ನಿಶ್ಚಿತಾರ್ಥದ ಸುಂದರ ಫೋಟೋ ಶೇರ್ ಮಾಡಿ ಹರಿಪ್ರಿಯಾ ಹೇಳಿದ್ದೇನು?

Published : Dec 09, 2022, 12:35 PM IST

ನಟಿ ಹರಿಪ್ರಿಯಾ ನಿಶ್ಚಿತಾರ್ಥದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸುಂದರ ಫೋಟೋಗಳು ವೈರಲ್ ಆಗಿವೆ. 

PREV
16
ನಿಶ್ಚಿತಾರ್ಥದ ಸುಂದರ ಫೋಟೋ ಶೇರ್ ಮಾಡಿ ಹರಿಪ್ರಿಯಾ ಹೇಳಿದ್ದೇನು?

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟಿ ವಸಿಷ್ಠ ಸಿಂಹ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದರು. ಇಬ್ಬರ ಪ್ರೀತಿ ವಿಚಾರ ಬಹಿರಂಗ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.

26

ಅಂದಹಾಗೆ ಇಬ್ಬರೂ ಎಲ್ಲಿಯೂ ಪ್ರೀತಿಸುತ್ತಿದ್ದ ಬಗ್ಗೆ ಸುಳಿವು ನೀಡಿರದ ಹರಿಪ್ರಿಯಾ - ವಸಿಷ್ಠ ಜೋಡಿ ದಿಢೀರ್ ಎಂಗೇಜ್ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಅಂದಹಾಗೆ ಇಬ್ಬರ ನಡುವೆ ಪ್ರೀತಿ ಪ್ರಾಂಭವಾಗಿ ಒಂದು ವರ್ಷವಾಗಿದೆ. ವರ್ಷದಿಂದ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಯಲ್ಲಿದ್ದಾರೆ. ಈ ಬಗ್ಗೆ ಇತ್ತೀಚಿಗಷ್ಟೆ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.

36

ಇದೀಗ ಹರಿಪ್ರಿಯಾ ಒಂದಿಷ್ಟು ಪೋಟೋಗಳನ್ನು ಶೇರ್ ಮಾಡಿ ಸದ್ಯದಲ್ಲೇ ಎಲ್ಲರನ್ನೂ ಭೇಟಿಯಾಗುತ್ತೀವಿ ಎಂದು ಹೇಳಿದ್ದಾರೆ. ನಿಶ್ಚಿತಾರ್ಥವನ್ನು ವೈಯಕ್ತಿಕವಾಗಿ ನಾವೇ ಅಧಿಕೃತ ಗೊಳಿಸಳು ಬಯಸಿದ್ವಿ ಆದರೆ ಎಲ್ಲಾ ಕಡೆ ಸುದ್ದಿಯಾಗಿದೆ ಎಂದು ಹೇಳಿದ್ದಾರೆ.  

46

'ಆದ್ರೂ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ವೈಯಕ್ತಿಕವಾಗಿ ನಾವೇ ಇದನ್ನು ಅಧಿಕೃತಗೊಳಿಸಲು ಬಯಸುತ್ತೇವೆ. ಹೌದು ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ.  ನಿಮ್ಮ ಪ್ರೀತಿಯ ಶುಭಾಶಯಗಳಿಗೆ ನಮ್ಮ ಹೃದಯದ ನಿಮಗೆ ಧನ್ಯವಾದಗಳು. ನಾವು ನಮ್ಮ ನಿಶ್ಚಿತಾರ್ಥವನ್ನು ತೀರ ಖಾಸಗಿಯಾಗಿ ಇಡಬೇಕೆಂದು ಬಯಸಿದ್ದೇವೆ. ಹಾಗಾಗಿ ನಾನು ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡೆವು' ಎಂದು ಹೇಳಿದ್ದಾರೆ.

56

'ನಮ್ಮ ಕುಟುಂಬದವರು ಖಾಸಗಿಯಾಗಿ ಮಾಡಿದರು ಹಾಗಾಗಿ ನಿಮಗೆ ಆಹ್ವಾನಿಸಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ. ನಾವು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇವೆ. ನಮ್ಮ ಪ್ರೀತಿ ವಿಚಾರವನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಕಾಯುತ್ತಿದ್ದೀವಿ. ನೀವು ನಮಗೆ ಸಮಯ ನೀಡುತ್ತೀರಿ ಎಂದ ಭಾವಿಸಿದ್ದೀವಿ' ಎಂದು ಹೇಳಿದರು. 

66

'ನಾವು ನಿಮಗೆ ಭರವಸೆ ನೀಡಿದಂತೆ ನಮ್ಮ ಸಂತಸದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದ ಬೇಕು' ಎಂದು ಹೇಳಿದ್ದಾರೆ. ಸದ್ಯದಲ್ಲೇ ಇಬ್ಬರೂ ಪ್ರೆಸ್ ಮೀಟ್ ಮಾಡಿ ತಮ್ಮ ಪ್ರೀತಿ ವಿಚಾರವನ್ನು ವಿವರವಾಗಿ ಹೇಳುವ ಸಾಧ್ಯತೆ ಇದೆ. 
 

Read more Photos on
click me!

Recommended Stories