ಒಬ್ರಿಗೊಬ್ರು ಸಂಬಂಧವೇ ಇಲ್ಲ… ನೋಡಿದ್ರೆ ಅವಳೀನಾ ಅನ್ನೋವಷ್ಟು ಹೋಲಿಕೆ ಇದೆ!

First Published | Nov 20, 2023, 4:11 PM IST

ಸೆಲೆಬ್ರಿಟಿಗಳ ಜಗತ್ತಿನಲ್ಲಿ, ಕೆಲವು ಪ್ರಸಿದ್ಧ ಮುಖಗಳ ನಡುವೆ ಗಮನಾರ್ಹ ಹೋಲಿಕೆ ಇದೆ ಎಂದು ಆಗಾಗ್ಗೆ ಹೇಳಲಾಗುತ್ತದೆ. ನಟರಿಂದ ಸಂಗೀತ ಉದ್ಯಮದವರೆಗೆ, ಮತ್ತು ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿಯೂ, ಒಂದೇ ತರ ಇರೋ ಸೆಲೆಬ್ರಿಟಿಗಳು ಸಾಕಷ್ಟಿದ್ದಾರೆ. ಈ ಸೆಲೆಬ್ರಿಟಿಗಳು ಒಂದೇ ರೀತಿಯ ಮುಖ  ಲಕ್ಷಣಗಳು, ಕೇಶವಿನ್ಯಾಸ ಅಥವಾ ಫ್ಯಾಷನ್ ಆಯ್ಕೆಗಳನ್ನು ಹಂಚಿಕೊಳ್ಳಬಹುದು. ಕೆಲವೊಮ್ಮೆ, ಈ ಹೋಲಿಕೆಗಳು ಸಂಪೂರ್ಣವಾಗಿ ಕಾಕತಾಳೀಯವಾಗಿರುತ್ತವೆ. ಕಾರಣಗಳು ಏನೇ ಇರಲಿ, ಒಂದೇ ರೀತಿ ಕಾಣುವ ಈ ಸೆಲೆಬ್ರಿಟಿಗಳು ಅಭಿಮಾನಿಗಳು ಮತ್ತು ಜನರನ್ನು ಆಕರ್ಷಿಸುತ್ತಲೇ ಇದ್ದಾರೆ. ಅಂತಹ ಕೆಲವು ಸೆಲೆಬ್ರಿಟೀಸ್ ಗಳ ಬಗ್ಗೆ ಇಲ್ಲಿದೆ ಮಾಹಿತಿ. 
 

ಅರುಣ್ ಹೆಗ್ಡೆ - ವಶಿಷ್ಠ ಸಿಂಹ (Arun Hegde - Vashistha Simha)
ಕನ್ನಡ ಮನೋರಂಜನಾ ಉದ್ಯಮದಲ್ಲಿ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಖ್ಯಾತರಾಗಿರುವ ಅರುಣ್ ಹೆಗ್ಡೆ ಮತ್ತು ವಸಿಷ್ಠ ಸಿಂಹ ಇಬ್ಬರು ತುಂಬಾನೆ ಹೋಲುತ್ತಾರೆ. ಅವರ ದೈಹಿಕ ಲಕ್ಷಣಗಳಿಂದ ಹಿಡಿದು ಗಟ್ಟಿಯಾದ ಧ್ವನಿ ಮತ್ತು ಕೇಶವಿನ್ಯಾಸ ಮತ್ತು ಗಡ್ಡದವರೆಗೆ,ಇಬ್ಬರು ಹೆಚ್ಚಿನ ಪ್ರಮಾಣದಲ್ಲಿ ಹೋಲಿಕೆ ಹೊಂದಿದ್ದಾರೆ.  

