ಕನ್ನಡ ಕಿರುತೆರೆಯ ಜನಪ್ರಿಯ ನಾಗಿಣಿ ಧಾರಾವಾಹಿಯಲ್ಲಿ ಮಿಂಚಿ ಆ ನಂತರ ಬ್ಯಾಕ್ ಟು ಬ್ಯಾಕ್ ಕನ್ನಡ ಸೂಪರ್ ಹಿಟ್ ಸಿನಿಮಾ ನೀಡಿದ ನಟ ದೀಕ್ಷಿತ್ ಶೆಟ್ಟಿ.
ಕನ್ನಡದಲ್ಲಿ ದಿಯಾ ಸಿನಿಮಾ ಮತ್ತು ತೆಲುಗು ಭಾಷೆಯಲ್ಲಿ ದಸರ ಸಿನಿಮಾ ಆದ್ಮೇಲೆ ದೀಕ್ಷಿತ್ ಶೆಟ್ಟಿ ಸ್ಟಾರ್ ಚೇಂಜ್ ಆಗಿದೆ. ಈ ವಿಚಾರದ ಬಗ್ಗೆ ದೀಕ್ಷಿತ್ ಹೇಳಿರುವ ಮಾತುಗಳಿದು.
'ದಿಯಾ ಸಿನಿಮಾ ಬಂತು ರಾತ್ರೋ ರಾತ್ರಿ ಇವನು ಏನೋ ಆಗ್ಬಿಟ್ಟ. ದಸರ ಸಿನಿಮಾ ಮಾಡ್ಬಿಟ್ನಾ? ದಸರ ಸಿನಿಮಾ ಮಾಡಿದ ಮೇಲೆ ಇನ್ನು ಅವನಿಗೆ ತುಂಬಾ ಸುಲಭ'
'ದಸರಗೆ ತಂದು ನಿಲ್ಲುವುದಕ್ಕೆ ನನ್ನ ಸಿನಿಮಾ ಜರ್ನಿಯಲ್ಲಿ 10 ವರ್ಷ ತೆಗೆದುಕೊಂಡಿದೆ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ದೀಕ್ಷಿತ್ ಹೇಳಿದ್ದಾರೆ.
'ತೆಲುಗು ಭಾಷೆಯಲ್ಲಿ ದಸರನೇ ಅಲ್ವಾ ಮೊದಲ ಸಿನಿಮಾ ಅಂತಾರೆ. ಆದರೆ ನಾನು ಅದಕ್ಕೂ ಮುನ್ನ ಮೂರು ಸಿನಿಮಾಗಳನ್ನು ಮಾಡಿದ್ದೀನಿ. ದಿಯಾ ಸಿನಿಮಾ ಮಾಡುವ ಮುನ್ನ ನಾನು ಸಾವಿರ ಎಪಿಸೋಡ್ ನಾಗಿಣಿ ಸೀರಿಯಲ್ ಮಾಡಿದ್ದೀನಿ'
'ಅದರ ಹಿಂದೆ ಪ್ರೀತಿ ಅಂದರೆ ಏನೋ ಅನ್ನೋದರಲ್ಲಿ ಒಂದು ಸಪೊರ್ಟಿಂಗ್ ಪಾತ್ರ ಮಾಡಿಕೊಂಡು ಬಂದಿದ್ದೀನಿ. ಸಾಕ್ಷಿ ಅನ್ನೋದರಲ್ಲಿ ಎರಡನೇ ಲೀಡಿಂಗ್ ಪಾತ್ರ ಮಾಡಿ ಕೊಂಡು ಬಂದಿದ್ದೀನಿ'
'ಹಂತ ಹಂತವಾಗಿ ಬೆಳೆದುಕೊಂಡು ಬಂದಿದ್ದೀನಿ. ಯಾರೋ ನನ್ನನ್ನು ಕರೆದುಕೊಂಡು ಬಂದು ಹೀರೋ ಆಗು ಅಂತ ಹೇಳಿಲ್ಲ ಕರೆದುಕೊಂಡು ಬಂದಿಲ್ಲ. ಕೆಟಿಎಮ್ ಚಿತ್ರಕ್ಕೆ ಆಡಿಕ್ಷನ್ ಕೊಟ್ಟು ಸೆಲೆಕ್ಟ್ ಆಗಿರುವುದು. ದಿಯಾ ಚಿತ್ರಕ್ಕೂ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದು'
'ಆರಂಭದಿಂದ ಇಲ್ಲಿಯವರೆಗೂ ಎಷ್ಟು ಪ್ರಾಜೆಕ್ಟ್ ಮಾಡಿರುವೆ ಪ್ರತಿಯೊಂದಕ್ಕೂ ನಾನು ಆಡಿಷನ್ ಕೊಟ್ಟು ಆಯ್ಕೆ ಆಗಿರುವುದು. ದಸರ ಸಿನಿಮಾ ಆದ್ಮೇಲೆ ಈಗ ಕಂಫರ್ಟ್ ಆಗಿರುವ ಹೆಚ್ಚಿಗೆ ಸ್ಕ್ರಿಪ್ಟ್‌ಗಳು ಬರ್ತಿದೆ' ಎಂದು ದೀಕ್ಷಿತ್ ಶೆಟ್ಟಿ ಹೇಳಿದ್ದಾರೆ.