb 12, 2024, 1:00 PM IST

ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ವ್ಯಾಲೆಂಟೈನ್ ವೀಕ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಯಶ್‌ಗಾಗಿ ಕಾಯುತ್ತಿರುವ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. 

ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ಮುದ್ದಾದ ಜೋಡಿಯಾಗಿದ್ದಾರೆ. ಈ ಜೋಡಿಗೆ ಹಲವು ಅಭಿಮಾನಿಗಳಿದ್ದಾರೆ. ನಟ ಯಶ್​ ಅವರನ್ನು ಪ್ರೀತಿಸಿ ಮದುವೆಯಾದ ರಾಧಿಕಾ ಇದೀಗ ಪ್ರೇಮಿಗಳ ದಿನವನ್ನು ಸೆಲೆಬ್ರೇಟ್ ಮಾಡಲು ಕಾಯ್ತಿದ್ದಾರೆ.

ಸದ್ಯ ರಾಧಿಕಾ ಹೊಸ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಮಿನುಗುವ ಲೈಟ್ ಮಧ್ಯೆ ಕುಳಿತು ಕ್ಯೂಟ್ ಆಗಿ ಕ್ಯಾಮೆರಾಗೆ ರಾಧಿಕಾ ಪೋಸ್ ಕೊಟ್ಟಿದ್ದಾರೆ. 

Latest Videos


ಲವ್ ಸೆಲೆಬ್ರೇಷನ್ ಮೂಡ್​ನಲ್ಲಿರುವ ರಾಧಿಕಾ ಪಂಡಿತ್,  ತಮ್ಮ ಫೋಟೋಗಳಿಗೆ ‘ನನ್ನ ವ್ಯಾಲೆಂಟೈನ್ ಕಾಣಿಸಿಕೊಂಡಾಗ ಹ್ಯಾಪಿ ಟೈಮ್ ಪ್ರಾರಂಭವಾಗುತ್ತದೆ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಷನ್ ನೀಡಿದ್ದಾರೆ. 

ಟೇಬಲ್ ಮುಂದೆ ಒಬ್ಬರೇ ಕುಳಿತು ತನ್ನ ವ್ಯಾಲೆಂಟೈನ್​​ಗಾಗಿ ಕಾಯ್ತಿದ್ದಾರೆ. ನಟಿ ರಾಧಿಕಾ ಫೋಟೋಗಳಿಗೆ ಲೈಕ್ ಹಾಗೂ ಕಮೆಂಟ್​ಗಳ ಸುರಿಮಳೆಯಾಗಿದೆ. ಅಲ್ಲದೇ ರಾಧಿಕಾರ ಸುಂದರ ಫೋಟೋ ನೋಡ್ತಿದ್ದಂತೆ ಯಶ್ ಎಲ್ಲಿ? ರಾಕಿ ಬಾಯ್‌ಗಾಗಿ ಕಾಯುತ್ತಿದ್ದೀರಾ ಅಲ್ವಾ? ಅಂತ ಫ್ಯಾನ್ಸ್ ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಪ್ರೇಮಿಗಳ ದಿನವನ್ನು ಆಚರಿಸಲು ರಾಧಿಕಾ ಪಂಡಿತ್ ರೆಡಿಯಾದಂತಿದೆ. ಈ ಹಿಂದೆ ಹಲೋ ಟು ದಿ ಮಂತ್ ಆಫ್ ಲವ್ ಎಂದು ಬರೆದುಕೊಳ್ಳುವ ಮೂಲಕ ಫೆಬ್ರವರಿ ತಿಂಗಳನ್ನು ವೆಲ್​ ಕಮ್ ಮಾಡಿದ್ರು.

ನಟ ಯಶ್ ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ರಾಧಿಕಾ ನಟನೆಯಿಂದ ದೂರ ಉಳಿದಿದ್ದಾರೆ. 

click me!