ರಾನವ್ ಗೌಡ - ಶ್ರೀಮುರಳಿ (Raanav Gowda - Sri Murali)
ಈ ಇಬ್ಬರು ನಟರಲ್ಲಿಯೂ ಸ್ಪಷ್ಟ ಹೋಲಿಕೆ ಇದೆ. ಕೆಲವೊಮ್ಮೆ ಇವರ ಲುಕ್ ಅಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದೂ ಇದೆ. ಅವರ ಒರಟಾದ ಲುಕ್, ಬಾಡಿ, ತಮ್ಮ ನಟನಾ ಪರಾಕ್ರಮ ಮತ್ತು ಅವರು ತಮ್ಮ ಪಾತ್ರಗಳಿಗೆ ತರುವ ಆಕರ್ಷಕ ಸ್ಕ್ರೀನ್ ಪ್ರೆಸೆನ್ಸ್(Screen Pesence) ಎರಡೂ ಸಹ ಅದ್ಭುತ ಹೋಲಿಕೆ ಹೊಂದಿದೆ. ರಾನವ್ ಕನ್ನಡ ಕಿರುತೆರೆಯಲ್ಲಿ (Kannada Small Screen) ಮಿಂಚುತ್ತಿದ್ದರೆ, ಶ್ರೀಮುರಲಿ ಹಿರಿ ತೆರೆಯಲ್ಲಿ ಮಿಂಚುತ್ತಿದ್ದಾರೆ. 

Tap to resize

ವಿಜಯ್ ಪ್ರಕಾಶ್ ಮತ್ತು ಶಾನ್ (Vijay Prakash and Shaan)
ಭಾರತೀಯ ಸಂಗೀತ ಲೋಕದ ಇಬ್ಬರು ಪ್ರಸಿದ್ಧ ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಶಾನ್ ತಮ್ಮ ಗಮನಾರ್ಹ ಹೋಲಿಕೆಗಾಗಿ ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಇಬ್ಬರೂ ಆಕರ್ಷಕ ನಗು, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಒಂದು ಆಕರ್ಷಕ ವರ್ಚಸ್ಸನ್ನು ಹೊಂದಿದ್ದಾರೆ, ಅದು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಪ್ರಿಯವಾಗಿದೆ. ಜೊತೆಗೆ ಇಬ್ಬರ ಹಾಡುಗಳು ಸಹ ಜನಪ್ರಿಯತೆ ಗಳಿಸಿವೆ. 

ಚೈತ್ರಾ ಆಚಾರ್ - ಆಲಿಯಾ ಭಟ್ (Chaitra Achar - Alia Bhatt) 
ಟಾಬಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಸುಂದರಿ ಚ್ರೈತ್ರಾ ಆಚಾರ್, ಸೈಡ್ ಫೇಸ್ ನೋಡಿದರೆ ಆಲಿಯಾ ಭಟ್ ಎಂದೇ ಹೇಳಬಹುದು ಅಷ್ಟೊಂದು ಹೋಲಿಕೆಗಳಿವೆ. ಅಭಿಮಾನಿಗಳಂತೂ ಇವರನ್ನು ಕನ್ನಡದ ಆಲಿಯಾ ಭಟ್ ಎಂದು ಈಗಾಗಲೇ ಕರೆದಾಗಿದೆ. 

ಸಾಧು ಕೋಕಿಲ - ಜಾನಿ ಲಿವರ್ (Sadhu Kokila - Johnny Lever)
ಇಬ್ಬರನ್ನ ಜೊತೆಯಾಗಿ ನೋಡಿದ್ರೆ, ಅಣ್ಣ ತಮ್ಮನೇ ಇರಬಹುದು ಎಂದು ಹೇಳಬಹುದು. ಅಷ್ಟೊಂದು ಹೋಲಿಕೆ ಇದೆ ಈ ನಟರಲ್ಲಿ. ಅವರ ದೈಹಿಕ ಹೋಲಿಕೆಗಳು, ಉದಾಹರಣೆಗೆ ಅವರ ಅನಿಮೇಟೆಡ್ ಮುಖಭಾವಗಳು ಮತ್ತು ಉತ್ಸಾಹಭರಿತ ವ್ಯಕ್ತಿತ್ವಗಳು ಇಬ್ಬರ ನಡುವಿನ ಹೋಲಿಕೆಗಳಿಗೆ ಕಾರಣವಾಗಿವೆ. ಜಾನಿ ಲಿವರ್ ಹಿಂದಿ ಸಿನಿಮಾ ಲೋಕದಲ್ಲಿ ಮಿಂಚಿದ್ರೆ, ಸಾಧು ಕೋಕಿಲ ಕನ್ನಡ ಸಿನಿ ಲೋಕದಲ್ಲಿ ಮಿಂಚುತ್ತಿದ್ದಾರೆ. ಇಬ್ಬರೂ ಸಹ ತಮ್ಮ ಹಾಸ್ಯದ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ. 

