ತರುಣ್- ಸೋನಲ್ ಚರ್ಚ್ ವೆಡ್ಡಿಂಗ್ ಫೋಟೋ ವೈರಲ್; ಮಂಗಳೂರಿಗೆ ಕಾಲಿಡುತ್ತಿದ್ದಂತೆ ಹೇರ್‌ಸ್ಟೈಲ್‌ ಬದಲಾಯಿಸಿದ ನಿರ್ದೇಶಕ!

First Published | Sep 2, 2024, 10:02 AM IST

ಮಂಗಳೂರಿನ ಅಳಿಯ ತರುಣ್ ಸುಧೀರ್. ಹೇರ್‌ ಸ್ಟೈಲ್ ಚೇಂಜ್‌ ನೋಡಿ ಎಲ್ಲರೂ ಫುಲ್ ಖುಷ್.....

ಆಗಸ್ಟ್‌ 10 ಮತ್ತು 11ರಂದು ಬೆಂಗಳೂರಿನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ತರುಣ್ ಸುಧೀರ್ ಮತ್ತು ಸೋನಲ್ ಮಂಥೆರೋ.

ಅರಿಶಿಣ ಶಾಸ್ತ್ರ, ಮೆಹೇಂದಿ ಶಾಸ್ತ್ರ, ರಿಸೆಪ್ಶನ್ ಮತ್ತು ಮುಹೂರ್ತ....ಈ ನಾಲ್ಕು ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದು ಸ್ಟಾರ್ ನಟ-ನಟಿಯರು ಭಾಗಿಯಾಗಿದ್ದರು.

Tap to resize

ಬೆಂಗಳೂರಿನಲ್ಲಿ ಮದುವೆ ನಡೆದ ನಂತರ ಈ ಜೋಡಿ ಮತ್ತೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡಿದ್ದಾರೆ. 

ಸಿಂಡ್ರೆಲಾ ರೀತಿ ಡಿಸೈನರ್ ವೈಟ್ ಗೌನ್‌ನಲ್ಲಿ ಸೋನಲ್ ಮಿಂಚುತ್ತಿದ್ದಾರೆ, ವೈಟ್ ಆಂಡ್ ಬ್ಲಾಕ್ ಸೂಟ್‌ನಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿದ್ದಾರೆ. 

ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಚರ್ಚ್‌ಗೆ ಭೇಟಿ ನೀಡಿ ಅಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅದಾದ ಮೇಲೆ ಸಣ್ಣ ರಿಸೆಪ್ಶನ್ ಹಮ್ಮಿಕೊಂಡಿದ್ದರು.

ಮಂಗಳೂರಿನಲ್ಲಿ ಇರುವ ಕುಟುಂಬಸ್ಥರು ಮತ್ತು ಸ್ನೇಹಿತರಿಗಾಗಿ ಆರತಕ್ಷತೆ ಹಮ್ಮಿಕೊಂಡಿದ್ದರು. ಅಲ್ಲಿ ಕೂಡ ಸಾವಿರಾರೂ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. 

ಉಂಗುರ ಬದಲಾಯಿಸಿಕೊಂಡ ನಂತರ ಚರ್ಚ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹೊರ ಬಂದು ವೇದಿಕೆ ಮೇಲೆ ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. 

Latest Videos

click me!