ಮುದ್ದಿನ ನಾಯಿ ಜೊತೆ ಒಬ್ಬಳೇ ಬರ್ತಡೇ ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ!

First Published | Nov 14, 2024, 6:22 PM IST

ಸ್ಯಾಂಡಲ್​​ವುಡ್​ ನಟಿ ರಾಧಿಕಾ ಕುಮಾರಸ್ವಾಮಿ ನ.11ರಂದು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಸದ್ಯ ರಾಧಿಕಾಗೆ ಕನ್ನಡ ಚಿತ್ರರಂಗದ ನಟ-ನಟಿಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ. 

ಮೂಲತಃ ಮಂಗಳೂರಿನವರಾದ ರಾಧಿಕಾ ಕುಮಾರಸ್ವಾಮಿ, ನಟಿ ಹಾಗೂ ನಿರ್ಮಾಪಕಿಯಾಗಿ ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಟಿವ್​ ಆಗಿದ್ದಾರೆ. 2002 ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು.

ರಾಧಿಕಾ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣ ಖಾತೆ ಇನ್‌ಸ್ಟಾಗ್ರಾಮ್‌ನಲ್ಲಿ ಹುಟ್ಟುಹಬ್ಬದ ಸ್ಪೆಷಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

Tap to resize

ವಿಡಿಯೋದಲ್ಲಿ ರಾಧಿಕಾ ಪಿಂಕ್ ಕಲರ್ ಬ್ಯಾಗ್‌ಗ್ರೌಂಡ್ ಬರ್ತಡೇ ಥೀಮ್‌ನಲ್ಲಿ, ಪಿಂಕ್ ಕಲರ್ ಡ್ರೆಸ್ ತೊಟ್ಟು, ಒಂದು ಕೈಯಲ್ಲಿ ಹೂವಿನ ಬೊಕ್ಕೆ ಹಿಡಿದು, ಇನ್ನೊಂದು ಕೈಯಲ್ಲಿ ಕೇಕ್ ಕಟ್ ಮಾಡಿ, ತಿಂದು ಸಂಭ್ರಮಿಸಿದ್ದಾರೆ.

ವಿಶೇಷ ಏನಂದ್ರೆ ಈ ವಿಡಿಯೋದಲ್ಲಿ ರಾಧಿಕಾ ಜೊತೆಗೆ ಅವರ ಸಾಕು ನಾಯಿ ಬಿಟ್ರೆ ಯಾರೂ ಇಲ್ಲ. ಇನ್ನು ರಾಧಿಕಾ ಅವರು ನಾಯಿಗೂ ಕೇಕ್ ತಿನ್ನಿಸಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. 

ರಾಧಿಕಾ ಅವರ ಬರ್ತಡೇ ವಿಡಿಯೋ ನೋಡಿ ನೆಟ್ಟಿಗರು, ಹುಟ್ಟುಹಬ್ಬದ ಶುಭಾಶಯಗಳು ಮೇಡಂ ಯಾಕೆ ಒಬ್ಬರೇ ಬರ್ತಡೇ ಆಚರಿಸ್ತಾ ಇದ್ದೀರಾ ಯಾರು ಬಂದಿಲ್ವಾ ಹಾಗೂ ನಾಯಿ ಜೊತೆಗೆ ಒಬ್ಬಳೇ ಯಾಕೆ ಹುಟ್ಟುಹಬ್ಬ ಮಾಡ್ಕೋತಿದ್ದೀರಾ ಅಂತ ಕಮೆಂಟ್ ಮಾಡಿದ್ದಾರೆ.

ಇನ್ನು 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್​ ನಟಿಯಾಗಿ ಮಿಂಚುತ್ತಿರುವವರು ರಾಧಿಕಾ ಕುಮಾರಸ್ವಾಮಿ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೃಜನ್ ಲೋಕೇಶ್ ಜೊತೆ 'ನೀಲಮೇಘಶ್ಯಾಮ' ಚಿತ್ರದ ಮೂಲಕ ತಮ್ಮ ಕರಿಯರ್ ಆರಂಭಿಸಿದರು. 

ನಂತರ ನಟ ವಿಜಯ್ ರಾಘವೇಂದ್ರ ಜೊತೆ ನಟಿಸಿದ 'ನಿನಗಾಗಿ' ಸಿನಿಮಾ ರಾಧಿಕಾರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ಜೊತೆಗೆ ತವರಿಗೆ ಬಾ ತಂಗಿ, ಪ್ರೇಮಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮಸಾಲಾ, ಆಟೋ ಶಂಕರ್, ಮಂಡ್ಯ, ಅನಾಥರು, ಸ್ವೀಟಿ ನನ್ನ ಜೋಡಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. 

ಸಿನಿಮಾ ನಿರ್ಮಾಣದ ವಿಷಯಕ್ಕೆ ಬಂದರೆ, ಯಶ್ ಹಾಗೂ ರಮ್ಯ ಅಭಿನಯದ 'ಲಕ್ಕಿ' ಹಾಗೂ ಆದಿತ್ಯ ಜೊತೆ ತಾವು ನಟಿಸಿದ್ದ 'ಸ್ವೀಟಿ ನನ್ನ ಜೋಡಿ' ಚಿತ್ರವನ್ನು ರಾಧಿಕಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರಗಳಲ್ಲಿ ಕೂಡಾ ರಾಧಿಕಾ ಹೆಸರು ಮಾಡಿದ್ದಾರೆ. 

Latest Videos

click me!