ಅರವಿಂದ್ ಕೆಪಿ- ಸುನೀಲ್ ರಾವ್ (Aravind Kp - Sunil Rao)
ನಟ ಸುನಿಲ್ ರಾವ್ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಸ್ಪರ್ಧಿ ಅರವಿಂದ್ ಕೆಪಿ ತುಂಬಾನೆ ಸಾಮ್ಯತೆ ಹೊಂದಿದ್ದಾರೆ. ಮಂಗಳೂರು ಮೂಲದ ಬೈಕ್ ಸವಾರ-ಹುಡುಗ ಅರವಿಂದ್ ಕೆ.ಪಿ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಪ್ರವೇಶಿಸಿದಾಗ ಜನರಿಗೆ ಇದು ಸುನಿಲ್ ರಾವ್ ಎಂದೇ ಅನಿಸಿತ್ತು, ಅಷ್ಟೊಂದು ಹೋಲಿಕೆ ಇದೆ.. ಇಬ್ಬರೂ ನೋಟದ ವಿಷಯದಲ್ಲಿ ಗಮನಾರ್ಹ ಹೋಲಿಕೆಯನ್ನು ಹೊಂದಿದ್ದಾರೆ. 

ಕಾವ್ಯಾ ಗೌಡ - ರಾಧಿಕಾ ಪಂಡಿತ್ (Kavya Gowda - Radhika Pandith)
ಕಿರುತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ ಮತ್ತು ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಿಮಿಲರ್ ಹೋಲಿಕೆ ಹೊಂದಿದ್ದಾರೆ. ಅವರ ಬಾದಾಮಿ ಆಕಾರದ ಕಣ್ಣುಗಳು, ಹೊಳೆಯುವ ನಗು ಮತ್ತು ಇಬ್ಬರ ಸ್ಕ್ರೀನ್ ಪ್ರೆಸೆನ್ಸ್ ಎರಡೂ ಒಂದೇ ರೀತಿ ಎಂದು ಜನರಿಗೂ ಅನಿಸಿದೆ. ಇತ್ತೀಚೆಗಷ್ಟೇ ಕಾವ್ಯಾ ಗೌಡ ತಮ್ಮ ಫೆವರಿಟ್ ನಾಯಕಿ ರಾಧಿಕಾ ಪಂಡಿತ್ ಜೊತೆ ಫೋಟೋ ಶೇರ್ ಮಾಡಿದ್ದರು. ಇಬ್ಬರನ್ನು ನೋಡಿ ಜನ ಟ್ವಿನ್ಸ್ ಎಂದು ಸಹ ಹೇಳಿದ್ದರು. 

ಅಭಿಷೇಕ್ ಶ್ರೀಕಾಂತ್ - ಸೂರ್ಯ (Abhishek Shrikanth - Suriya)
ಲಕ್ಷಣ್ ಸೀರಿಯಲ್ ನ ಮೌರ್ಯ ಅಲಿಯಾಸ್ ಅಭಿಷೇಕ್ ಶ್ರೀಕಾಂತ್ ಅವರನ್ನು ಹೆಚ್ಚಾಗಿ ತಮಿಳು ಸ್ಟಾರ್ ನಟ ಸೂರ್ಯ ಅವರೊಂದಿಗೆ ಹೋಲಿಸಲಾಗುತ್ತದೆ. ಅವರ ತೀಕ್ಷ್ಣವಾದ ಮತ್ತು ಅಭಿವ್ಯಕ್ತಿಶೀಲ ಕಣ್ಣುಗಳು, ಆಕರ್ಷಕ ನಗು ಒಂದೇ ರೀತಿಯಾಗಿದೆ ಎನ್ನುತ್ತಾರೆ ಜನ. ಈ ಹೋಲಿಕೆ ಅಭಿಮಾನಿಗಳು ಮತ್ತು ಮಾಧ್ಯಮಗಳ ನಡುವೆ ಸಂಭಾಷಣೆಯ ವಿಷಯವಾಗಿದೆ. 

Latest Videos

click me!